twitter
    For Quick Alerts
    ALLOW NOTIFICATIONS  
    For Daily Alerts

    ರಾಮನಗರದಲ್ಲಿ ದರ್ಶನ್ ಹಾಡು ಬ್ಯಾನ್, ಏನಂದ್ರು ನಿಖಿಲ್?

    |

    Recommended Video

    ರಾಮನಗರದಲ್ಲಿ ದರ್ಶನ್ ಹಾಡು ಬ್ಯಾನ್, ಏನಂದ್ರು ನಿಖಿಲ್?

    ಇತ್ತೀಚಿಗಷ್ಟೆ ರಾಮನಗರದಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಯಶ್ ಹಾಡುಗಳನ್ನು ಹಾಡಿಲ್ಲ ಎನ್ನುವುದು ದೊಡ್ಡ ಸುದ್ದಿ ಮಾಡಿತ್ತು. ದರ್ಶನ್ ಅಭಿಮಾನಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಒಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಜಿಡಿಎಸ್ ಕಾರ್ಯಕರ್ತರು ದರ್ಶನ್ ಹಾಗೂ ಯಶ್ ಹಾಡುಗಳನ್ನು ನಿಷೇಧ ಮಾಡಿ ಎಂದು ತಾಕಿತು ಮಾಡಿದರಂತೆ.

    ಜೆಡಿಎಸ್ ಕಾರ್ಯಕ್ರಮದಲ್ಲಿ ದರ್ಶನ್-ಯಶ್ ಸಿನಿಮಾ ಹಾಡುಗಳು ಬ್ಯಾನ್ ಜೆಡಿಎಸ್ ಕಾರ್ಯಕ್ರಮದಲ್ಲಿ ದರ್ಶನ್-ಯಶ್ ಸಿನಿಮಾ ಹಾಡುಗಳು ಬ್ಯಾನ್

    ಮಂಡ್ಯ ಚುನಾವಣೆಯ ಸೇಡಿನಿಂದ ಈ ರೀತಿ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದವು. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ಆಗಿರುವ ರಾಮನಗರದಲ್ಲಿ ಜೊಡೆತ್ತುಗಳ ಹಾಡುಗಳನ್ನು ಬ್ಯಾನ್ ಮಾಡಿದ್ದು, ಚರ್ಚೆಗೆ ಕಾರಣ ಆಯ್ತು.

    ಅಂದಹಾಗೆ, ಈ ಘಟನೆ ಬಗ್ಗೆ ಇದೀಗ ಮಾಜಿ ಸಿ ಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ...

    ನಮ್ಮ ತಂದೆ ಕೂಡ ಸಿನಿಮಾ ಮ್ಯಾನ್

    ನಮ್ಮ ತಂದೆ ಕೂಡ ಸಿನಿಮಾ ಮ್ಯಾನ್

    ''ನಾನೂ ಆ ಸುದ್ದಿಯನ್ನು ಕೇಳಿದೆ. ನಮ್ಮ ತಂದೆ ರಾಜಕೀಯಕ್ಕೆ ಬರುವ ಮುಂಚೆ ಅವರು ಒಬ್ಬ ಸಿನಿಮಾ ಮ್ಯಾನ್. 200 - 250 ಸಿನಿಮಾಗಳನ್ನು ಹಂಚಿಕೆ ಮಾಡಿದ್ದರು. ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆ ನಂತರ ರಾಜಕೀಯಕ್ಕೆ ಹೋದ ಮೇಲೆ ಸಿನಿಮಾ ಮಾಡುವುದು ಕಡಿಮೆ ಆಯ್ತು.'' ಎಂದು ನಿಖಿಲ್ ರಾಮನಗರದ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಅಂತಹ ಸಣ್ಣ ತನ ನಾವು ಮಾಡಿಲ್ಲ

