'ಮೌನ ನನ್ನ ದೌರ್ಬಲ್ಯವಲ್ಲ', ವಿಜಯಲಕ್ಷ್ಮಿ ಪೋಸ್ಟ್ ಬೆನ್ನಲ್ಲೇ ಪವಿತ್ರಾ ಗೌಡ ಮಾತು

By ಫಿಲ್ಮಿಬೀಟ್ ಡೆಸ್ಕ್

ರಮ್ಯಾ- ದರ್ಶನ್ ಮತ್ತು ಪ್ರಥಮ್ ಅವರ ಸೋಶಿಯಲ್ ಮೀಡಿಯಾದಲ್ಲಿನ ರಂಪ-ರಾಮಾಯಣದಲ್ಲಿ ಅನೇಕರು ಪವಿತ್ರಾ ಗೌಡ ಅವರನ್ನು ಮರೆತೇ ಹೋಗಿದ್ದರು. ಆದರೆ.. ಪವಿತ್ರಾ ಗೌಡ ಮಾತ್ರ ಯಾರನ್ನೂ ಮರೆತಿಲ್ಲ. ಎಲ್ಲವನ್ನು ನೋಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಪರೋಕ್ಷವಾಗಿ ಸಂದೇಶವನ್ನು ಕೂಡ ನೀಡುತ್ತಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ.. ದರ್ಶನ್ ಅವರ ಭಕ್ತಗಣದ ವಿರುದ್ಧ ರಮ್ಯಾ ಸಮರ ಸಾರಿದ್ದಾರೆ.

ಆದರೆ .. ದರ್ಶನ್ ಮಾತ್ರ ನೋಡಿಯೂ ನೋಡದಂತೆ.. ಕೇಳಿಯೂ ಕೇಳದಂತೆ.. ತಮ್ಮ ಪಾಡಿಗೆ ಇದ್ದಾರೆ. ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಹಿಂದೊಮ್ಮೆ ಅವರೇ ಹೇಳಿದಂತೆ ''ಇದ್ದರೆ ನೆಮ್ಮದಿಯಾಗಿರಬೇಕು'' ಎಂಬಂತೆ ಇದ್ದಾರೆ.

is-pavithra-gowdas-cryptic-post-a-dig-at-vijayalakshmi-darshan-social-media-erupts-after-gods-ju

ಆದರೆ.. ಗಂಡ ಹೆಂಡತಿಯ ಈ ಅನ್ಯೋನ್ಯತೆಯಿಂದ ಪವಿತ್ರಾ ಗೌಡ ಅವರ ನೆಮ್ಮದಿಗೆ ಕೊಳ್ಳಿ ಬಿದ್ದಿದೆಯಾ ಗೊತ್ತಿಲ್ಲ. ಆದರೆ.. ಅವರ ಇತ್ತೀಚಿನ ಸೋಶಿಯಲ್ ಮೀಡಿಯಾ ಬರಹ ಇಂತಹದ್ದೊಂದು ಅನುಮಾನ ಮೂಡಿಸಿದೆ.

ಯಾಕೆಂದರೆ .. ವಿಜಯಲಕ್ಷ್ಮಿ ಇಂದು ಕಾಮಕ್ಯ ದೇವಿ ಆವರಣದಲ್ಲಿ ತಮ್ಮ ಪತಿ ಜೊತೆ ತೆಗೆಸಿಕೊಂಡ ಫೋಟೊವನ್ನು ಹಂಚಿಕೊಂಡಿದ್ದಾರೆ. "ಎಷ್ಟೇ ಜನ ನಿಮ್ಮನ್ನು ಕೆಳಗೆ ಬೀಳಿಸಲು ಪ್ರಯತ್ನಿಸಿದರೂ ಮೇಲಿರುವ ದೇವರು ನಿಮ್ಮ ಕೈ ಬಿಡುವುದಿಲ್ಲ'' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಇದರ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. 'ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ..' ಎಂದು ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲ ''ನನ್ನ ಮೌನ ನನ್ನ ಬಲಹೀನತೆಯಲ್ಲ, ಅದು ದೇವರ ನ್ಯಾಯದ ಮೇಲೆ ಇರುವ ನಂಬಿಕೆ'' ಎಂದು ಕ್ಯಾಪ್ಷನ್ ನೀಡಿದ್ದಾರೆ. ಪವಿತ್ರಾ ಗೌಡ ಅವರ ಈ ಪೋಸ್ಟ್ ಇದೀಗ ಹಲವರಲ್ಲಿ ಕುತೂಹಲ ಕೆರಳಿಸಿದೆ. ದರ್ಶನ್ ಅವರ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಅವರನ್ನು ಗುರಿಯಾಗಿಸಿಕೊಂಡು ಪವಿತ್ರಾ ಗೌಡ ಈ ಪೋಸ್ಟ್ ಹಂಚಿಕೊಂಡಿರಬಹುದಾ ? ಎನ್ನುವ ಚರ್ಚೆ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಇನ್ನು ಪವಿತ್ರಾ ಗೌಡ ಗುರುರಾಯರ ಪರಮ ಭಕ್ತೆ. ಇಂದು ಗುರುವಾರವಾದ ಹಿನ್ನೆಲೆ ಪವಿತ್ರಾ ಗೌಡ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಹಂಚಿಕೊಂಡಿರಬಹುದು. ಆ ಸಾಧ್ಯತೆ ಇದೆ. ಆದರೆ ಅವರು ಬರೆದುಕೊಂಡ ಮೌನ ಮತ್ತು ದೌರ್ಬಲ್ಯದ ಸಾಲು ಈಗ ಹಲವರಲ್ಲಿ ಪ್ರಶ್ನೆಯನ್ನು ಹುಟ್ಟು ಹಾಕಿದೆ.

