For Quick Alerts
  ALLOW NOTIFICATIONS  
  For Daily Alerts

  ಪೊಲೀಸರಿಂದ ಒತ್ತಡ, ಉಮಾಪತಿನಾ ಸಿಲುಕಿಸುವ ಷಡ್ಯಂತ್ರನಾ?

  |

  25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದರು. ಮೈಸೂರು ಸ್ನೇಹಿತರಿಗೆ ಕ್ಲೀನ್ ಚಿಟ್ ಕೊಟ್ಟ ದಾಸ ಚೆಂಡನ್ನು ಉಮಾಪತಿ ಅಂಗಳಕ್ಕೆ ಎಸೆದರು. ಡಿ ಬಾಸ್ ಪ್ರೆಸ್ ಮೀಟ್ ಮುಗಿಯುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಉಮಾಪತಿ ಮತ್ತಷ್ಟು ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟರು.

  ಸ್ವತಃ ದರ್ಶನ್ ಅವರು ಪ್ರೆಸ್‌ಮೀಟ್‌ನಲ್ಲಿ ಹೇಳಿದಂತೆ, 'ಅರುಣಾ ಕುಮಾರಿ ನನ್ನ ಬಳಿ ಸತ್ಯ ಹೇಳಬೇಕು, ನಾನು ಭೇಟಿ ಮಾಡ್ತೇನೆ, ಉಮಾಪತಿ ಅವರೇ ಇದಕ್ಕೆಲ್ಲಾ ಕಾರಣ ಅಂದ್ರು' ಎಂದು ದಾಸ ತಿಳಿಸಿದರು. ಈ ಕಡೆ ಉಮಾಪತಿ ಮಾತನಾಡುವಾಗ 'ಮೈಸೂರಿನಲ್ಲಿ ನನ್ನನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಏಕೆ ಹಾಕಿದ್ರು?' ಎಂದು ಪ್ರಶ್ನಿಸಿದರು. ಈ ವಿಚಾರಗಳನ್ನು ಗಮನಿಸಿದರೆ ರಾಬರ್ಟ್ ನಿರ್ಮಾಪಕನ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ಯಾ ಎಂಬ ಬಲವಾದ ಅನುಮಾನ ಕಾಡ್ತಿದೆ. ಮುಂದೆ ಓದಿ....

  ನನ್ನನ್ನು ಗುಂಡಿಟ್ಟು ಸಾಯಿಸ್ತಾರಾ, ಆ ತಾಕತ್ತು ಇದಿಯಾ: ನಿರ್ಮಾಪಕ ಉಮಾಪತಿ ತಿರುಗೇಟು ನನ್ನನ್ನು ಗುಂಡಿಟ್ಟು ಸಾಯಿಸ್ತಾರಾ, ಆ ತಾಕತ್ತು ಇದಿಯಾ: ನಿರ್ಮಾಪಕ ಉಮಾಪತಿ ತಿರುಗೇಟು

  ದರ್ಶನ್ ಆಪ್ತರು ಬೆದರಿಕೆ ಹಾಕಿದ್ರಾ?

  ದರ್ಶನ್ ಆಪ್ತರು ಬೆದರಿಕೆ ಹಾಕಿದ್ರಾ?

  ದರ್ಶನ್ ಆಪ್ತರಾದ ಹರ್ಷ ಮೇಲಂಟಾ, ರಾಕೇಶ್, ರಾಕೇಶ್ ಶರ್ಮಾ ಬೆದರಿಕೆ ಹಾಕಿದ್ದಾರೆ ಎಂದು ಜಯನಗರ ಪೊಲೀಸರ ಮುಂದೆ ಸ್ವತಃ ಅರುಣಾ ಕುಮಾರಿ ಹೇಳಿದ್ದರು ಎಂಬ ವಿಚಾರವನ್ನು ಉಮಾಪತಿ ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ, ದರ್ಶನ್ ಬಳಿ ಆ ಮಹಿಳೆ ಉಮಾಪತಿ ಹೆಸರು ಹೇಳಿದ್ದರ ಹಿಂದಿನ ಕಾರಣವೇನು ಎಂಬ ಅನುಮಾನ ಮೂಡ್ತಿದೆ.

  ಉಮಾಪತಿನೇ ಕಾರಣ ಎಂದ ಮಹಿಳೆ

  ಉಮಾಪತಿನೇ ಕಾರಣ ಎಂದ ಮಹಿಳೆ

  ದರ್ಶನ್ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿ, 'ಮಹಿಳೆ ನನಗೆ ಫೋನ್ ಮಾಡಿ ಸರ್ ನನಗೆ ಎರಡು ದಿನ ಸಮಯ ಕೊಡಿ, ನಾನು ಎಲ್ಲ ಸತ್ಯಾಂಶ ಹೇಳುತ್ತೇನೆ, ಇದಕ್ಕೆ ಉಮಾಪತಿ ಅವರೇ ಕಾರಣ' ಎಂದು ಹೇಳಿದ ವಿಚಾರ ಬಹಿರಂಗಪಡಿಸಿದ್ದಾರೆ. ಉಮಾಪತಿ ಹಾಗೂ ಮಹಿಳೆಯ ವಾಟ್ಸಾಪ್ ಚಾಟ್ ಸಹ ಬಿಡುಗಡೆ ಮಾಡಿದರು.

  ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್

  ಒಪ್ಪಿಕೊಳ್ಳುವಂತೆ ಉಮಾಪತಿಗೆ ಒತ್ತಡ ಹಾಕಿದ್ದೇಕೆ?

  ಒಪ್ಪಿಕೊಳ್ಳುವಂತೆ ಉಮಾಪತಿಗೆ ಒತ್ತಡ ಹಾಕಿದ್ದೇಕೆ?

  ಜಯನಗರದಲ್ಲಿ ಉಮಾಪತಿ ಕಳೆದ ತಿಂಗಳು ದೂರು ನೀಡಿದ್ದಾರೆ. ಮೈಸೂರಿನಲ್ಲಿ ದರ್ಶನ್ ಆಪ್ತ ಹರ್ಷಾ ನಿನ್ನೆ ದೂರು ಕೊಟ್ಟಿದ್ದಾರೆ. ಹರ್ಷಾ ಕೊಟ್ಟಿರುವ ದೂರಿನಲ್ಲಿ ಉಮಾಪತಿ ಹೆಸರು ಉಲ್ಲೇಖವಾಗಿದ್ದ ಕಾರಣ ವಿಚಾರಣೆಗೆ ಕರೆದು ಮಾಹಿತಿ ಕೇಳಿದ್ದಾರೆ. ಈ ವೇಳೆ ಅಲ್ಲಿದ್ದ ಪೊಲೀಸರೊಬ್ಬರು ಉಮಾಪತಿಗೆ ನೀವೇ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದರಂತೆ. ಇದನ್ನು ಉಮಾಪತಿ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

  ಜಯನಗರ ಹೇಳಿಕೆ ಏಕೆ ಪರಿಗಣಿಸಿಲ್ಲ?

  ಜಯನಗರ ಹೇಳಿಕೆ ಏಕೆ ಪರಿಗಣಿಸಿಲ್ಲ?

  ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ನಾನು ಮೊದಲು ದೂರು ಕೊಟ್ಟಿದ್ದೇನೆ. ಮೈಸೂರಿನಲ್ಲಿ ವಿಚಾರಣೆ ಮಾಡುವುದಾದರೆ ಜಯನಗರ ಪೊಲೀಸರ ಹೇಳಿಕೆ ಪರಿಶೀಲಿಸಬೇಕು ಅಲ್ಲವೇ? ಜಯನಗರದಲ್ಲಿ ಮಹಿಳೆಯ ಹೇಳಿಕೆ ಪಡೆಯಬೇಕು ಅಲ್ಲವೇ? ಅದನ್ನು ಏಕೆ ಪೊಲೀಸರು ಪಡೆದುಕೊಂಡಿಲ್ಲ ಎಂದು ಉಮಾಪತಿ ಪ್ರಶ್ನಿಸಿದ್ದಾರೆ.

  ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada
  ಉಮಾಪತಿ vs ದರ್ಶನ್ ಆಪ್ತರು

  ಉಮಾಪತಿ vs ದರ್ಶನ್ ಆಪ್ತರು

  ದರ್ಶನ್ ಮತ್ತು ಮೈಸೂರು ಸ್ನೇಹಿತರ ಸುದ್ದಿಗೋಷ್ಠಿ ಹಾಗೂ ಉಮಾಪತಿ ಶ್ರೀನಿವಾಸ್ ಅವರ ಸುದ್ದಿಗೋಷ್ಠಿ ಗಮನಿಸಿದರೆ ಇಲ್ಲಿ ದರ್ಶನ್ ಅವರ ಪಾತ್ರ ಬಹಳ ಕಡಿಮೆ. ಇಲ್ಲಿ ದರ್ಶನ್ ಮೈಸೂರು ಆಪ್ತರು ಮತ್ತು ಉಮಾಪತಿ ನಡುವಿನ ಕದನ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೈಸೂರಿನ ಪ್ರೆಸ್‌ಮೀಟ್‌ನಲ್ಲಿ ಉಮಾಪತಿ ಕಡೆ ಪರೋಕ್ಷ ಆರೋಪ ಮಾಡಿದ್ರೆ, ಬೆಂಗಳೂರಿನಲ್ಲಿ ದರ್ಶನ್ ಆಪ್ತರ ಮೇಲೆ ಉಮಾಪತಿ ಪರೋಕ್ಷ ಆರೋಪ ಮಾಡಿದ್ರು.

  English summary
  Rs 25 cr fraud case controversy: Is it plan to trap Producer Umapathy Srinivas the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X