ಗುಟ್ಟಾಗಿ ಮದುವೆ ಆದ್ರಾ 'KGF' ನಟಿ ಶ್ರೀನಿಧಿ ಶೆಟ್ಟಿ? ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

By ಫಿಲ್ಮಿಬೀಟ್ ಡೆಸ್ಕ್

'KGF' ಸರಣಿ ಚಿತ್ರಗಳಲ್ಲಿ ರಾಕಿ ಮನದನ್ನೆ ರೀನಾ ದೇಸಾಯಿ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಮೋಡಿ ಮಾಡಿದ್ದು ಗೊತ್ತೇಯಿದೆ. ಮೂಲತಃ ರೂಪದರ್ಶಿಯಾಗಿರುವ ಮಂಗಳೂರು ಚೆಲುವೆ ಹಲವು ಸೌಂದರ್ಯ ಸ್ಫರ್ಧೆಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. 'KGF' ನಂತರ ಒಂದು ತಮಿಳು ಚಿತ್ರದಲ್ಲೂ ನಟಿಸಿದರು. ಶ್ರೀನಿಧಿ ಶೆಟ್ಟಿ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಭಂಟರ ಮನೆ ಹುಡುಗಿ ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. 2016ರಲ್ಲಿ ಮಿಸ್ ದಿವಾ ಸ್ಪರ್ಧೆಯ ವಿಜೇತರಾಗಿದ್ದರು. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ 'ಆಕ್ಸೆಂಚರ್'ನಲ್ಲಿ ಕೆಲಸ ಮಾಡಿದ್ದರು. ಈ ಸಮಯದಲ್ಲೇ ಮಾಡೆಲಿಂಗ್ ಆರಂಭಿಸಿದರು. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆ, ಮಿಸ್ ಸುಪ್ರನ್ಯಾಷನಲ್ ಸೇರಿದಂತೆ ಹಲವು ಕಿರೀಟಗಳು ಈ ಚೆಲುವೆ ಮುಡಿಗೇರಿದೆ.

Srinidhi -Shetty -secret- marriage

ದುಬೈ, ಫ್ರಾನ್ಸ್ , ಜಪಾನ್, ಸಿಂಗಾಪುರ್, ಥೈಲಾಂಡ್, ಪೋಲ್ಯಾಂಡ್ ಸೇರಿದಂತೆ ವಿವಿಧ ದೇಶಗಳ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಇನ್ನು 'KGF' ಚಿತ್ರಕ್ಕೆ ಆಡಿಷನ್ ನೀಡಿ ಆಯ್ಕೆ ಆಗಿದ್ದರ. ಮೊದಲ ಸಿನಿಮಾ ತಡವಾದರೂ ತಾಳ್ಮೆಯಿಂದ ಕಾದರು. ಅದಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿತ್ತು. ಈ ಸಿನಿಮಾ ಮೂಲಕ ರಾತ್ರೋರಾತ್ರಿ ಶ್ರೀನಿಧಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆದರು.

ಶ್ರೀನಿಧಿ ಸೀಕ್ರೇಟ್ ಮ್ಯಾರೇಜ್?

ಅಭಿಮಾನಿಗಳ ಪ್ರೀತಿಯ 'KGF' ರೀನಾ ಸದ್ದಿಲ್ಲದೇ ಮದುವೆಯಾಗಿದ್ದಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಅರೇ ಶ್ರೀನಿಧಿಗೆ ಈ ಮೊದಲೇ ಮದುವೆ ಆಗಿತ್ತಾ? ಅಥವಾ ಸದ್ದಿಲ್ಲದೇ ಮದುವೆ ಆಗಿಬಿಟ್ರಾ? ಒಂದು ಫೋಟೊ ಕೂಡ ಹೊರಗೆ ಬರಲಿಲ್ಲವಲ್ಲ ಅಂತೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆಯ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್. ಆಕೆ ಹಂಚಿಕೊಂಡಿರುವ ಎರಡು ಫೋಟೊಗಳು ಇಂತಾದೊಂದು ಚರ್ಚೆಗೆ ಕಾರಣವಾಗಿದೆ.

ಶ್ರೀನಿಧಿ ಶೆಟ್ಟಿ ಬೈತಲೆಯಲ್ಲಿ ಸಿಂಧೂರ

4 ದಿನಗಳ ಹಿಂದೆ ಶ್ರೀನಿಧಿ ಶೆಟ್ಟಿ ಎರಡು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ಹಳದಿ ಬಣ್ಣದ ಸಲ್ವಾರ್‌ನಲ್ಲಿ ಫೋನ್‌ನಲ್ಲಿ ಸೆಲ್ಫಿ ಹಿಡಿದುಕೊಂಡಿದ್ದಾರೆ. ಆದರೆ ಆ ಫೋಟೊಗಳಲ್ಲಿ ಆಕೆಯ ಬೈತಲೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಮಾತ್ರ ಈ ರೀತಿ ಬೈತಲೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ಕಾರಣಕ್ಕೆ ಕೆಲವರು ಶ್ರೀನಿಧಿಗೆ ಮದುವೆ ಆಗಿಬಿಡ್ತಾ ಎಂದು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಅಸಲಿ ಸಂಗತಿ ಏನು?

ಅಂದಹಾಗೆ ಶ್ರೀನಿಧಿ ಶೆಟ್ಟಿಗೆ ಮದುವೆ ಆಗಿದೆ ಅನ್ನುವುದು ಸುಳ್ಳು. ಆದರೆ ಕೆಲ ಯುವತಿಯರು ಮದುವೆ ಆಗದಿದ್ದರೂ ಬೈತಲೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಕುಮ ಹಚ್ಚಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿ ಕ್ಲಾರಿಟಿ ಕೊಡುತ್ತಿದ್ದಾರೆ. ಒಟ್ನಲ್ಲಿ ಆಕೆಯ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಈ ಬಗ್ಗೆ 'KGF' ರೀನಾ ಪ್ರತಿಕ್ರಿಯೆ ನೀಡುತ್ತಾರಾ? ಕಾದು ನೋಡಬೇಕಿದೆ.

Srinidhi -Shetty -secret- marriage

ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ

'KGF' ಸರಣಿ ನಂತರ ಶ್ರೀನಿಧಿ ಶೆಟ್ಟಿ ತಮಿಳಿನ 'ಕೋಬ್ರಾ' ಚಿತ್ರದಲ್ಲಿ ನಟಿಸಿದರು. ಚಿಯಾನ್ ವಿಕ್ರಂ ಹೀರೊ ಆಗಿ ನಟಿಸಿದ್ದ ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಅದು ಬಿಟ್ಟರೆ ಮತ್ಯಾವುದೇ ಸಿನಿಮಾ ಸದ್ಯಕ್ಕೆ ಈ ಮಂಗಳೂರು ಚೆಲುವೆ ಕೈಯಲ್ಲಿ ಇಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಕೆ ಹೊಸ ಹೊಸ ಫೋಟೊಶೂಟ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ತುಳುನಾಡ ಕುವರಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

More from Filmibeat

English summary
Is KGF actress Srinidhi Shetty secretly married? Her latest photo leaves fans curious. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X