twitter
    For Quick Alerts
    ALLOW NOTIFICATIONS  
    For Daily Alerts

    'ಪ್ಯಾನ್ ಇಂಡಿಯಾ' ಪರಿಕಲ್ಪನೆಯಿಂದ ಬದಲಾಗುತ್ತದೆ ಕಲಾವಿದರ ಆಯ್ಕೆ

    |

    ಒಂದು ಸಿನಿಮಾದ ಪಾತ್ರಕ್ಕೆ ತಕ್ಕ ಹಾಗೆ ಕಲಾವಿದರ ಆಯ್ಕೆ ನಡೆಯಬೇಕು. ಆದರೆ, ಕಲಾವಿದರ ಆಯ್ಕೆ ಎನ್ನುವುದು ಈಗ ಅದನ್ನು ಮೀರಿ ಮಾರ್ಕೆಟ್ ಗೆ ಮೇಲೆಯೂ ಅವಲಂಬನೆ ಆಗಿದೆ.

    ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಕಾನ್ಸೆಪ್ಟ್ ಬಂದ ಮೇಲೆ ಕಲಾವಿದರ ಆಯ್ಕೆಯ ಪ್ರಕ್ರಿಯೆ ಬದಲಾಗುತ್ತಿದೆ. ಉತ್ತರ ಭಾರತದ ಸಿನಿಮಾಗಳಲ್ಲಿ ದಕ್ಷಿಣ ಭಾರತದ ನಟ, ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸೌತ್ ಇಂಡಿಯಾ ಸಿನಿಮಾಗಳಲ್ಲಿಯೂ ಬಾಲಿವುಡ್ ಕಲಾವಿದರು ಹೆಚ್ಚಾಗಿ ನಟಿಸುತ್ತಿದ್ದಾರೆ.

    ಹಿಂದಿಯಲ್ಲಿ 'ಡಿ-ಬಾಸ್' ಚಿತ್ರಕ್ಕೆ ಬೇಡಿಕೆ ಹೆಚ್ಚಲು ಕಾರಣ ಇದಿರಬಹುದು.! ಹಿಂದಿಯಲ್ಲಿ 'ಡಿ-ಬಾಸ್' ಚಿತ್ರಕ್ಕೆ ಬೇಡಿಕೆ ಹೆಚ್ಚಲು ಕಾರಣ ಇದಿರಬಹುದು.!

    ಇದೀಗ ಬರುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಮಾರ್ಕೆಟ್ ಹೆಚ್ಚು ಮಾಡಬೇಕು ಎನ್ನುವ ದೃಷ್ಟಿಯಿಂದ, ಕಲಾವಿದರ ಆಯ್ಕೆಯ ವಿಧಾನ ಬದಲಾಗಿದೆ. ಆ ರೀತಿಯ ಕೆಲವು ಸಿನಿಮಾಗಳ ವಿವರ ಇಲ್ಲಿದೆ.

    'ಮಿಷನ್ ಮಂಗಲ್'ನಲ್ಲಿ ಸೌತ್ ಕಲಾವಿದರು

    'ಮಿಷನ್ ಮಂಗಲ್'ನಲ್ಲಿ ಸೌತ್ ಕಲಾವಿದರು

    ಅಕ್ಷಯ್ ಕುಮಾರ್ ನಟನೆಯ 'ಮಿಷನ್ ಮಂಗಲ್' ಟ್ರೇಲರ್ ಇತ್ತೀಚಿಗಷ್ಟೆ ಹೊರ ಬಂದಿದೆ. ಈ ಟ್ರೇಲರ್ ಗಮನಿಸಿದರೆ, ಅದರಲ್ಲಿ ಇರುವ ಬಹುತೇಕ ಕಲಾವಿದರು ಸೌತ್ ಇಂಡಿಯಾದವರಾಗಿದ್ದಾರೆ. ಕನ್ನಡದ ದತ್ತಣ್ಣ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಕಲಾವಿದರು ಇರುವ ಕಾರಣ, ಸಿನಿಮಾ ಮತ್ತಷ್ಟು ಜನರಿಗೆ ತಲುಪುತ್ತದೆ.

    ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ? ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ?

