ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಸಾವಿಗೆ ಜೇನು ನೊಣ ಕಾರಣನಾ ? ಕನ್ನಡದ ವೈದ್ಯರು ಹೇಳುವುದೇನು ?

ಹುಟ್ಟು ಉಚಿತ.. ಸಾವು ಖಚಿತ.. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು.

ಇದಕ್ಕೆ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ಅಕಾಲಿಕ ನಿಧನ ಇನ್ನೊಂದು ಉದಾಹರಣೆ. ಹೌದು, ನಿನ್ನೆ {ಜೂನ್ 12 } ಅಹಮದಾಬಾದ್‌ನಲ್ಲಿ ನಡೆದ ಘನಘೋರ ದುರಂತಕ್ಕೆ ಕಣ್ಣೀರು ಹಾಕಿದ್ದವರು ಸಂಜಯ್ ಕಪೂರ್. ಆದರೆ ಇಂದು ಅವರೇ ನಮ್ಮ ನಡುವೆ ಇಲ್ಲ.

is-honey-bee-is-the-reason-for-sunjay-kapur-demise-know-the-doctors-reaction-via-filmibeat-kannada

ಕೇವಲ 53ರ ಪ್ರಾಯದಲ್ಲಿ ಸಂಜಯ್ ದೂರದ ಇಂಗ್ಲೆಂಡ್‌ನಲ್ಲಿ ಹಠಾತ್ತನೇ ಕುಸಿದು ಬಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದರು. ಆದರೆ.. ಈಗ ಇವರ ಸಾವಿಗೆ, ಹೃದಯಾಘಾತಕ್ಕೆ ಬೇರೆಯದ್ದೇ ಕಾರಣ ಇದೆ ಹೇಳಲಾಗುತ್ತಿದೆ. ಜೇನು ನೊಣ ಸಂಜಯ್ ಅವರ ಪ್ರಾಣಕ್ಕೆ ಕುತ್ತು ತಂದಿತು ಎಂದು ವರದಿಯಾಗಿದೆ.

ಹೌದು, ಅಸಲಿಗೆ ಸಂಜಯ್ ಕಪೂರ್ ಫೋಲೋ ಪ್ರೇಮಿಯಾಗಿದ್ದರು. ನಿನ್ನೆ ಇಹಲೋಕ ತ್ಯಜಿಸುವ ಮುನ್ನ ಕೂಡ ಸಂಜಯ್ ಕಪೂರ್ ಫೋಲೋ ಆಡುತ್ತಿದ್ದರು. ಇದೇ ಸಮಯದಲ್ಲಿ ಆಕಸ್ಮಿಕವಾಗಿ ಸಂಜಯ್ ಕಪೂರ್ ಬಾಯಿಯ ಒಳಗಡೆ ಜೇನು ನೊಣ ಪ್ರವೇಶಿಸಿತ್ತು. ಇದನ್ನರಿಯದ ಸಂಜಯ್ ಕಪೂರ್ ಆ ಜೇನು ನೊಣವನ್ನು ನುಂಗಿದ್ದರು. ಇದರಿಂದನೇ ಹೃದಯಾಘಾತವಾಗಿದೆ ಎಂದು ಅನೇಕ ಮಾಧ್ಯಮಗಳು ವರದಿಯನ್ನು ಮಾಡಿವೆ.

is-honey-bee-is-the-reason-for-sunjay-kapur-demise-know-the-doctors-reaction-via-filmibeat-kannada

ಹಾಗಿದ್ದರೆ ಸಂಜಯ್ ಕಪೂರ್ ಅವರ ಸಾವಿಗೆ ಜೇನು ನೊಣ ನಿಜಕ್ಕೂ ಕಾರಣನಾ ? ಜೇನು ನೊಣ ಮನುಷ್ಯನ ದೇಹವನ್ನು ಪ್ರವೇಶಿಸಿದರೆ ಹೃದಯಾಘಾತವಾಗುತ್ತಾ ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಕರುನಾಡಿನ ಖ್ಯಾತ ವೈದ್ಯ 'ಡಾ.ಅಂಜನಪ್ಪ' ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ವೆಬ್ ಸೈಟ್‌ ಮೂಲಕ ಉತ್ತರ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಾ. ಅಂಜನಪ್ಪ ಜೇನು ನೊಣ ನುಂಗುವುದರಿಂದ ಹೃದಯಾಘಾತವಾಗುವುದಿಲ್ಲ ಎಂದು ಹೇಳಿದ್ದಾರೆ. ''ಸಂಜಯ್ ಕಪೂರ್ ಅವರ ವಿಚಾರದಲ್ಲಿ ಕೊಂಬೆ ಮುರಿಯುವುದಕ್ಕೂ ಕಾಗೆ ಕೂರುವುದಕ್ಕೂ ಎಂಬಂತೆ ಆಗಿದೆ. ಆದರೆ ಅವರು ಜೇನು ನೊಣ ನುಂಗುವುದಕ್ಕೂ ಅವರಿಗೆ ಹೃದಯಾಘಾತ ಆಗಿದ್ದಕ್ಕೂ ಸಂಬಂಧ ಇಲ್ಲ'' ಎಂದು ಹೇಳಿದ್ದಾರೆ.

