ದರ್ಶನ್ ಫಾಲೋ ಮಾಡದಿದ್ದರೂ ಕಿಚ್ಚನನ್ನು ಫಾಲೋ ಮಾಡ್ತಿದ್ದ ವಿನೀಶ್.. ಆದರೆ..

By ಫಿಲ್ಮಿಬೀಟ್ ಡೆಸ್ಕ್

ನಟ ಸುದೀಪ್ ಹಾಗೂ ನಟ ದರ್ಶನ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಕಾರಣಾಂತರಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಅವರಿಬ್ಬರು ಮತ್ತೆ ಒಂದಾಗಬೇಕು ಎಂದು ಕೆಲವರು ಕಾದು ಕಾದು ಸುಮ್ಮನಾದರು.

ನಾನು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಟ್ವೀಟ್ ಮಾಡಿ ತಿಳಿಸಿದ್ದರು. ಸ್ನೇಹ ಕಡಿದುಕೊಂಡಿದ್ದನ್ನು ದರ್ಶನ್ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದು ಅಚ್ಚರಿ ತಂದಿದೆ. ಬಳಿಕ ಅದಕ್ಕೆ ಕಾರಣಕ್ಕೆ ಕೂಡ ಕೊಟ್ಟಿದ್ದರು. ಆದರೆ ನಿಜವಾದ ಕಾರಣ ಬೇರೆನೇ ಇದೆ, ಅದು ಏನು ಗೊತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಲೇ ಇದ್ದಾರೆ.

Is Darshan Son Vinish Unfollow Kichcha Sudeep in Instagram

ದರ್ಶನ್ ಹಾಗೂ ಸುದೀಪ್ ಕುಟುಂಬಗಳ ನಡುವೆಯೂ ಕೂಡ ಒಳ್ಳೆ ಬಾಂಧವ್ಯ ಇತ್ತು. ಕೆಲ ವರ್ಷಗಳ ಹಿಂದೆ ದರ್ಶನ್ ಪುತ್ರ ವಿನೀಶ್‌ನನ್ನು ಸುದೀಪ್ ಹೆಗಲಮೇಲೆ ಕೂರಿಸಿಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೊ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೆಲ್ಲದರ ನಡುವೆ ಕೆಲವೇ ಗಂಟೆಗಳ ಹಿಂದೆ ಸುದೀಪ್ ಅವರನ್ನು ವಿನೀಶ್ ಫಾಲೋ ಮಾಡುತ್ತಿದ್ದರು. ಆದರೆ ಈಗ ಇಲ್ಲ ಎಂದು ಚರ್ಚೆ ನಡೀತಿದೆ.

ಸೋಶಿಯಲ್ ಮೀಡಿಯಾದ ಖಾತೆಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುವುದು ಗೊತ್ತೇಯಿದೆ. ಅದರಲ್ಲೂ ಸೆಲೆಬ್ರೆಟಿಗಳು ಯಾರನ್ನು ಫಾಲೋ ಮಾಡುತ್ತಾರೆ ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ದರ್ಶನ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಹೇಳಿದ ಮೇಲೂ ಬಹಳ ದಿನಗಳ ಕಾಲ ಸುದೀಪ್ ಟ್ವಿಟ್ಟರ್‌ನಲ್ಲಿ ದರ್ಶನ್ ಅವರನ್ನು ಫಾಲೋ ಮಾಡಿದ್ದರು.

