ಡಿ ಬಾಸ್ ದರ್ಶನ್ ಈಸ್ ಬ್ಯಾಕ್; ಅಭಿಮಾನಿಗಳ ದಿಲ್‌ಖುಷ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಪ್ತರು ಹಾಗೂ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ರಾರಾಜಿಸುತ್ತಿದೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಟ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸಿ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಸದ್ಯ 'ಡೆವಿಲ್' ಸಿನಿಮಾದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಬಣ್ಣ ಹಚ್ಚಿದ್ದಾರೆ. ಫಸ್ಟ್ ಶೆಡ್ಯೂಲ್ ಕೂಡ ಮುಗಿದಿದೆ. ಆದರೆ ಚಿತ್ರೀಕರಣದ ವೇಳೆಯೇ ಗಾಯಗೊಂಡಿದ್ದರು. ಎಡಗೈಗೆ ಪೆಟ್ಟಾಗಿ ಸರ್ಜರಿ ಕೂಡ ಆಗಿತ್ತು. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಬ್ಯಾಂಡೇಜ್ ಕಟ್ಟಿಕೊಂಡು ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು.

Is Devil Actor Darshan fully recovered after surgery

ಇತ್ತೀಚೆಗೆ ಸ್ನೇಹಿತರ ಜೊತೆ ಪುಣೆ ಪ್ರವಾಸಕ್ಕೂ ನಟ ದರ್ಶನ್ ಹೋಗಿ ಬಂದಿದ್ದರು. ಮೊನ್ನೆ ಮೊನ್ನೆ 'ಕಾಟೇರ' ಚಿತ್ರದ ಸುದ್ದಿಗೋಷ್ಠಿ ನಡೆದಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಮೂವರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆಗ ಕೂಡ ದರ್ಶನ್ ಕೈಯಲ್ಲಿ ಬ್ಯಾಂಡೇಜ್ ಉಳಿದುಕೊಂಡಿತ್ತು. ಆದರೆ ಈಗ ಬ್ಯಾಂಡೇಜ್ ಇಲ್ಲದೇ ದರ್ಶನ್ ಕಾಣಿಸಿಕೊಂಡಿದ್ದಾರೆ.

ಸರ್ಜರಿ ಬಳಿಕ ದರ್ಶನ್ ಬಹುತೇಕ ಚೇತರಿಸಿಕೊಂಡಿರುವಂತೆ ಕಾಣುತ್ತಿದೆ. ಅದೇ ಕಾರಣಕ್ಕೆ ಬ್ಯಾಂಡೇಜ್ ತೆಗೆದಿದ್ದಾರೆ ಎನ್ನಲಾಗ್ತಿದೆ. ಸಹಜವಾಗಿಯೇ ಈ ವಿಚಾರ ಅಭಿಮಾನಿಗಳಿಗೆ ಖುಷಿ ತಂದಿದೆ. ಆದಷ್ಟು ಬೇಗ ಚೇತರಸಿಕೊಳ್ಳಿ ಬಾಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸರ್ಜರಿ ಬಳಿಕ ದರ್ಶನ್ ಬ್ಯಾಂಡೇಜ್ ಹಾಕಿಕೊಂಡು ಆಸ್ಪತ್ರೆ ಸಿಬ್ಬಂದಿ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಅದೇ ಬ್ಯಾಂಡೇಜ್‌ನೊಂದಿಗೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದರು.

ಚುನಾವಣೆ ಪ್ರಚಾರದ ಬಳಿಕ ಹಿಂಗ್ಡ್ ರಾಮ್ ಎಲ್ಬೋ ಬ್ರೇಸ್ ತೊಟ್ಟು ದರ್ಶನ್ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅದನ್ನು ತೆಗೆದುಬಿಟ್ಟಿರುವುದನ್ನು ನೋಡಬಹುದು. ಆಪ್ತ ಸಚ್ಚಿದಾನಂದ ಜೊತೆ ದರ್ಶನ್ ಫೋಟೊ ಕ್ಲಿಕ್ಕಿಸಿಕೊಂಡಿದ್ದು ವೈರಲ್ ಆಗಿದೆ. ಬಾಸ್ ಈಸ್ ಬ್ಯಾಕ್ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

Is Devil Actor Darshan fully recovered after surgery

ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಈ ಹಿಂದೆ ಇದೇ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಬಂದಿತ್ತು. ಬಾಲಿವುಡ್‌ ನಟ ಮಹೇಶ್ ಮಂಜ್ರೇಕರ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದು ಆಕ್ಷನ್ ಸನ್ನಿವೇಶದ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ದಾಸನನ್ನು ವಿಭಿನ್ನವಾಗಿ ತೋರಿಸಲು ಪ್ರಕಾಶ್ ಪ್ರಯತ್ನಿಸುತ್ತಿದ್ದಾರೆ.

ಸರ್ಜರಿ ಬಳಿಕ ವೈದ್ಯರು ನಟ ದರ್ಶನ್‌ಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಹಾಗಾಗಿ ಇನ್ನು ಕೆಲ ದಿನಗಳ ಕಾಲ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಈ ವರ್ಷವೇ 'ಡೆವಿಲ್' ಸಿನಿಮಾ ತೆರೆಗೆ ತರಲು ಪ್ರಯತ್ನಿಸುವುದಾಗಿ ದರ್ಶನ್ ಹೇಳಿದ್ದರು. ಆದರೆ ಚಿತ್ರೀಕರಣ ತಡವಾಗುತ್ತಿರುವುದರಿಂದ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಈ ಸಿನಿಮಾ ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

'ರಾಬರ್ಟ್' ಹಾಗೂ 'ಕಾಟೇರ' ಬಳಿಕ ಮತ್ತೆ ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ತರುಣ್ ನಿರ್ದೇಶನ ಮಾಡಲಿದ್ದು ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಆ ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

English summary
Actor Darshan new still goes viral in social media;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X