For Quick Alerts
  ALLOW NOTIFICATIONS  
  For Daily Alerts

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುತ್ತಾ? ಅಥವಾ ನಿಂತು ಹೋಯ್ತಾ?

  |
  ಮೈ ನೇಮ್ ಇಸ್ ಕಿರಾತಕ ಚಿತ್ರವನ್ನು ಯಶ್ ಮಾಡ್ತಾರಾ? | FILMIBEAT KANNADA

  ಯಶ್ ಈಗ ನ್ಯಾಷಿನಲ್ ಸ್ಟಾರ್ ಆಗಿದ್ದಾರೆ. ಅವರ ಸಿನಿಮಾ ಸಿನಿಮಾಗಳ ಆಯ್ಕೆ ಬದಲಾಗಿದೆ. ಏನೇ ಮಾಡಿದರು 'ಕೆಜಿಎಫ್'ಗಿಂತ ಒಂದು ಹೆಜ್ಜೆ ಮುಂದು ಹೋಗಿ ಮಾಡಬೇಕು ಎನ್ನುವುದು ಯಶ್ ಆಸೆಯಾಗಿರುತ್ತದೆ. ಅಭಿಮಾನಿಗಳು ಕೂಡ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  'ಕೆಜಿಎಫ್ 2' ಬಳಿಕ ಯಶ್ ಯಾವ ಚಿತ್ರ ಮಾಡುತ್ತಾರೆ ಎನ್ನುವ ಪ್ರಶ್ನೆ ಇದೆ. 'ಮೈ ನೇಮ್ ಇಸ್ ಕಿರಾತಕ' ಸಿನಿಮಾ ಯಶ್ ಮುಂದಿನ ಸಿನಿಮಾಗಳ ಪಟ್ಟಿಯಲ್ಲಿ ಇದೆ. ಆದರೆ, ಈ ಸಿನಿಮಾ ಆಗುತ್ತದೆಯೇ ಎನ್ನುವ ಅನುಮಾನ ಅನೇಕರಿಗೆ ಇದೆ. ಕಾರಣ 'ಕೆಜಿಎಫ್' ದೊಡ್ಡ ಗೆಲುವಿನ ನಂತರ ಯಶ್ 'ಮೈ ನೇಮ್ ಇಸ್ ಕಿರಾತಕ' ಸಿನಿಮಾ ಮಾಡುತ್ತಾರೆಯೇ ಎನ್ನುವ ಗೊಂದಲ.

  'ಮಾಸ್ಟರ್ ಪೀಸ್' ನಿರ್ದೇಶಕರ ಬೆನ್ನಿಗೆ ನಿಂತ ರಾಕಿಂಗ್ ಸ್ಟಾರ್ ಯಶ್'ಮಾಸ್ಟರ್ ಪೀಸ್' ನಿರ್ದೇಶಕರ ಬೆನ್ನಿಗೆ ನಿಂತ ರಾಕಿಂಗ್ ಸ್ಟಾರ್ ಯಶ್

  'ಮೈ ನೇಮ್ ಇಸ್ ಕಿರಾತಕ' ಚಿತ್ರದ ಮುಹೂರ್ತ ಈಗಾಗಲೇ ಆಗಿದೆ. ಆದರೆ, ಆ ನಂತರ ಬಗ್ಗೆ ಮಾತೆ ಇಲ್ಲ. ಹೀಗಾಗಿ ಆ ಸಿನಿಮಾದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಇದೀಗ 'ಫಿಲ್ಮಿಬೀಟ್ ಕನ್ನಡ'ಕ್ಕೆ ಮೂಲಗಳ ಪ್ರಕಾರ ಚಿತ್ರದ ಬಗ್ಗೆ ಕೆಲವು ಮಾಹಿತಿ ಸಿಕ್ಕಿದೆ. ಮುಂದೆ ಓದಿ...

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಬರುವುದು ಪಕ್ಕಾ

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಬರುವುದು ಪಕ್ಕಾ

  ''ಮೈ ನೇಮ್ ಇಸ್ ಕಿರಾತಕ' ಸಿನಿಮಾ ಆಗುವುದು ಪಕ್ಕಾ. ಯಶ್ ಈ ಸಿನಿಮಾ ಮಾಡುತ್ತಾರೆ.'' ಈ ಮಾಹಿತಿ ಚಿತ್ರತಂಡದ ಆಪ್ತ ಮೂಲಗಳಿಂದ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕಿದೆ. ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಅದೇ ತಯಾರಿಯಲ್ಲಿ ಇಡೀ ಚಿತ್ರತಂಡ ಇದೆ. ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗುವುದು ತಡ ಆಗಬಹುದು ಆದರೆ, ಸಿನಿಮಾ ಆಗುತ್ತದೆ ಎನ್ನುತ್ತಿವೆ ಮೂಲಗಳು.

