For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಲಾಭದಲ್ಲಿ ಶೇರ್ ಕೇಳಿದ್ರಾ ದರ್ಶನ್? ಡಿ ಬಾಸ್ ಹೇಳಿದ್ದೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ದರ್ಶನ್ ಇಂದು ಮೈಸೂರಿನಲ್ಲಿ ಸ್ನೇಹಿತರ ಜೊತೆ ಪತ್ರಿಕಾಗೋಷ್ಠಿ ನಡೆಸಿದರು. ಈ ಪ್ರಕರಣದಲ್ಲಿ ತನ್ನ ಸ್ನೇಹಿತರ ತಪ್ಪಿಲ್ಲ, ಸ್ನೇಹಿತರ ಕಡೆಯಿಂದ ಎಲ್ಲಾ ಸ್ಪಷ್ಟವಾಗಿದೆ. ಆದರೆ ಉಮಾಪತಿ ಹೆಸರು ಎಲ್ಲಾ ಕಡೆಯಿಂದ ಕೇಳಿಬರುತ್ತಿದೆ ಎಂದು ದರ್ಶನ್ ಹೇಳಿದರು.

  ಇದಕ್ಕೆ ಉಮಾಪತಿ ಅವರೇ ಸ್ಪಷ್ಟನೆ ನೀಡಬೇಕು ಎಂದು ದರ್ಶನ್ ಹೇಳಿದ್ರು. ಈ ಪ್ರಕರಣಲ್ಲಿ ರಾಬರ್ಟ್ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದ್ದಂತೆ, ರಾಬರ್ಟ್ ಸೂಪರ್ ಸಕ್ಸಸ್ ಬಳಿಕ ಉಮಾಪತಿ ಮತ್ತು ದರ್ಶನ್ ನಡುವಿನ ಸ್ನೇಹ ಸಂಬಂಧ ಮುರಿದುಬಿದ್ದಿದಿಯಾ ಎನ್ನುವ ಅನುಮಾನ ಕೇಳಿಬರುತ್ತಿದೆ. ಈ ವಿಚಾರವಾಗಿಯೂ ದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಬ್ಬರ ನಡುವೆ ಸ್ನೇಹ ಸಂಬಂಧ ಉತ್ತಮವಾಗಿಯೇ ಇದೆ, ಉಮಾಪತಿ ಮತ್ತು ತನ್ನ ನಡುವೆ ಯಾವುದೇ ಕಿತ್ತಾಟ ಆಗಿಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದ್ರು.

  ರಾಬರ್ಟ್ ಸಿನಿಮಾದ ಚಿತ್ರೀಕರಣ ವೇಳೆ ನಡೆದ ಕಿತ್ತಾಟದ ಬಗ್ಗೆ ಮಾತನಾಡಿದ ದರ್ಶನ್, ಸಿನಿಮಾ ಸಮಯದಲ್ಲಿ ನಡೆದುದ್ದೆಲ್ಲ ಅಲ್ಲಿಗೆ ಮುಗಿಯಿತು. ಅದು ಸಿನಿಮಾಗೆ ಮಾತ್ರ ಸೀಮಿತ. ಅದನ್ನು ಮತ್ತೆ ಮುಂದುವರೆಸಲ್ಲ ಎಂದರು.

  ಇನ್ನು ರಾಬರ್ಟ್ ಸಿನಿಮಾ ಸೂಪರ್ ಸಕ್ಸಸ್ ನ ಬಳಿಕ ದರ್ಶನ್, ನಿರ್ಮಾಪಕ ಉಮಾಪತಿ ಬಳಿ ಶೇರ್ ಕೇಳಿದ್ದಾರೆ, ಹಾಗಾಗಿ ಇಬ್ಬರ ನಡುವೆ ವೈಮನಸ್ಸು ಶುರುವಾಗಿ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ದರ್ಶನ್ ಅವರೇ ಬಹಿರಂಗ ಪಡಿಸಿ, "ಸಿನಿಮಾಗೆ ಸಂಬಂಧ ಪಡದೆ ಇರುವ ವ್ಯಕ್ತಿಗಳಿಂದ ಇಂಥ ಮಾತುಗಳು ಕೇಳಿಬರುತ್ತಿದೆ" ಎಂದು ಹೇಳಿದ್ರು.

  "ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ನಾನು ಯಾವಾಗಲು ಬಯಸುತ್ತೇನೆ. ಹಾಗಿರುವಾಗ ನಾನ್ಯಾಕೆ ಶೇರ್ ಕೇಳಲಿ. ನಾನು ಏನು ಪಡೆದಿದ್ದೇನೋ ಅದಷ್ಟೆ ನನಗೆ ಸಾಕು" ಎಂದು ಹೇಳುವ ಮೂಲಕ ಲಾಭದಲ್ಲಿ ಶೇರ್ ಕೇಳುತ್ತಿದ್ದಾರೆ ಎನ್ನುವ ಆರೋಪಕ್ಕೂ ಇದೇ ಸಮಯದಲ್ಲಿ ತೆರೆ ಎಳೆದ್ರು.

  ದಾಸನ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಮಾಡಲು ಮುಂದಾಗಿರುವವರು ಯಾರು ಎನ್ನುವುದು ಈಗ ಯಕ್ಷ ಪ್ರಶ್ನೆ ಆಗಿದೆ. ಸದ್ಯ ಎಲ್ಲಾ ಕಡೆಯಿಂದ ವಿಚಾರಿಸಿದಾಗ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದೆ. ಇದನ್ನೆಲ್ಲ ನಿಜಕ್ಕೂ ಉಮಾಪತಿ ಮಾಡಿಸಿದ್ರಾ ಅವರ ಉಮಾಪತಿ ಹೆಸರಲ್ಲಿ ಬೇರೆ ಇನ್ಯಾರು ಮಾಡಿಸುತ್ತಿದ್ದಾರಾ ಎನ್ನುವುದು ತನಿಖೆ ಮೂಲಕ ಬಹಿರಂಗವಾಗಬೇಕಿದೆ.

  ಎಲ್ಲಾ ಕಡೆಯಿಂದನೂ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದ್ದರು, ದರ್ಶನ್ ಅವರ ಬಗ್ಗೆ ಆರೋಪ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇವತ್ತು ನಡೆದ ಪ್ರೆಸ್ ಮೀಟ್ ನಲ್ಲೂ ಉಮಾಪತಿ ಗೈರಾಗಿದ್ದರು. ಈ ಬಗ್ಗೆ ಮಾತನಾಡಿದ ದರ್ಶನ್ ನಿನ್ನೆ ರಾತ್ರಿವರೆಗೂ ಜೊತೆಯಲ್ಲೇ ಇದ್ದರೂ, ಅವರು ಕೂಡ ವಿಚಾರಿಸುತ್ತಿದ್ದಾರೆ. ಸ್ವಲ್ಪ ಟೈಂ ಕೊಡಿ ಎಂದು ಹೇಳಿದ್ದಾರೆ ಅಂತ ದರ್ಶನ್ ಉಮಾಪತಿ ಬಗ್ಗೆ ಮಾತನಾಡಿದ್ರು. ಎಲ್ಲವನ್ನು ತಂದಿಟ್ಟು ತಮಾಷೆ ನೋಡುತ್ತಿರುವವರು ಯಾರೆ ಆದರೂ ಸುಮ್ಮನೆ ಬಿಡಲ್ಲ ಎಂದು ದರ್ಶನ್ ಹೇಳಿದ್ದಾರೆ.

  English summary
  Is Actor Darshan asked Shares in Roberrt Movie Collections? Here is What Actor Says

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X