ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ? ಏನಿದು ದಿಢೀರನೇ ಹೊಸ ಸುದ್ದಿ?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ ಮೂರು ತಿಂಗಳ ಮೇಲಾಗಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಹಿರಿಯ ವಕೀಲ ಸಿ. ವಿ. ನಾಗೇಶ್ ವಾದ ಮಂಡಿಸುತ್ತಿದ್ದಾರೆ. ಈ ಬಾರಿ ದರ್ಶನ್‌ಗೆ ಜಾಮೀನು ಸಿಗುವುದು ಪಕ್ಕಾ ಅನ್ನೋ ಮಾತು ಅವರ ಅಭಿಮಾನಿ ವಲಯದಲ್ಲಿ ಓಡಾಡುತ್ತಿದೆ.

ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಸಂಬಂಧ ಬಳ್ಳಾರಿ ಜೈಲ್‌ಗೆ ವೈದ್ಯರು ಆಗಮಿಸಿ ಪರೀಕ್ಷೆ ಮಾಡಿ ಸ್ಕ್ಯಾನಿಂಗ್‌ಗೆ ಸೂಚಿಸಿದ್ದಾರೆ. ಆದರೆ, ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆಯನ್ನು ಪಡೆಯಲು ಹಿಂದೇಟು ಹಾಕಿದ್ದಾರೆ ಅಂತ ವರದಿಗಳಾಗುತ್ತಿವೆ.

Is Darshan has confessed that Renukaswamy spirit visits him in his dreams in Bellary Jail

ಇಷ್ಟೆಲ್ಲಾ ನಡೆಯುತ್ತಿರುವಾಗಲೇ ತೆಲುಗು ಮಾಧ್ಯಮಗಳಿಗೆ ಹೊಸದೊಂದು ಸುದ್ದಿ ಸಿಕ್ಕಿದೆ. ಅವರಿಗೆ ಅದೆಲ್ಲಿಂದ ಇಂತಹ ಸುದ್ದಿ ಸಿಕ್ಕಿತೋ ಗೊತ್ತಿಲ್ಲ. ಆದರೆ, ದರ್ಶನ್‌ಗೆ ಮೃತ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ ಅಂತ ಸುದ್ದಿ ಮಾಡಿದ್ದಾರೆ. ಸದ್ಯ ಇದೇ ಸುದ್ದಿ ಚರ್ಚೆಯಲ್ಲಿದೆ. ಅಸಲಿಗೆ ತೆಲುಗು ಮಾಧ್ಯಮಗಳಲ್ಲಿ ಮಾಡಿರುವ ಸುದ್ದಿ ಏನು? ನಿಜಕ್ಕೂ ದರ್ಶನ್‌ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆಯೇ? ಸುದ್ದಿಯಲ್ಲಿ ಏನಿದೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.

ದರ್ಶನ್‌ಗೆ ನಿರಂತರವಾಗಿ ರೇಣುಕಾಸ್ವಾಮಿ ಆತ್ಮ ಬಂದು ಕಾಡುತ್ತಿದೆಯಂತೆ. ಈ ವಿಷಯವನ್ನು ಸ್ವತ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿ ಅಧಿಕಾರಿಗಳೊಂದಿಗೆ ಹೇಳಿಕೊಂಡಿದ್ದಾರೆ ಅನ್ನೋ ಸುದ್ದಿ ಮಾಡಿವೆ. ರೇಣುಕಾಸ್ವಾಮಿ ಆತ್ಮ ಪ್ರತಿದಿನ ದರ್ಶನ್ ಕನಸಿನಲ್ಲಿ ಬರುತ್ತಿದ್ದಾರಂತೆ. ಇದರಿಂದ ದರ್ಶನ್‌ಗೆ ನಿದ್ದೆ ಬರುತ್ತಿಲ್ಲ. ರೇಣುಕಾಸ್ವಾಮಿಯ ಕನಸಿನಿಂದ ಒತ್ತಡಕ್ಕೆ ಒಳಗಾಗಿದ್ದಾಗಿ ದರ್ಶನ್ ಹೇಳಿಕೊಂಡಿದ್ದಾರೆ ಎಂದು ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

