ದರ್ಶನ್-ಉಮಾಪತಿ ಕಿತ್ತಾಟ; ನಿರ್ಮಾಪಕರ ಬೆಂಬಲ ಯಾರಿಗೆ? ಪ್ರಡ್ಯೂಸರ್‌ಗಳ ವಾದವೇನು?
ದರ್ಶನ್ ಹಾಗೂ ಉಮಾಪತಿ ಕಿತ್ತಾಟ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ದರ್ಶನ್ ನಿರ್ಮಾಪಕ ಉಮಾಪತಿಗೆ 'ತಡಗು' ಎಂದು ಕರೆದಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ನಿರ್ಮಾಪಕ ಉಮಾಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹೇಳಿಕೆಗಳಿಗೆ ಒಂದಾದ ಮೇಲೆ ಒಂದರಂತೆ ತಿರುಗೇಟು ಕೊಡುತ್ತಲೇ ಇದ್ದಾರೆ. ಇದೇ ವೇಳೆ ಈ ಪ್ರಕರಣಕ್ಕೆ ಕನ್ನಡದ ನಿರ್ಮಾಪಕರು ಏನಂತಾರೆ? ಅನ್ನೋ ಪ್ರಶ್ನೆನೂ ಎದ್ದಿದೆ.
ಇದು ದರ್ಶನ್ ಹಾಗೂ ಉಮಾಪತಿ ನಡುವಿನ ಸಮರ ಆಗಿದ್ದರೂ ಕನ್ನಡದ ನಿರ್ಮಾಪಕರನ್ನು ಎಳೆದು ತಂದಿದ್ದಕ್ಕೆ ಕಾರಣ ಒಂದು ಅಲ್ಬಮ್ ಸಾಂಗ್. ನಿನ್ನೆಯಿಂದಲೂ(ಫೆಬ್ರವರಿ 23) "ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ" ಅನ್ನೋ ಅಲ್ಬಮ್ ಸಾಂಗ್ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಂಜು ಕವಿ ಅನ್ನುವವರು ಈ ಹಾಡಿನ ಸೃಷ್ಟಿಕೃರ್ತ. ಇದರಲ್ಲಿ ಕನ್ನಡದ ಕೆಲವು ನಿರ್ಮಾಪಕರ ಫೋಟೊಗಳನ್ನು ಬಳಸಿಕೊಳ್ಳಲಾಗಿದೆ.

ಒಂದು ಸಿನಿಮಾಗೆ ನಿರ್ಮಾಪಕರೇ ಬಹಳ ಮುಖ್ಯ. ಅವರಿಲ್ಲದೇ ನಮ್ಮ ನಾಟಕ ನಡೆಯೋದಿಲ್ಲ ಅನ್ನೋ ಅರ್ಥದಲ್ಲಿ ಹಾಡನ್ನು ಸೃಷ್ಟಿಸಲಾಗಿದೆ. "ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ, ನಿರ್ಮಾಪಕನಿಂದಲೇ ಬದಲಾಗುವುದು ನಮ್ಮ ಜಾತಕ" ಎಂಬ ಸಾಲು ಕೂಡ ಇದೆ. ಈ ಹಾಡು ರಿಲೀಸ್ ಆಗುತ್ತಿದ್ದಂತೆ ಕೆಲ ನಿರ್ಮಾಪಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದರ್ಶನ್ ಹಾಗೂ ಉಮಾಪತಿ ವಿವಾದದ ಬಗ್ಗೆ ತಮ್ಮ ನಿಲುವೇನು? ಅನ್ನೋದನ್ನು ವ್ಯಕ್ತಪಡಿಸಿದ್ದಾರೆ.
ಉಮಾಪತಿ ಮುಂದಿಟ್ಟು ಮಾಡಿದ ಸಾಂಗ್?
ಈ ಅಲ್ಬಮ್ ಸಾಂಗ್ ಅನ್ನು ನೋಡಿದರೇ, ಉಮಾಪತಿಯನ್ನು ಮುಂದಿಟ್ಟುಕೊಂಡೇ ಈ ಹಾಡು ಮಾಡಿರಬಹುದು ಅನ್ನೋ ಅನುಮಾನ ಮೂಡುತ್ತೆ. ಇನ್ನೊಂದು ಸಂದರ್ಭ ಕೂಡ ಅಂತಹದ್ದೇ ಇರುವುದರಿಂದ ಉಮಾಪತಿಯವರೇ ಈ ಅಲ್ಬಮ್ ಅನ್ನು ಮಾಡಿಸಿರಲಿಕ್ಕೂ ಸಾಧ್ಯ ಅಂತ ಅನಿಸುವುದೂ ಸಹಜ. ಆದರೆ, ಅಸಲಿ ಕಥೆ ಏನು? ಅನ್ನೋದು ಇನ್ನಷ್ಟೆ ಬಹಿರಂಗಗೊಳ್ಳಬೇಕಿದೆ. ಆದರೆ, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸಂದರ್ಶನವೊಂದರಲ್ಲಿ ನಾಲ್ಕು ತಿಂಗಳ ಹಿಂದೆನೇ ಈ ತಂಡ ತಮ್ಮನ್ನು ಸಂಪರ್ಕಿಸಿತ್ತು ಎಂದಿದ್ದಾರೆ.