  ಜಾಹಿರಾತು ನೀಡಿದ ಚಿತ್ರತಂಡ

  ಜಾಹಿರಾತು ನೀಡಿದ ಚಿತ್ರತಂಡ

  ಇಂದು (ಜನವರಿ 8) ನಟ ಯಶ್ ಹುಟ್ಟುಹಬ್ಬ. ಈ ವಿಶೇಷವಾಗಿ ಚಿತ್ರತಂಡ 'ಮೈ ನೇಮ್ ಇಸ್ ಕಿರಾತಕ'ದ ಜಾಹಿರಾತು ನೀಡಿದೆ. ದಿನಪತ್ರಿಕೆಯಲ್ಲಿ ಸಿನಿಮಾದ ಜಾಹಿರಾತು ನೀಡುವ ಮೂಲಕ ರಾಕಿಂಗ್ ಸ್ಟಾರ್ ಗೆ ಶುಭಾಶಯ ತಿಳಿಸಿದೆ. ಹೀಗಾಗಿ, ಸಿನಿಮಾ ಆಗುವುದು ನಿಜ ಎನ್ನಬಹುದು. ಹಾಗೆನಾದರೂ ಚಿತ್ರ ನಿಂತಿದ್ದರೆ, ಜಾಹಿರಾತು ನೀಡುವ ಅಗತ್ಯವೇ ಇರಲಿಲ್ಲ.

  'ಕಿರಾತಕ'ನ ಫಸ್ಟ್ ಲುಕ್ ರಿವೀಲ್: ಅಣ್ತಮ್ಮಂದಿರ ಜೊತೆ ಯಶ್'ಕಿರಾತಕ'ನ ಫಸ್ಟ್ ಲುಕ್ ರಿವೀಲ್: ಅಣ್ತಮ್ಮಂದಿರ ಜೊತೆ ಯಶ್

  ಸಿನಿಮಾ ಯಾವಾಗ ಶುರು?

  ಸಿನಿಮಾ ಯಾವಾಗ ಶುರು?

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುವುದು ನಿಜ. ಆದರೆ, ಅದು ಯಾವಾಗ ಎನ್ನುವುದು ನಿರ್ಧಾರ ಆಗಿಲ್ಲ. 'ಕೆಜಿಎಫ್' ನಂತರ ಯಶ್ ಗೆ ಬರುವ ಕಥೆಗಳು, ಸಂಪರ್ಕ ಮಾಡುವ ನಿರ್ದೇಶಕ, ನಿರ್ಮಾಪಕರು ಹೆಚ್ಚಾಗಿದ್ದಾರೆ. ಹೀಗಾಗಿ, ಯಶ್ ಯಾವುದಾದರು ಸಿನಿಮಾ ಒಪ್ಪಿಕೊಂಡರೆ, ಅದರಿಂದ ಈ ಸಿನಿಮಾ ತಡ ಆದರೂ ಆಗಬಹುದು.

  ದುಬೈನಲ್ಲಿ ಚಿತ್ರೀಕರಣ

  ದುಬೈನಲ್ಲಿ ಚಿತ್ರೀಕರಣ

  'ಮೈ ನೇಮ್ ಇಸ್ ಕಿರಾತಕ' ಸಿನಿಮಾದ ಚಿತ್ರೀಕರಣ ದುಬೈನಲ್ಲಿಯೇ ಹೆಚ್ಚು ನಡೆಯಲಿದೆ. 'ರಾಂಬೋ 2' ಖ್ಯಾತಿಯ ಅನಿಲ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಜಯಣ್ಣ ಹಾಗೂ ಬೋಗೇಂದ್ರ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯ ನಂತರ ಮತ್ತೆ ಯಶ್ ಸಿನಿಮಾವನ್ನು ಜಯಣ್ಣ ನಿರ್ಮಾಣ ಮಾಡುತ್ತಿದ್ದಾರೆ.

  English summary
  Is My Name Is Kirataka movie project dropped?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X