For Quick Alerts
  ALLOW NOTIFICATIONS  
  For Daily Alerts

  ಅಮ್ಮ ಆಗಲಿದ್ದಾರೆ ಐಂದ್ರಿತಾ ರೇ? ಸುಳಿವು ಕೊಟ್ಟ ದಿಗಂತ್!

  |

  ಸ್ಯಾಂಡಲ್‌ವುಡ್‌ನ ಸಖತ್ ಕೂಲ್‌ ಜೋಡಿ ದಿಗಂತ್ ಮತ್ತು ಐಂದ್ರಿತಾ ರೇ. ಸಾಹಸ ಕ್ರೀಡೆ, ಪಾರ್ಟಿಗಳು, ಟ್ರೆಕ್ಕಿಂಗ್, ಗೆಳೆಯರ ಭೇಟಿ, ಸುತ್ತಾಟ ಹೀಗೆ ಹಲವಾರು ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ ಈ ಜೋಡಿ.

  ಬಹುವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಯುವ ಜೋಡಿ ಕೊನೆಗೆ 2018 ರ ಡಿಸೆಂಬರ್ ತಿಂಗಳಲ್ಲಿ ಮದುವೆ ಆದರು. ಇಷ್ಟು ದಿನವೂ ಹನಿಮೂನ್ ತೀರಿಯಡ್ ಎಂಜಾಯ್ ಮಾಡಿದ ಜೋಡಿ ದಾಂಪತ್ಯದ ಮುಂದಿನ ಹಂತಕ್ಕೆ ಹೋಗುವವರಿದ್ದಾರೆ.

  ದಿಗಂತ್-ಐಂದ್ರತಾ ರೇ ಇಬ್ಬರೂ ಪೋಷಕರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಅನುಮಾನ ಮೂಡಲು ಕಾರಣ ಸ್ವತಃ ದಿಗಂತ್. ಇತ್ತೀಚಿನ ಸಂದರ್ಶನವೊಂದರಲ್ಲಿ ದಿಗಂತ್‌ಗೆ ಈ ಪ್ರಶ್ನೆ ಎದುರಾಗಿದ್ದು, ಪ್ರಶ್ನೆಗೆ ದಿಗಂತ್ ನೀಡಿರುವ ಪ್ರತಿಕ್ರಿಯೆಯೇ ಈ ಅನುಮಾನ ಮೂಡಲು ಕಾರಣ.

  ಸಂದರ್ಶನವೊಂದಲ್ಲಿ ದಿಗಂತ್ ಎದುರಾಗಿದೆ ಪ್ರಶ್ನೆ

  ಸಂದರ್ಶನವೊಂದಲ್ಲಿ ದಿಗಂತ್ ಎದುರಾಗಿದೆ ಪ್ರಶ್ನೆ

  ನಟ ದಿಗಂತ್ ಅವರು ಇತ್ತೀಚೆಗೆ ನಟಿ ಸೋನು ಗೌಡ ಜೊತೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದಾರೆ. ಯುವರತ್ನ ಸಿನಿಮಾದ ಪ್ರಚಾರಕ್ಕಾಗಿ ಈ ಯೂಟ್ಯೂಬ್ ಸಂದರ್ಶನ ಮಾಡಲಾಗಿದ್ದು, ಸಂದರ್ಶನದಲ್ಲಿ ಸೋನು ಗೌಡ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ದಿಗಂತ್ ನೀಡಿದ ಉತ್ತರ ಮೇಲಿನಂತೆ ಅನುಮಾನ ಮೂಡಲು ಕಾರಣವಾಗಿದೆ.

  'ದಿಗಂತ್ ಅಪ್ಪ ಆಗುತ್ತಿದ್ದಾರಂತೆ ಹೌದಾ?'

  'ದಿಗಂತ್ ಅಪ್ಪ ಆಗುತ್ತಿದ್ದಾರಂತೆ ಹೌದಾ?'

