'ರಾಬರ್ಟ್', 'ನಾರಾಯಣ' ಬಿಟ್ಟಾಕಿ 'ಪೈಲ್ವಾನ್' ಬಗ್ಗೆಯೂ ಶುರುವಾಯ್ತು ಚರ್ಚೆ!

Recommended Video

ಗೊಂದಲಕ್ಕೆ ಏನು ಹೇಳತ್ತೆ ಪೈಲ್ವಾನ್ ಚಿತ್ರತಂಡ?

ದರ್ಶನ್ ಅಭಿನಯದ 'ರಾಬರ್ಟ್', ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ', ಸುದೀಪ್ ಅವರ 'ಪೈಲ್ವಾನ್' ಚಿತ್ರದ ಪೋಸ್ಟರ್ ಗಳು ಒಂದರ ನಂತರ ಒಂದರಂತೆ ಬಂದವು. ಆದರೆ, ಈ ಮೂರು ಪೋಸ್ಟರ್ ಗಳು ಈಗ ನಕಲಿನಾ..? ಅಸಲಿನಾ..? ಎನ್ನುವ ಚರ್ಚೆ ಶುರುವಾಗಿದೆ.

'ರಾಬರ್ಟ್' ಸಿನಿಮಾದ ಪೋಸ್ಟರ್ ಹಾಲಿವುಡ್ ನಟ ರಾಕ್ ಫೋಟೋಗೆ ಹೋಲಿತ್ತಿದೆ ಎಂದು ಸುದ್ದಿಯಾಗಿತ್ತು. ಅದಕ್ಕೆ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ನೀಡಿದ್ದರು. ಆ ಬಳಿಕ 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ಬಾಲಿವುಡ್ ಚಿತ್ರ 'ಫಟ ಪೋಸ್ಟರ್ ನಿಕ್ಲ ಹೀರೋ' ಪೋಸ್ಟರ್ ರೀತಿಯೇ ಇತ್ತು.

ಈ ಎರಡು ಪೋಸ್ಟರ್ ಗಲಾಟೆಯ ನಡುವೆ ಹೊಸದಾಗಿ 'ಪೈಲ್ವಾನ್' ಪೋಸ್ಟರ್ ಬಗ್ಗೆಯೂ ಚರ್ಚೆ ಶುರುವಾಗಿದೆ. ಈ ಪೋಸ್ಟರ್ ಕೂಡ ಹಾಲಿವುಡ್ ಚಿತ್ರವೊಂದಕ್ಕೆ ಹೋಲುತ್ತಿದೆ. ಮುಂದೆ ಓದಿ...

ಏನಿದು ಪೈಲ್ವಾನ್ ಪೋಸ್ಟರ್ ಚರ್ಚೆ ?

ಏನಿದು ಪೈಲ್ವಾನ್ ಪೋಸ್ಟರ್ ಚರ್ಚೆ ?

'ಪೈಲ್ವಾನ್' ಸಿನಿಮಾದ ಪೋಸ್ಟರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ನಾಲ್ಕು ಸೂಪರ್ ಸ್ಟಾರ್ ನಟರು ಪೋಸ್ಟರ್ ಬಿಡುಗಡೆ ಮಾಡಿದ್ದರು. ಪೋಸ್ಟರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿತ್ತು. ಇದೆಲ್ಲದರ ನಡುವೆಯೇ ಪೋಸ್ಟರ್ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಹಾಲಿವುಡ್ ಸಿನಿಮಾದ ಫೋಟೋಗೆ 'ಪೈಲ್ವಾನ್' ಪೋಸ್ಟರ್ ಹೋಲಿಕೆ ಆಗುತ್ತಿದೆ.

ಯಾವ ಹಾಲಿವುಡ್ ಸಿನಿಮಾ?

ಯಾವ ಹಾಲಿವುಡ್ ಸಿನಿಮಾ?

'ಹಾರ್ಡ್ ಟೈಮ್ಸ್' ಎನ್ನುವ ಹಾಲಿವುಡ್ ಚಿತ್ರದ ಫೋಟೋ ಹಾಗೂ ಕನ್ನಡದ 'ಪೈಲ್ವಾನ್' ಪೋಸ್ಟರ್ ಒಂದೇ ರೀತಿ ಇದೆ. ನಾಯಕ ನಟರ ಭಂಗಿ ಒಂದೇ ಆಗಿದ್ದು, ಎರಡು ಫೋಟೋಗಳು ಒಂದೇ ರೀತಿ ಕಾಣುತ್ತಿದೆ. ಅಂದಹಾಗೆ, 'ಹಾರ್ಡ್ ಟೈಮ್' ಚಿತ್ರ ಹಾಲಿವುಡ್ ನಲ್ಲಿ ಬಂದ ಬೆಸ್ಟ್ ಬಾಕ್ಸಿಂಗ್ ಸಿನಿಮಾಗಳಲ್ಲಿ ಒಂದಾಗಿದೆ.

ಅಸಲಿನಾ.. ?, ನಕಲಿನಾ...?

ಅಸಲಿನಾ.. ?, ನಕಲಿನಾ...?

'ಪೈಲ್ವಾನ್' ಸಿನಿಮಾದ ಪೋಸ್ಟರ್ 'ಹಾರ್ಡ್ ಟೈಮ್' ಚಿತ್ರದ ಫೋಟೋಗೆ ಹೋಲಿಕೆ ಆಗುತ್ತಿದ್ದು, ಇದು ಅಸಲಿನಾ.. ?, ನಕಲಿನಾ...? ಎನ್ನುವ ಚರ್ಚೆ ಪ್ರಾರಂಭವಾಗಿದೆ. ಎರಡು ಫೋಟೋಗಳು ಒಂದೇ ಭಂಗಿಯಲ್ಲಿ ಇರುವುದು ಚರ್ಚೆಗೆ ಕಾರಣ ಆಗಿದೆ. ಫೋಟೋ ಕೂಡ ವೈರಲ್ ಆಗಲು ಶುರು ಆಗಿದ್ದು, ಇದರ ಬಗ್ಗೆ ನಿರ್ದೇಶಕ ಕೃಷ್ಣ ಸ್ವಷ್ಟನೆ ನೀಡಬೇಕಾಗಿದೆ.

ಈ ಹಿಂದೆ ಕೂಡ ಹೀಗೆಯೇ ಆಗಿತ್ತು

ಈ ಹಿಂದೆ ಕೂಡ ಹೀಗೆಯೇ ಆಗಿತ್ತು

ಈ ಹಿಂದೆಯೂ 'ಪೈಲ್ವಾನ್' ಮೊದಲ ಪೋಸ್ಟರ್ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ನಟ ಸುದೀಪ್ ಚಿತ್ರಕ್ಕಾಗಿ ಬಾಡಿ ಬಿಲ್ಡ್ ಮಾಡಿಲ್ಲ. ಪೋಸ್ಟರ್ ನಲ್ಲಿ ಇರುವುದು ಫೇಕ್ ಬಾಡಿ ಎಂದು ಕೆಲವರು ಆರೋಪ ಮಾಡಿದ್ದರು. ಈ ಬಗ್ಗೆ ಸುದೀಪ್ ಅವರೇ ಕ್ಲಾರಿಟಿ ನೀಡಿದ್ದರು.

More from Filmibeat

English summary
Is 'Pailwaan' kannada movie poster copyed by hollywood movie 'Hard Times'. 'Pailwaan' movie is starring Kiccha Sudeep and directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X