ಇನ್ನು ದರ್ಶನ್ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಜನರನ್ನು ಫಾಲೋ ಮಾಡಲ್ಲ. ಆ ಲಿಸ್ಟ್‌ನಲ್ಲಿ ಸುದೀಪ್ ಕೂಡ ಇಲ್ಲ. ಆದರೆ ದರ್ಶನ್ ಪುತ್ರ ವಿನೀಶ್ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದರು ಎನ್ನಲಾಗ್ತಿದೆ. ಕಳೆದ ಎರಡು ದಿನಗಳಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿತ್ತು. ದರ್ಶನ್ ಸ್ನೇಹ ಕಡಿದುಕೊಂಡಿದ್ದರೂ ವಿನೀಶ್ ಇನ್ನು ಫಾಲೋ ಮಾಡುತ್ತಿದ್ದಾರೆ ಎನ್ನುವ ಪೋಸ್ಟ್ ವೈರಲ್ ಆಗಿತ್ತು.

Is Darshan Son Vinish Unfollow Kichcha Sudeep in Instagram

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಸುದೀಪ್ ಅವರನ್ನು ವಿನೀಶ್ ಅನ್‌ಫಾಲೋ ಮಾಡಿದಂತೆ ಕಾಣುತ್ತಿದೆ. ಆದರೂ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ ವೈರಲ್ ಆಗುತ್ತಲೇ ಇದೆ. ಸೋಶಿಯಲ್ ಮೀಡಿಯಾದಿಂದ ಮಕ್ಕಳ ಮನಸ್ಸು ಹಾಳಾಗುತ್ತಿದೆ, ವಿನೀಶ್ ಇಷ್ಟಪಟ್ಟು ಫಾಲೋ ಮಾಡುತ್ತಿದ್ದ, ಅದಕ್ಕೂ ಬ್ರೇಕ್ ಬಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಮಗ ವಿನೀಶ್‌ನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರಬೇಕು ಎಂದು ದರ್ಶನ್ ಬಯಸಿದ್ದಾರೆ. ಸದ್ಯಕ್ಕೆ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈಗಾಗಲೇ 'ಐರಾವತ' ಹಾಗೂ 'ಯಜಮಾನ' ಚಿತ್ರಗಳ ಸಣ್ಣ ಸಣ್ಣ ಝಲಕ್‌ನಲ್ಲಿ ವಿನೀಶ್ ದರ್ಶನ್ ಕಾಣಿಸಿಕೊಂಡಿದ್ದು ಗೊತ್ತೇಯಿದೆ. ಅಭಿಮಾನಿಗಳು ಜ್ಯೂನಿಯರ್ ಡಿಬಾಸ್ ಎಂದೇ ಕೊಂಡಾಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 87 ಸಾವಿರಕ್ಕೂ ಅಧಿಕ ಜನ ಫಾಲೋ ಮಾಡುತ್ತಿದ್ದಾರೆ. ಅದೇ ರೀತಿ 3500 ಜನರನ್ನು ವಿನೀಶ್ ಫಾಲೋ ಮಾಡುತ್ತಿದ್ದಾನೆ. 33 ಪೋಸ್ಟ್ ಮಾಡಿರವುದನ್ನು ನೋಡಬಹುದು.

ಇತ್ತೀಚೆಗೆ ದರ್ಶನ್ ಫ್ಯಾಮಿಲಿ ಸಮೇತ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದರು. ಈ ವೇಳೆ ಅಪ್ಪ, ಅಮ್ಮ, ಚಿಕ್ಕಪ್ಪ ದಿನಕರ್ ಜೊತೆ ವಿನೀಶ್ ಎಂಜಾಯ್ ಮಾಡಿದ್ದ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು. ಆಪ್ತರ ಜೊತೆಗೂಡಿ ಫಾರ್ಮ್‌ಹೌಸ್‌ನಲ್ಲಿ ಕ್ರಿಕೆಟ್ ಆಡಿದ್ದ, ಕುದುರೆ ಜೊತೆ ಕಾಣಿಸಿಕೊಂಡಿದ್ದ. ಈ ವೀಡಿಯೋವನ್ನು ಸ್ವತಃ ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿದ್ದರು.

More from Filmibeat

English summary
Fans notice Vinish Darshan has unfollowed Actor Sudeep on Instagram;
Read more about: filmibeat original darshan sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X