    ಅಂತಹ ಸಣ್ಣ ತನ ನಾವು ಮಾಡಿಲ್ಲ

    ''ನಮ್ಮ ತಂದೆಯವರದ್ದೂ ಚಿತ್ರರಂಗಕ್ಕೆ ಸಣ್ಣ ಪುಟ್ಟ ಕೊಡುಗೆ ಇದೆ. ದೊಡ್ಡ ಕೊಡುಗೆ ಎಂದು ನಾನು ಹೇಳುವುದಿಲ್ಲ, ಅವರೂ ಹೇಳುವುದಿಲ್ಲ. ಹೀಗಿಗಾ, ಹಾಡು ಹಾಡಬೇಡಿ ಎಂದು ಸಣ್ಣ ತನ ನಾವು ಮಾಡಿಲ್ಲ. ಅಂತಹ ಗುಣ ನಮ್ಮಲ್ಲಿ ಇಲ್ಲ. ಅವರ ಹಾಡನ್ನು ಹಾಡಬೇಡಿ ಎಂದು ನಾವು ಹೇಳಿದ್ದೇವೆ ಎನ್ನುವ ಸುದ್ದಿ ಹೇಗೆ ಬಂತು ಎಂಬುದು ಗೊತ್ತಿಲ್ಲ.'' - ಎಂದು ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.

    ''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್ ''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್

    ಈ ರೀತಿ ಆದರೆ, ಕನ್ನಡ ಸಿನಿಮಾ ಬೆಳೆಯುವುದಿಲ್ಲ

    ಈ ರೀತಿ ಆದರೆ, ಕನ್ನಡ ಸಿನಿಮಾ ಬೆಳೆಯುವುದಿಲ್ಲ

    ''ಈ ರೀತಿ ಸುದ್ದಿಗಳು ಬಂದರೆ, ನಮ್ಮ ಕನ್ನಡ ಸಿನಿಮಾ ಬೆಳೆಯುವುದಿಲ್ಲ. ದಯವಿಟ್ಟು ಈ ರೀತಿ ಆಗಬಾರದು. ನಮ್ಮ ಕಡೆಯಿಂದ ಎಂದೂ ಆ ರೀತಿ ಆಗುವುದಿಲ್ಲ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ.'' ಎಂದು ಹೇಳುವ ಮೂಲಕ ಈ ಘಟನೆಯ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ.

    ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ಶೋ

    ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ಶೋ

    ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಒಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯಾ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಯಶ್ ಹಾಡುಗಳು ಬೇಕು ಎಂದು ಅಭಿಮಾನಿಗಳು ಕೂಗಿದ್ದರು ಅವರ ಹಾಡುಗಳನ್ನು ಹಾಡಿರಲಿಲ್ಲ. ಇದು ದೊಡ್ಡ ಮಟ್ಟದ ಚರ್ಚೆ ಆಗಿತ್ತು.

    ದರ್ಶನ್ ಬಗ್ಗೆ ಗೌರವ ಇದೆ

    ದರ್ಶನ್ ಬಗ್ಗೆ ಗೌರವ ಇದೆ

    'ಕುರುಕ್ಷೇತ್ರ' ಚಿತ್ರದ ಡಬ್ಬಿಂಗ್ ಗೆ ಬಂದಿದ್ದ ನಿಖಿಲ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ''ನಾನು ಈಗ ಕಣ್ಣು ಬಿಡುತ್ತಿರುವ ಕಲಾವಿದ, ದರ್ಶನ್ ಅವರ ಬಗ್ಗೆ ಗೌರವ ಇದೆ. ದರ್ಶನ್ ಅವರ ಕೊಡುಗೆ ಬಹಳ ದೊಡ್ಡದಿದೆ. ಇಂಡಸ್ಟ್ರಿಗೆ ಬಹಳಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.'' ಎಂದು ಹೇಳಿದ್ದಾರೆ.

    English summary
    Is Challenging Star Darshan Songs banned in JDS program Ramanagara what nikhil says? Nikhil kumar spoke about Darshan gossip.
    Tuesday, July 30, 2019, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X