ಪವಿತ್ರಾ ಗೌಡ ದರ್ಶನ್ ಪತ್ನಿಯೇ ? ಸುಪ್ರೀಂ ಕೋರ್ಟ್ ಪ್ರಶ್ನೆಗೆ ಲಾಯರ್ ಹೇಳಿದ್ದೇನು ?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಪರಪ್ಪನ ಅಗ್ರಹಾರದಿಂದ ಹೊರ ಬಂದಿದ್ದಾರೆ. ಆದರೆ ದರ್ಶನ್‌ಗೆ ಸಂಪೂರ್ಣ ನೆಮ್ಮದಿ ಇನ್ನು ಸಿಕ್ಕಿಲ್ಲ. ಯಾಕೆಂದರೆ ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿದೆ. ಇದರಿಂದ ದರ್ಶನ್ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಹೀಗಾಗಿ ಯಾವ ಕ್ಷಣದಲ್ಲಿ ಅದೇನಾಗುತ್ತೋ ಎಂಬ ಭಯ ದರ್ಶನ್ ಅವರಿಗೆ ಇದ್ದೇ ಇದೆ.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೂಡ ನಡೆದಿದೆ. ವಿಚಾರಣೆ ಮೇ 14ಕ್ಕೆ ನ್ಯಾಯಾಲಯ ಮುಂದೂಡಿದೆ. ಆದರೆ ಈ ಸಮಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸಂಬಂಧದ ಕುರಿತು ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ. ಮಹದೇವರ್ ಅವರಿದ್ದ ದ್ವಿ ಸದಸ್ಯ ಪೀಠ ಪ್ರಶ್ನೆ ಮಾಡಿದೆ.

Is Pavithra Gowda the wife of Darshan Supreme Court asks Find out the lawyer s answer

ಹೌದು, ದರ್ಶನ್ ಮತ್ತು ಪವಿತ್ರಾ ಗೌಡ ಅವರ ನಡುವೆ ಇರುವ ಸಂಬಂಧ ಎಂತಹದ್ದು ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಇಬ್ಬರ ಸಂಬಂಧದ ಕುರಿತು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತೆ. ಇದಕ್ಕೆ ಪೂರಕವಾಗಿ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಜೊತೆ ದರ್ಶನ್ ಜೈಲು ಪಾಲಾದಾಗ ಪೊಲೀಸ್ ಕಮಿಷನರ್ ದಯಾನಂದ್ ಪ್ರಕರಣದ ಕುರಿತು ಮಾಹಿತಿಯನ್ನು ನೀಡುವಾಗ ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸಿದ್ದರು.

ಇದಕ್ಕೆ ಆ ನಂತರ ವಿಜಯಲಕ್ಷ್ಮಿ ಪತ್ರದ ಮೂಲಕ ನಾನು ದರ್ಶನ್ ಅವರ ಏಕೈಕ ಪತ್ನಿ, ಪವಿತ್ರಾ ಗೌಡ ಸ್ನೇಹಿತೆಯಷ್ಟೇ ಎಂದು ಹೇಳಿದ್ದರು. ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ಮನವಿಯನ್ನು ಮಾಡಿದ್ದರು. ಆದರೂ ಕೂಡ ಅನೇಕರಲ್ಲಿ ಇನ್ನು ಗೊಂದಲ ಇದ್ದೇ ಇದೆ.

ಹೀಗಿರುವಾಗ ಇಂದು ನ್ಯಾಯಾಲಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಯಾಗಿದೆ. ಹೌದು, ಇಂದು ನಡೆದ ವಿಚಾರಣೆಯಲ್ಲಿ ದರ್ಶನ್‌ಗೆ ಮದುವೆ ಆಗಿದೆಯೇ ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಬಳಸಿದ ಪದ ಅಲ್ಲಿದ್ದವರನ್ನು ಅಚ್ಚರಿಗೆ ದೂಡಿದೆ.