is-pavithra-gowdas-cryptic-post-a-dig-at-vijayalakshmi-darshan-social-media-erupts-after-gods-ju

ಇನ್ನುಳಿದಂತೆ ಸದ್ಯ ಪವಿತ್ರಾ ಗೌಡ ತಾವು ಜೈಲಿನಲ್ಲಿದ್ದಾಗ ಮುಚ್ಚಿದ್ದ ತಮ್ಮ 'ರೆಡ್‌ ಕಾರ್ಪೆಟ್ 777 ಸ್ಟುಡಿಯೋ'ಗೆ ಮರು ಜೀವ ನೀಡಿದ್ದಾರೆ. ಇನ್ನು ಇಲ್ಲಿಯವರೆಗೆ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತಿದ್ದವು. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ಸಿಗುತ್ತಿದ್ದವು. ಆದರೆ ಈಗ ತಮ್ಮ ಡಿಸೈನರ್ ಕಲೆಕ್ಷನ್‌ಗಳಲ್ಲಿ ಸೀರೆಯನ್ನು ಕೂಡ ಸೇರಿಸಿದ್ದಾರೆ. ಅತ್ಯಾಕರ್ಷಕ, ವೈವಿಧ್ಯಮಯ, ಡಿಸೈನರ್ ಸೀರೆಗಳನ್ನು ಕೂಡ ಪವಿತ್ರಾ ಗೌಡ ಮಾರುತ್ತಿದ್ದಾರೆ.

ಇಷ್ಟೇ ಅಲ್ಲ ತಮ್ಮ ರೆಡ್‌ ಕಾರ್ಪೆಟ್ ಸ್ಟುಡಿಯೋವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧಾರ ಮಾಡಿರುವ ಪವಿತ್ರಾ ಗೌಡ ಅತ್ಯಾಕರ್ಷಕ ವೆಬ್ ಸೈಟ್ ಮತ್ತು ಅಪ್ಲಿಕೇಶನ್‌ನ ಈ ಆಗಸ್ಟ್ 6ರಂದು ಲಾಂಚ್ ಮಾಡುತ್ತಿದ್ದಾರೆ. ಈ ಮೂಲಕ ಕುಂತಲ್ಲಿಯೇ ರೆಡ್ ಕಾರ್ಪೆಟ್‌ ನಲ್ಲಿ ಬಟ್ಟೆಗಳನ್ನು ಖರೀದಿಸುವ ಅವಕಾಶವನ್ನು ತಮ್ಮ ಗ್ರಾಹಕರಿಗೆ ನೀಡುತ್ತಿದ್ಧಾರೆ.

ಅಂದ್ಹಾಗೇ ರೇಣುಕಾಸ್ವಾಮಿ ಪ್ರಕರಣ ಇನ್ನು ಮುಕ್ತಾಯವಾಗಿಲ್ಲ. ಜುಲೈ 22ಕ್ಕೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಒಂದು ವಾರದಲ್ಲಿ 3 ಪುಟಗಳ ಲಿಖಿತ ವಾದಾಂಶ ಸಲ್ಲಿಸಲು ಸೂಚನೆ ನೀಡಿದೆ. 10 ದಿನಗಳ ಬಳಿಕವಷ್ಟೇ ದರ್ಶನ್ ಜಾಮೀನು ಅರ್ಜಿ ಬಗ್ಗೆ ತೀರ್ಪು ಬರಲಿದೆ.

More from Filmibeat

English summary
A cryptic Instagram story from Pavithra Gowda sparks massive debate. Uncover the viral post following Vijayalakshmi Darshan's photo with Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X