    'ಪೈಲ್ವಾನ್' ನಲ್ಲಿ ಸುನೀಲ್ ಶೆಟ್ಟಿ, 'ಕೆಜಿಎಫ್ 2' ನಲ್ಲಿ ಸಂಜಯ್ ದತ್

    'ಪೈಲ್ವಾನ್' ನಲ್ಲಿ ಸುನೀಲ್ ಶೆಟ್ಟಿ, 'ಕೆಜಿಎಫ್ 2' ನಲ್ಲಿ ಸಂಜಯ್ ದತ್

    ಬಾಲಿವುಡ್ ನಟ ಸುನೀಲ್ ಶೆಟ್ಟಿ ಕನ್ನಡದ 'ಪೈಲ್ವಾನ್' ಸಿನಿಮಾದ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇತ್ತ 'ಕೆಜಿಎಫ್ 2' ಸಿನಿಮಾದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತದೆ. 'ಕುರುಕ್ಷೇತ್ರ'ದಲ್ಲಿಯೂ ಸೋನುಸೂದ್ ಮತ್ತು ಡ್ಯಾನಿಶ್ ಇದ್ದಾರೆ. ಈ ಕಾರಣದಿಂದ ಈ ಕಲಾವಿದರು ಸಿನಿಮಾಗೆ ದೊಡ್ಡ ಪ್ಲೆಸ್ ಪಾಯಿಂಟ್ ಆಗಿದ್ದಾರೆ.

    ರಾಜಮೌಳಿ ಕೂಡ ಪಾಲಿಸುತ್ತಿದ್ದಾರೆ ಈ ನಿಯಮ

    ರಾಜಮೌಳಿ ಕೂಡ ಪಾಲಿಸುತ್ತಿದ್ದಾರೆ ಈ ನಿಯಮ

    ನಿರ್ದೇಶಕ ರಾಜಮೌಳಿ ಕೂಡ ಪ್ಯಾನ್ ಇಂಡಿಯಾ ಸಿನಿಮಾದ ಸೂತ್ರ ಪಾಲಿಸುತ್ತಿದ್ದಾರೆ. ತಮ್ಮ ಮುಂದಿನ 'ಆರ್ ಆರ್ ಆರ್'ಗೆ ಸಿನಿಮಾಗೆ ಆಲಿಯಾ ಭಟ್ ರನ್ನು ನಾಯಕಿಯನ್ನಾಗಿ ಮಾಡಿದ್ದಾರೆ. ಹೀಗಾಗಿ, ಆ ಸಿನಿಮಾದ ಕ್ರೇಜ್ ಬಾಲಿವುಡ್ ನಲ್ಲಿ ಮತ್ತಷ್ಟು ಜಾಸ್ತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಯಶ್ ಸ್ಟಾರ್ ಪಟ್ಟ ಉಳಿಸುತ್ತಾರಾ ಪೂರಿ ಜಗನ್ನಾಥ್? ಯಶ್ ಸ್ಟಾರ್ ಪಟ್ಟ ಉಳಿಸುತ್ತಾರಾ ಪೂರಿ ಜಗನ್ನಾಥ್?

    ಮಾರ್ಕೆಟ್ ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯ

    ಮಾರ್ಕೆಟ್ ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯ

    ಬಾಲಿವುಡ್ ಹಾಗೂ ಸೌತ್ ಸೇರಿದಂತೆ ಎಲ್ಲ ಇಂಡಸ್ಟ್ರಿಗಳು ಇಂದು ತಮ್ಮ ಮಾರ್ಕೆಟ್ ಅನ್ನು ಹೆಚ್ಚು ಮಾಡಿಕೊಳ್ಳಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಿವೆ. ಇದು ಅನಿವಾರ್ಯ ಕೂಡ ಆಗಿದೆ. ಅದೇ ಕಾರಣಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಈ ರೀತಿ ಕಲಾವಿದ ಆಯ್ಕೆಗಳಿಗೆ ನಿರ್ದೇಶಕರು ಮುಂದಾಗುತ್ತಾರೆ.

    English summary
    Is pan india movies changed the concept of casting.
    Saturday, August 3, 2019, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X