ಸಾಂಗ್‌ನಲ್ಲಿರೋ ನಿರ್ಮಾಪಕರು ಯಾರು?
"ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ" ಅನ್ನೋ ಅಲ್ಬಮ್ ಸಾಂಗ್‌ನಲ್ಲಿ ಪುಟ್ಟಣ್ಣ ಕಣಗಾಲ್, ಪಾರ್ವತಮ್ಮ ರಾಜ್‌ಕುಮಾರ್, ದ್ವಾರಕೀಶ್, ಜಯಣ್ಣ-ಭೋಗೇಂದ್ರ, ವಿಜಯ್ ಕಿರಗಂದೂರ್, ಶೈಲಜಾ ನಾಗ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಶ್ರೀ ದೇವಿ, ಮುನಿರತ್ನ, ಸೂರಪ್ಪ ಬಾಬು, ರಾಕ್‌ಲೈನ್ ವೆಂಕಟೇಶ್, ಕೋಟಿ ರಾಮು ಸೇರಿದಂತೆ ಕನ್ನಡದ ಪ್ರಮುಖ ನಿರ್ಮಾಪಕರ ಫೋಟೊಗಳಿವೆ. ಈ ಆಲ್ಬಮ್ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಕೆಲ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ.
ಯಾರು ಏನಂದ್ರು?
ನಿರ್ಮಾಪಕ ಸೂರಪ್ಪ ಬಾಬು ಹಾಗೂ ಉಮೇಶ್ ಬಣಕಾರ್ ಪಬ್ಲಿಕ್ ಟಿವಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಅಲ್ಬಮ್‌ನ ಫೋಟೊವನ್ನು ನನಗೆ ಕಳಿಸಿಕೊಟ್ಟಿದ್ದಾರೆ. ನನ್ನ ಫೋಟೊವನ್ನು ಯಾಕೆ ಬಳಸಿಕೊಂಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆ ಹಾಡಿನೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. " ಎಂದಿದ್ದಾರೆ. ಹಾಗೇ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ "ಯಾರು ಮಾಡಿದ್ದಾರೆ ಅನ್ನೋದನ್ನು ಸೂಕ್ಷ್ಮವಾಗಿ ಸ್ಟಡಿ ಮಾಡಬೇಕು. ಇಂದಿನ ಸಂದರ್ಭವನ್ನು ಇಟ್ಕೊಂಡು ಮಾಡಿದ್ದಾರಾ? ಅನ್ನೋದನ್ನು ನೋಡಬೇಕು. ನಾಲ್ಕು ತಿಂಗಳ ಹಿಂದೆ ಸಂದರ್ಶನ ಬೇಕು ಅಂತ ಫೋನ್ ಬಂದಿತ್ತು. " ಎಂದು ಹೇಳಿದ್ದಾರೆ.
ನಿರ್ಮಾಪಕರ ಸಂಘದ ನಿಲುವೇನು?
ನಿರ್ಮಾಪಕ ಸೂರಪ್ಪ ಬಾಬು ಕೂಡ ಈ ಕಿತ್ತಾಟಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಅವರೇ ಬಗೆ ಹರಿಸಿಕೊಳ್ಳಬೇಕು ಎಂದಿದ್ದಾರೆ. ಹಾಗೇ ಉಮೇಶ್ ಬಣಕಾರ್ ಕೂಡ " ನಿರ್ಮಾಪಕ ಅಲ್ಟಿಮೆಟ್. ನಿರ್ಮಾಪಕ ಇಲ್ಲದೆ ಹೋದರೆ ಚಿತ್ರರಂಗವಿಲ್ಲ. ಇದು ಮೇಲ್ನೋಟಕ್ಕೆ ಮಾತಾಡೋ ಮಾತು. ಆದರೆ, ಆಳವಾಗಿ ಹೋದರೆ, ಒಬ್ಬರ ನಿರ್ಮಾಪಕ, ನಟ, ಪ್ರದರ್ಶಕ ಇಲ್ಲದೇ ಹೋದರೆ, ಥಿಯೇಟರ್ ಇಲ್ಲದೆ ಹೋದರೆ ನಿಮ್ಮ ಸಿನಿಮಾವನ್ನು ಎಲ್ಲಿ ತೋರಿಸುತ್ತೀರಿ?" ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ವೈಯಕ್ತಿಕ ಕಿತ್ತಾಟಗಳಿಗೆ ಮಧ್ಯೆ ಪ್ರವೇಶ ಮಾಡೋದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