  ಸಂದರ್ಶನ ಪ್ರಾರಂಭವಾಗುತ್ತಿದ್ದಂತೆ, 'ದಿಗಂತ್ ಅಪ್ಪ ಆಗುತ್ತಿದ್ದಾರಂತೆ ಹೌದಾ?' ಎಂದು ಕೇಳಿದ್ದಾರೆ ಸೋನು ಗೌಡ, ಇದಕ್ಕೆ ದಿಗಂತ್ ಜೋರಾಗಿ ನಗುತ್ತಾರೆ. ಅಲ್ಲಿಗೆ ಸುಮ್ಮನಾಗದ ಸೋನುಗೌಡ, 'ಹೇಳಿ ಇದು ನಿಜ ತಾನೆ?' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದಿಗಂತ್, 'ಪುಸ್ತಕವನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡು, ಬಾಯಿ ಮೇಲೆ ಬೆರಳಿಟ್ಟುಕೊಂಡು ಸುಮ್ಮನಿರುವಂತೆ ಸೋನು ಗೌಡಾಗೆ ಸೂಚಿಸುತ್ತಾರೆ.

  ಬೇಬಿ ಬಂಪ್ ಬಂದ ಮೇಲೆ ಉತ್ತರ ಕೊಡುತ್ತಾರೆ ಎಂದ ಸೋನು ಗೌಡ

  ಬೇಬಿ ಬಂಪ್ ಬಂದ ಮೇಲೆ ಉತ್ತರ ಕೊಡುತ್ತಾರೆ ಎಂದ ಸೋನು ಗೌಡ

  ಸೋನು ಗೌಡ ಆಗಲೂ ಸುಮ್ಮನಾಗುವುದಿಲ್ಲ. ಬೇಬಿ ಬಂಪ್ ಬಂದಾದಮೇಲೆ ದಿಗಂತ್ ಇದರ ಬಗ್ಗೆ ಉತ್ತರ ಕೊಡುತ್ತಾರೆ ಎನ್ನುತ್ತಾರೆ. ಆಗಲೂ ನಕ್ಕು ಸುಮ್ಮನಾಗುವ ದಿಗಂತ್ ಟಾಪಿಕ್ ಬದಲಾಯಿಸಿ, ಬೇರೆಯದೇ ಏನನ್ನೋ ಮಾತನಾಡಲು ಪ್ರಾರಂಭ ಮಾಡುತ್ತಾರೆ ಸೋನು ಗೌಡ ಜೊತೆಗೆ. ಈ ಸಂಭಾಷಣೆಯನ್ನು ನೋಡಿದಾಗ ದಿಗಂತ್ ಹಾವ-ಭಾವದಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ವಿಷಯ ಹೇಳಲು ದಿಗಂತ್ ಹಿಂಜರಿಯುತ್ತಿದ್ದಾರೆ ಎಂದು. ಒಂದುವೇಳೆ ಹಾಗಿಲ್ಲದಿದ್ದರೆ ನೇರವಾಗಿಯೇ ಹೇಳಿಬಿಟ್ಟಿರುತ್ತಿದ್ದರು ದಿಗಂತ್, ಹೀಗೆ ಸುಮ್ಮನಿರು ಎಂದು ಸಂದರ್ಶಕಿಗೆ ಸೂಚಿಸುತ್ತಿರಲಿಲ್ಲ್ ಅಲ್ಲವೇ?!

  Recommended Video

  ದಾಸನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಸ್ಟಾರ್ ಗಳು | Filmibeat Kannada
  ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದಿಗಂತ್

  ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದಿಗಂತ್

  ದಿಗಂತ್ ಹಾಗೂ ಐಂದ್ರಿತಾ ರೇ ಇಬ್ಬರು ಸಿನಿಮಾಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಫಿಟ್‌ನೆಸ್‌ ಕಡೆಗೆ, ಹೊಸ ವಿಷಯಗಳನ್ನು ಕಲಿಯುವ ಕಡೆಗೆ ಆಸಕ್ತಿವಹಿಸಿದ್ದ ಈ ಜೋಡಿ ಈಗ ಒಟ್ಟಿಗೆ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿಗಂತ್ ನಟಿಸಿರುವ ಯುವರತ್ನ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಮಾರಿಗೋಲ್ಡ್, ಗಾಳಿಪಟ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.

  English summary
  Is Actor Diganth Manchale and Aindritha Ray becoming parents. Diganth gives a little hint.
  Tuesday, February 16, 2021, 15:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X