Is Darshan has confessed that Renukaswamy spirit visits him in his dreams in Bellary Jail

ಈ ವರದಿಗಳಲ್ಲಿ ದರ್ಶನ್ ಹೆಚ್ಚು ದಿನ ಜೈಲಿನಲ್ಲಿಯೇ ಇದ್ದಿದ್ದರಿಂದ ಮಾನಸಿಕವಾಗಿ ಬಳಲಿದ್ದಾರೆ. ಇದರಿಂದ ದರ್ಶನ್‌ ಕನಸಿನಲ್ಲಿ ರೇಣುಕಾಸ್ವಾಮಿ ಕಾಣಿಸುತ್ತಿರಬಹುದು. ಇದು ಸೈಕಾಲಾಜಿಕಲ್ ಎಫೆಕ್ಟ್ ಅಂತಾನೂ ಸುದ್ದಿ ಮಾಡಿವೆ. ಅಷ್ಟೇ ಅಲ್ಲದೆ ಜನರು ರೇಣುಕಾಸ್ವಾಮಿ ಆತ್ಮ ಇರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆಂದು ವರದಿ ಮಾಡಲಾಗಿದೆ.

ತೆಲುಗು ಮಾಧ್ಯಮಗಳು ದರ್ಶನ್‌ ಬಗ್ಗೆ ಇಂತಹದ್ದೊಂದು ಸುದ್ದಿಯನ್ನು ಹರಿದಾಡುತ್ತಿದೆ. ಪ್ರಮುಖ ತೆಲುಗು ವೆಬ್‌ ಸೈಟ್‌ಗಳಲ್ಲಿಯೇ ದರ್ಶನ್‌ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ ಎಂದು ಸುದ್ದಿಯನ್ನು ಪಬ್ಲಿಶ್ ಮಾಡಲಾಗಿದೆ. ಕೆಲವು ಮಾಧ್ಯಮಗಳು ಬಳ್ಳಾರಿಯ ಜೈಲು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆಂದು ಸುದ್ದಿ ಮಾಡಿವೆ. ಅಸಲಿಗೆ ಇದು ನಿಜವೇ? ದರ್ಶನ್‌ಗೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆಯೇ? ದರ್ಶನ್ ಕನಸಿನಲ್ಲಿ ರೇಣುಕಾಸ್ವಾಮಿ ಆತ್ಮ ಬಂದು ನಿದ್ದೆ ಕೆಡಿಸುತ್ತಿದೆಯೇ? ಸದ್ಯಕ್ಕೆ ಕನ್ನಡದ ಮಾಧ್ಯಮಗಳಿಗೆ ಮಾಹಿತಿ ಇದ್ದಂತೆ ಇಲ್ಲ.

ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೈ ಪ್ರೊಫೈಲ್ ಕೇಸ್ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕೆ ಪೊಲೀಸರು ಈ ಕೇಸ್‌ ಅನ್ನು ಗಂಭೀರವಾಗಿ ಪರಿಗಣಿಸಿ, ಜಾರ್ಜ್‌ಶೀಟ್ ಅನ್ನು ಫೈಲ್ ಮಾಡಿದೆ. ಇನ್ನೊಂದು ಕಡೆ ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಹಿರಿಯ ವಕೀಲರಾದ ಸಿ ವಿ ನಾಗೇಶ್ ನ್ಯಾಯಾಧೀಶರ ಮುಂದೆ ಪ್ರಬಲವಾಗಿ ವಾದ ಮಂಡಿಸುತ್ತಿದ್ದಾರೆ. ಈಗ ದರ್ಶನ್ ಬೇಲ್ ಸಿಗುತ್ತಾ? ಇಲ್ವಾ? ಅನ್ನೋ ಕುತೂಹಲವಿದೆ. ಈ ಮಧ್ಯೆ ರೇಣುಕಾಸ್ವಾಮಿ ಆತ್ಮ ಕಾಡುತ್ತಿರೋದು ನಿಜವೇ? ಅನ್ನೋದನ್ನು ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಕೂಡ ಇದೆ.

More from Filmibeat

English summary
Is Darshan has confessed that Renukaswamy spirit visits him in his dreams in Bellary Jail?
Read more about: darshan jail filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X