For Quick Alerts
  ALLOW NOTIFICATIONS  
  For Daily Alerts

  'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಪ್ರೇರಣೆ.?

  By Harshitha
  |

  'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ ಲೀಲಾ', 'ಕೃಷ್ಣ ರುಕ್ಕು'... ಹೀಗೆ 'ಕೃಷ್ಣ' ಸೀರೀಸ್ ನಿಂದ ಹೊರಬಂದು ಸ್ಯಾಂಡಲ್ ವುಡ್ ನ 'ಸ್ಮೈಲಿಂಗ್ ಕೃಷ್ಣ' ಅಭಿನಯದ ಸಿನಿಮಾ 'ತಾಯಿಗೆ ತಕ್ಕ ಮಗ'.

  ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ 'ತಾಯಿಗೆ ತಕ್ಕ ಮಗ' ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ಅಜಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಅಭಿನಯದ 'ತಾಯಿಗೆ ತಕ್ಕ ಮಗ' ಚಿತ್ರ ಯಾವಾಗ ಬಿಡುಗಡೆ ಆಗುತ್ತೋ ಅಂತ ಸಿನಿಪ್ರಿಯರು ಕಾಯ್ತಿದ್ದಾರೆ.

  ಈ ನಡುವೆ ಶಶಾಂಕ್ ನಿರ್ದೇಶನದ 'ತಾಯಿಗೆ ತಕ್ಕ ಮಗ' ಚಿತ್ರದ ಟ್ರೈಲರ್ ಕಣ್ತುಂಬಿಕೊಂಡ ಕೆಲವರಿಗೆ, 'ಇದು ನೈಜ ಘಟನೆ ಆಧಾರಿತ ಚಿತ್ರ ಇರಬಹುದೇ.?' ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಭ್ರಷ್ಟ ರಾಜಕಾರಣಿ ಹಾಗೂ ಆ ರಾಜಕಾರಣಿಯ ಪುತ್ರ ಎಸಗುವ ದುಷ್ಟ ಕೆಲಸಗಳು ಟ್ರೈಲರ್ ನಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.

  ಇದನ್ನ ನೋಡಿದ್ಮೇಲೆ, ಬೆಂಗಳೂರಿನಲ್ಲಿ ನಡೆದ ರಾಜಕಾರಣಿಯ ಪುತ್ರನ ಅವಾಂತರದ ಘಟನೆ 'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಪ್ರೇರಣೆ ನೀಡಿದ್ಯಾ ಎಂಬ ಡೌಟ್ ಮೂಡದೇ ಇರಲ್ಲ.! ಇದಕ್ಕೆ ನಿರ್ದೇಶಕ ಶಶಾಂಕ್ ಏನಂತಾರೆ.? ಎಲ್ಲವನ್ನೂ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ತಾಯಿಗೆ ತಕ್ಕ ಮಗ' ಟ್ರೈಲರ್ ನಲ್ಲಿ ಇರುವುದೇನು.?

  'ತಾಯಿಗೆ ತಕ್ಕ ಮಗ' ಟ್ರೈಲರ್ ನಲ್ಲಿ ಇರುವುದೇನು.?

  ''ನಾನು ಪೊಲಿಟೀಷಿಯನ್, ನನ್ನ ಮಗ, ನನ್ನ ಮೊಮ್ಮಗ... ಎಲ್ಲರೂ ಪೊಲಿಟೀಷಿಯನ್ಸೇ.! ನಾವು ಹುಟ್ಟಿರೋದೇ ಆಳೋಕೆ'' ಎಂದು ರಾಜಕಾರಣಿಯೊಬ್ಬರು ಅಬ್ಬರಿಸುವ ದೃಶ್ಯ 'ತಾಯಿಗೆ ತಕ್ಕ ಮಗ' ಟ್ರೈಲರ್ ನಲ್ಲಿದೆ. ಇದರ ಜೊತೆಗೆ ರಾಜಕಾರಣಿಯ ಪುತ್ರ ಡ್ರಗ್ಸ್ ಅಮಲಿನಲ್ಲಿ ತೇಲುವುದು, ಹೆಣ್ಮಕ್ಕಳಿಗೆ ಹಿಂಸೆ ಕೊಡುವುದನ್ನೂ ತೋರಿಸಲಾಗಿದೆ.

  ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್

  ನೈಜ ಘಟನೆ ಇರಬಹುದಾ.?

  ನೈಜ ಘಟನೆ ಇರಬಹುದಾ.?

  ರಾಜಕಾರಣಿಯ ಪುತ್ರರು ವಿವಾದಗಳಿಗೆ ಸಿಲುಕಿರುವ ಪ್ರಕರಣಗಳು ಬೇಕಾದಷ್ಟಿವೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಘಟನೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಶಾಸಕನ ಪುತ್ರ ಮಾಡಿದ ಅವಾಂತರಕ್ಕೆ ಶಾಸಕನ ರಾಜಕೀಯ ಭವಿಷ್ಯವೇ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೇ ಘಟನೆ 'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಸ್ಫೂರ್ತಿ ಆಗಿದ್ಯಾ.? ಈ ಪ್ರಶ್ನೆಗೆ ಡೈರೆಕ್ಟರ್ ಶಶಾಂಕ್ ಕೊಡುವ ಉತ್ತರ ಬೇರೆ.!

  ಶೂಟಿಂಗ್ ಮುಗಿಸಿದ 'ತಾಯಿಗೆ ತಕ್ಕ ಮಗ'ಶೂಟಿಂಗ್ ಮುಗಿಸಿದ 'ತಾಯಿಗೆ ತಕ್ಕ ಮಗ'

  ನಿರ್ದೇಶಕ ಶಶಾಂಕ್ ಏನಂತಾರೆ.?

  ನಿರ್ದೇಶಕ ಶಶಾಂಕ್ ಏನಂತಾರೆ.?

  ''ಭಾರತದಲ್ಲಿ ರಾಜಕಾರಣಿಗಳ ಪುತ್ರರು ಹಲವಾರು ಕೇಸ್ ಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ತಮಗೆ ಇರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಡೆದ ಘಟನೆ ಮಾತ್ರವೇ ಚಿತ್ರಕ್ಕೆ ಪ್ರೇರಣೆ ಅಲ್ಲ. ಅಂತಹ ಬೇರೆ ಬೇರೆ ಉದಾಹರಣೆಗಳನ್ನು ನಾನು ನಿಮಗೆ ನೀಡಬಲ್ಲೆ. ಸಿನಿಮಾದಲ್ಲಿ ಇನ್ನೂ ಸಾಕಷ್ಟು ಅಂಶಗಳಿವೆ'' ಅಂತಾರೆ ನಿರ್ದೇಶಕ ಶಶಾಂಕ್.

  ದುಷ್ಟರು ವರ್ಸಸ್ ಶಿಷ್ಟರು.!

  ದುಷ್ಟರು ವರ್ಸಸ್ ಶಿಷ್ಟರು.!

  'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ದುಷ್ಟ ರಾಜಕಾರಣಿಯ ಪುತ್ರ ಹಾಗೂ ನಿಷ್ಟಾವಂತ ವಕೀಲೆಯ ಪುತ್ರನ ನಡುವಿನ ಸಮರದ ಕಥೆ ಇದೆ. ಜನರಿಗೆ ತೊಂದರೆ ಕೊಡುವ ಜನಪ್ರತಿನಿಧಿಗಳ ವಿರುದ್ಧ ಹೋರಾಡುವ ಮೋಹನ್ ದಾಸ್ ಸುತ್ತ ಹೆಣೆದಿರುವ ಕಥೆಯೇ ಈ ಚಿತ್ರ. 'ತಾಯಿಗೆ ತಕ್ಕ ಮಗ' ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾನೆ.

  English summary
  Is Kannada Movie Thayige Takka Maga based on real incident.? Read the article to know What Director Shashank has to say.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X