ಯಾಕೆಂದರೆ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಸಿದ್ಧಾರ್ಥ್ ಲೂಥ್ರಾ, ಮಿಸ್ಟ್ರೆಸ್ಟ್ ಎಂಬ ಪದ ಬಳಸಿದ್ದಾರೆ. ಇನ್ನು ಮಿಸ್ಟ್ರೆಸ್ ಪದಕ್ಕೆ ಇಂಗ್ಲೀಷ್‌ನಲ್ಲಿ ಎರಡು ಅರ್ಥಗಳಿವೆ. ಅಧಿಕಾರದಲ್ಲಿರುವ ಅಥವಾ ಉನ್ನತ ಸ್ಥಾನದಲ್ಲಿರುವ ಮಹಿಳೆಯರನ್ನು ಮಿಸ್ಟ್ರೆಸ್ ಎಂದು ಕರೆಯಲಾಗುತ್ತೆ. ಇದನ್ನು ಹೊರತು ಪಡಿಸಿದರೆ ವಿವಾಹಿತ ಪುರುಷನ ಜೊತೆ ಲೈಂಗಿ*ಕ ಸಂಬಂಧ ಹೊಂದಿರುವ ಮಹಿಳೆಯನ್ನು ಕೂಡ ಮಿಸ್ಟ್ರೆಸ್ ಎಂದು ಕರೆಯಲಾಗುತ್ತೆ. ಕನ್ನಡದಲ್ಲಿ ಒಂದರ್ಥದಲ್ಲಿ ಇಟ್ಟುಕೊಂಡವಳು ಎಂಬ ಅರ್ಥ ಬರುತ್ತೆ.

ಇನ್ನು ಇದೇ ಸಮಯದಲ್ಲಿ ದರ್ಶನ್ ಏನು ರಾಜಕಾರಣಿನಾ ? ಎಂದು ಕೂಡ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಆಗ ವಕೀಲರು ಇಲ್ಲ ಜನಪ್ರಿಯ ನಟ ಎಂದು ಹೇಳಿದ್ದಾರೆ. ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಎಲ್ಲರಿಗೂ ಜಾಮೀನು ಸಿಕ್ಕಿದೆ ಎಂದು ಹೇಳಿದ್ಧಾರೆ. ಆ ನಂತರ ಪ್ರಕರಣದ ತೀವ್ರತೆಯನ್ನು ಕೂಡ ವಿವರಿಸಿದ್ದಾರೆ.

ಇದೇ ಸಮಯದಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಮಾಡಿರುವ ಮೆಸೇಜ್‌ಗಳಿವೆ, ಎಲೆಕ್ಟ್ರಾನಿಕ ಸಾಕ್ಷ್ಯಗಳಿವೆ ಎಂದು ಸಿದ್ಧಾರ್ಥ್ ಲೂಥ್ರಾ ಹೇಳಿದ್ದಾರೆ. ಆ ನಂತರ ಪ್ರತಿ ವಾದ ಮಂಡಿಸಿದ ದರ್ಶನ್ ಪರ ವಕೀಲರಾದ ಮನು ಸಿಂಘ್ವಿ ಕೇವಲ ಮೂರು ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ, ಅದರಲ್ಲೇನು ಗೊತ್ತಾಗುತ್ತೆ ? ಅದನ್ನು ಸಾಕ್ಷಿ ಎಂದು ಹೇಗೆ ಪರಿಗಣಿಸಲಾಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಕೂಡ ಆ ವಿಡಿಯೋ ನೋಡಿಲ್ಲ ಎಂದು ಹೇಳಿದ್ದಾರೆ.

ಹೀಗೆ ವಾದ ಪ್ರತಿವಾದ ಆಲಿಸಿದ ನಂತರ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಿದ್ದು, ಅವತ್ತು ನ್ಯಾಯಾಲಯದಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
In a gripping moment during the Renukaswamy case hearing, the Supreme Court turned its attention to the bond between Kannada actor Darshan and his alleged girlfriend Pavithra Gowda. What the state government’s lawyer revealed next took many by surprise
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X