'ಮ್ಯಾಕ್ಸ್' ತೆಲುಗಿನ 'ಕ್ರ್ಯಾಕ್' ಚಿತ್ರದ ರೀಮೇಕಾ? ನೇರ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯೆ

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕಿಚ್ಚನ ಮ್ಯಾಕ್ಸಿಮಮ್ ಆಕ್ಷನ್ ಧಮಾಕ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಸಣ್ಣ ಪುಟ್ಟ ತಪ್ಪುಗಳ ಹೊರತಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಮುಂದೆ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ಕಿದೆ.

ಕ್ರಿಸ್‌ಮಸ್ ಸಡಗರಲ್ಲಿ 'ಮ್ಯಾಕ್ಸ್' ತೆರೆಗೆ ಬಂದಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 1 ಲಕ್ಷಕ್ಕೂ ಅಧಿಕ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿತ್ತು. ಇನ್ನು ಸಿನಿಮಾ ಸೆಟ್ಟೇರಿದ ದಿನದಿಂದಲೂ ಇದು ತೆಲುಗಿನ 'ಕ್ರ್ಯಾಕ್' ಚಿತ್ರದ ರೀಮೆಕ್ ಎನ್ನುವ ವದಂತಿ ಹರಿದಾಡುತ್ತಿತ್ತು. ಕೆಲವರು ಇದೇ ವಿಚಾರದ ಬಗ್ಗೆ ಟ್ರೋಲ್ ಮಾಡುತ್ತಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

Is Max Remake Of Raviteja s Telugu Movie Krack Sudeep reacts

ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಇನ್ನು ಇದು ತೆಲುಗಿನ 'ಕ್ರ್ಯಾಕ್' ರೀಮೇಕಾ? ಎನ್ನುವ ಪ್ರಶ್ನೆ ಸಿನಿಮಾ ಬಿಡುಗಡೆಗೂ ಮುನ್ನವೇ ಕಿಚ್ಚನಿಗೆ ಎದುರಾಗಿತ್ತು. ನ್ಯೂಸ್ 18 ವಾಹಿನಿ ಸಂದರ್ಶನದಲ್ಲಿ ನಟ ಸುದೀಪ್ ಮಾತನಾಡಿದ್ದರು. ಈ ವೇಳೆ ಇಂತಾದೊಂದು ಪ್ರಶ್ನೆ ಎದುರಾದಾಗ ಸುದೀಪ್ ಉತ್ತರಿಸಿದ್ದರು. ಆ ವೀಡಿಯೋ ವೈರಲ್ ಆಗುತ್ತಿದೆ.

"ನಾನು ರೀಮೆಕ್ ಸಿನಿಮಾಗಳನ್ನು ಮಾಡಿದ್ದೇನೆ. ರೀಮೆಕ್ ಮಾಡಿದರೆ ರೀಮೆಕ್ ಎಂದು ಹೇಳಲು ನಾಚಿಕೆ ಏನಿಲ್ಲ" ಎಂದಿದ್ದಾರೆ. ಬಳಿಕ 'ಕ್ರ್ಯಾಕ್' ಸಿನಿಮಾ ಕಥೆ ಏನು? ನನಗೆ ಗೊತ್ತಿಲ್ಲ ಎಂದು ಸುದೀಪ್ ಕೇಳಿದ್ದಾರೆ. ಪೊಲೀಸ್ ಆಫೀಸರ್ ಸೇಡು ತೀರಿಸಿಕೊಳ್ಳುವ ಕಥೆ, ಹೆಚ್ಚು ಕಮ್ಮಿ ಇದಕ್ಕೂ ಅದಕ್ಕೂ ಸಾಮ್ಯತೆ ಇದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ ಎಂದಾಗ "ಇರಬಹುದು ಕೊಂಚ ಸಾಮ್ಯತೆ" ಎಂದು ಸುದೀಪ್ ಹೇಳಿದ್ದರು.

ಸದ್ಯ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿದೆ. 'ಕ್ರ್ಯಾಕ್' ಚಿತ್ರದ ರೀಮೆಕ್ ಎನ್ನುವುದು ಸುಳ್ಳು ಆದರೆ ಕೊಂಚ ತಮಿಳಿನ 'ಕೈದಿ' ಸಿನಿಮಾ ಥೀಮ್ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ 'ಮ್ಯಾಕ್ಸ್' ಚಿತ್ರದ ಕಥೆ ಬಗ್ಗೆಯೂ ಭಾರೀ ಚರ್ಚೆ ನಡೀತಿದೆ. ರೊಟೀನ್ ಸ್ಟೋರಿ ಅನ್ನಿಸಿದರೂ ಅದನ್ನು ತೆರೆಗೆ ತಂದಿರುವ ರೀತಿ ಅದ್ಭುತ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಅಭಿಮಾನಿಗಳಂತೂ 'ಮ್ಯಾಕ್ಸ್' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ವಿಮರ್ಶಕರಿಂದಲೂ ಚಿತ್ರಕ್ಕೆ ಒಳ್ಳೆ ಅಂಕ ಸಿಕ್ಕಿದೆ. ವರ್ಷಾಂತ್ಯದ ರಜೆ ಚಿತ್ರಕ್ಕೆ ಪ್ಲಸ್ ಆಗಲಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಲೆಕ್ಕಾಚಾರ ಶುರುವಾಗಿದೆ. ಇದೇ ಶುಕ್ರವಾರ ತೆಲುಗು ಹಾಗೂ ತಮಿಳು ವರ್ಷನ್ ಸಹ ತೆರೆಗೆ ಬರಲಿದೆ.

ಸುದೀಪ್ ಸ್ಕ್ರೀನ್ ಪ್ರಸೆನ್ಸ್ ಹಾಗೂ ಆಕ್ಷನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಸ್ ಪ್ರೇಮಿಗಳಿಗಂತೂ ಭರ್ಜರಿ ಬಾಡೂಟವನ್ನೇ ಸಿನಿಮಾ ಉಣಬಡಿಸಿದೆ. 'ಯುಐ' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ 'ಮ್ಯಾಕ್ಸ್' ಚಿತ್ರಕ್ಕೆ ಹಿನ್ನಡೆ ಆಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿತ್ತು. ಆದರೆ ಅದನ್ನೆಲ್ಲಾ ಮೀರಿ ಕಿಚ್ಚನ ದರ್ಬಾರ್ ನಡೀತಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮ್ಯಾಕ್ಸ್' ಸಿನಿಮಾ ನಿರ್ಮಾಣವಾಗಿದೆ. ಆದರೆ ಬೇರೆ ಭಾಷೆಗಳಲ್ಲಿ ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ತೆಲುಗು, ತಮಿಳು ಬಿಟ್ಟರೆ ಹಿಂದಿ ಹಾಗೂ ಮಲಯಾಳಂ ವರ್ಷನ್ ಓಟಿಟಿಯಲ್ಲಿ ಮಾತ್ರ ರಿಲೀಸ್ ಆಗುವಂತೆ ಕಾಣುತ್ತಿದೆ. ಈ ಬಗ್ಗೆ ಚಿತ್ರತಂಡ ಕೂಡ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

More from Filmibeat

English summary
Sudeep addressed the rumors surrounding max movie story, he clarifies on speculation
Read more about: sudeep max sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X