''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!

Recommended Video

Lok Sabha Elections 2019: ನಟ ದರ್ಶನ್ ನರೇಂದ್ರ ಮೋದಿಯವರ ಅಭಿಮಾನಿಯೇ? | FILMIBEAT KANNADA

ಚುನಾವಣೆ ದಿನಾಂಕ ಹತ್ತಿರ ಆಗುತ್ತಿದೆ. ಅಬ್ಬರ ಪ್ರಚಾರಗಳು ನಡೆಯುತ್ತಿದೆ. ಇಡೀ ಕರ್ನಾಟಕದಲ್ಲಿಯೇ ಮಂಡ್ಯ ಲೋಕಸಭಾ ಕ್ಷೇತ್ರ ಎಲ್ಲರ ಕೇಂದ್ರ ಬಿಂದುವಾಗಿದೆ.

ನಟಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿದ್ದಾರೆ. ನಟ ದರ್ಶನ್ ಹಾಗೂ ಯಶ್ ಅವರ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಇದ್ದ ದರ್ಶನ್ ಅಲ್ಲಿಗೆ ಕೊಂಚ ಬಿಡುವು ನೀಡಿ ಇಂದು (ಸೋಮವಾರ) ಬೆಂಗಳೂರಿಗೆ ಬಂದಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಗೆ ''ನೀವು ಮೋದಿ ಅಭಿಮಾನಿಯೇ..'' ಎಂಬ ಪ್ರಶ್ನೆ ಕೂಡ ಕೇಳಲಾಯಿತು. ಮುಂದೆ ಓದಿ...

ಪಿಸಿ ಮೋಹನ್ ಪರ ಪ್ರಚಾರ

ಪಿಸಿ ಮೋಹನ್ ಪರ ಪ್ರಚಾರ

ನಟ ದರ್ಶನ್ ಬೆಂಗಳೂರಿನ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ಇಂದು (ಸೋಮವಾರ) ಪ್ರಚಾರ ಮಾಡಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ದರ್ಶನ್ ಕೂಡ ಮೋದಿ ಫ್ಯಾನ್ ಎಂದು ಮಾತನಾಡಿಕೊಳ್ಳುತ್ತಿದ್ದರು. ಅದೇ ಪ್ರಶ್ನೆಯನ್ನು ಸುದ್ದಿ ವಾಹಿನಿಯ ವರದಿಗಾರ್ತಿಯೊಬಬ್ಬರು ದರ್ಶನ್ ಮುಂದೆ ಇಟ್ಟರು.

''ನೀವು ಮೋದಿ ಫ್ಯಾನಾ..?

''ನೀವು ಮೋದಿ ಫ್ಯಾನಾ..?

''ನೀವು ಮೋದಿ ಫ್ಯಾನ್ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಹೌದೆ..?'' ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ದರ್ಶನ್ ''ನಾನು ಯಾರ ಫ್ಯಾನ್ ಅಲ್ಲ. ನನಗೆ ಗೊತ್ತಿರುವವರು, ಪರಿಚಯ ಇರುವವರು, ನಾನು ಇಷ್ಟ ಪಡುವವರಿಗಾಗಿ ಪ್ರಚಾರ ಮಾಡುತ್ತೇನೆ ಅಷ್ಟೇ'' ಎಂದು ಪ್ರತಿಕ್ರಿಯೆ ನೀಡಿದರು.

ಪಕ್ಷ ಮುಖ್ಯ ಅಲ್ಲ...ವ್ಯಕ್ತಿ ಮುಖ್ಯ

ಪಕ್ಷ ಮುಖ್ಯ ಅಲ್ಲ...ವ್ಯಕ್ತಿ ಮುಖ್ಯ

ಇದೇ ವೇಳೆ ಮಾತನಾಡಿದ ದರ್ಶನ್ ತಮಗೆ ಪಕ್ಷ ಮುಖ್ಯ ಅಲ್ಲ...ವ್ಯಕ್ತಿ ಮುಖ್ಯ ಎನ್ನುವುದನ್ನು ಸ್ಪಷ್ಟ ಪಡಿಸಿದರು. ''ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ನನಗೆ ತುಂಬ ಹಳೆಯ ಸ್ನೇಹಿತರು, ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ. ಜನರಿಗೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಪರ ಪ್ರಚಾರಕ್ಕೆ ಬಂದೆ'' ಎಂದರು ದರ್ಶನ್

ಎಲ್ಲ ಪಕ್ಷಕ್ಕೂ ಪ್ರಚಾರ ಮಾಡಿದ್ದಾರೆ

ಎಲ್ಲ ಪಕ್ಷಕ್ಕೂ ಪ್ರಚಾರ ಮಾಡಿದ್ದಾರೆ

ಈ ಹಿಂದೆ ಸ್ವತಃ ದರ್ಶನ್ ಅವರೇ ಹಲವು ಸಲ ಹೇಳಿರುವಂತೆ 'ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡಲ್ಲ. ನಮಗೆ ಬೇಕಾದ ಸ್ನೇಹಿತರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ' ಎಂದು ಹೇಳಿದ್ದರು. ಅದರಂತೆ ಸಿದ್ದರಾಮಯ್ಯ, ಸಂದೇಶ್, ಅಂಬರೀಶ್ ಹೀಗೆ ಕೆಲವರು ಪರ ದರ್ಶನ್ ಪ್ರಚಾರ ಮಾಡ್ತಿದ್ರು. ಮೋಹನ್ ಅವರ ಜೊತೆ ದರ್ಶನ್ ಸ್ನೇಹ ಚೆನ್ನಾಗಿದ್ದು, ಇದೇ ಕಾರಣಕ್ಕಾಗಿ ದರ್ಶನ್ ಬೆಂಗಳೂರಿನಲ್ಲೂ ಪ್ರಚಾರ ಮಾಡಿದ್ದಾರೆ.

More from Filmibeat

English summary
What did kannada actor Darshan said when media person asked him ''Are you fan of prime minister Narendra Modi ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X