''ಜೇನು ನೋಣ ಶ್ವಾಸ ಕೋಶದಲ್ಲಿ ಹೋಗುವುದಿಲ್ಲ, ಜೇನು ನೊಣ ಕಚ್ಚಿ ನಂಜು ಹರಡಿರುವ ಸಾಧ್ಯತೆ ಇರಬಹುದು ಅಥವಾ ಜೇನು ನೊಣ ಒಳ ಹೋದ ವಿಚಾರ ಅವರ ಅರಿವಿಗೆ ಬಂದು ಆ ನಂತರ ಅವರು ಗಾಬರಿಯಾದ ಹಿನ್ನೆಲೆ ಹೃದಯ ಸ್ತಂಭನವಾಗಿರಬಹುದು ಇದು ಹೊರತು ಪಡಿಸಿದರೆ ಜೇನು ನೊಣದಿಂದ ಹೃದಯಾಘಾತವಾಯ್ತು ಎಂದು ಹೇಳುವುದು ತಪ್ಪು'' ಎಂದು ಡಾ .ಅಂಜನಪ್ಪ ಫಿಲ್ಮಿ ಬೀಟ್‌ ಕನ್ನಡಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

'' ನಾಣ್ಯ ನುಂಗಿದಾಗ ಅನ್ನನಾಳದಲ್ಲಿ ತೊಂದರೆಯಾಗಿ ಹೇಗೆ ಉಸಿರಾಟದ ಸಮಸ್ಯೆಯಾಗುತ್ತೋ ಅದೇ ರೀತಿ ಅವರ ಬಾಯಲ್ಲಿ ಜೇನು ನೊಣ ಹೋದಾಗ ಅವರಿಗೆ ಉಸಿರಾಟದ ಸಮಸ್ಯೆಯಾಗಿರಬಹುದು ಅಥವಾ ಆಗಲೇ ಹೇಳಿದಂತೆ ಅವರಿಗೆ ತೀವೃವಾದ ಅಲರ್ಜಿಯಾಗಿರಬಹುದು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಅನಾಫಿಲ್ಯಾಕ್ಟಿಕ್ ಅಥವಾ ಅನಾಫಿಲ್ಯಾಕ್ಸಿಸ್ ದಿಂದ ಅಂದರೆ ಅಲರ್ಜಿಗಳನ್ನು ಉಂಟು ಮಾಡುವ ರಾಸಾಯನಿಕಗಳು ಬಿಡುಗಡೆಯಾಗಿರಬಹುದು'' ಎಂದು ಡಾ.ಅಂಜನಪ್ಪ ಹೇಳಿದ್ಧಾರೆ.

ಡಾ.ಅಂಜನಪ್ಪ ಅವರ ಈ ಮಾತುಗಳಿಗೆ ಪೂರಕಬಾಗಿ ಭಾರತೀಯ ಹೃದ್ರೋಗ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ.ಸಿ.ಎಂ.ನಾಗೇಶ್ ಕೂಡ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದು ''ಜೇನು ನೊಣ ನುಂಗುವುದರಿಂದ ಗಂಭೀರ ಸಮಸ್ಯೆಗಳಾಗಬಹುದು, ಗಂಟಲು, ಅನ್ನನಾಳದಲ್ಲಿ ಸಮಸ್ಯೆಯಾಗಬಹುದು ಎಂದು ಹೇಳಿದ್ಧಾರೆ. ಜೇನು ನೊಣದಿಂದ ಹೃದಯಾಘಾತವಾಗಲ್ಲ ಆದರೆ ರಕ್ತದೊತ್ತಡದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇರುತ್ತೆ'' ಎಂದು ಹೇಳಿದ್ಧಾರೆ.

More from Filmibeat

English summary
Industrialist Sunjay Kapur, Karisma Kapoor's ex-husband, dies at 53 in England. Official cause: heart attack, with speculation of a bee sting triggering the event. Read the full report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X