ಪುನೀತ್ ಚಿತ್ರದ ಪೋಸ್ಟರ್ ಕಾಪಿನಾ? 'ದ್ವಿತ್ವ' ಹೋಲುವ ಫೋಟೋ ಯಾವುದಿದು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಎಂಬ ಸಿನಿಮಾ ಬರ್ತಿದೆ. ನಿನ್ನೆಯಷ್ಟೇ ದ್ವಿತ್ವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಬಹಳ ವಿಶೇಷವಾಗಿರುವ ಪೋಸ್ಟರ್ ನೋಡಿ ಅಪ್ಪು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಮೊದಲ ಸಲ ಪುನೀತ್ ರಾಜ್ ಕುಮಾರ್ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಮಾಡ್ತಿದ್ದು, ಅಪ್ಪು ವೃತ್ತಿ ಜೀವನದಲ್ಲೂ ಇದು ಬಹಳ ವಿಭಿನ್ನ ಪೋಸ್ಟರ್ ಎನಿಸಿಕೊಂಡಿದೆ. ಮೊದಲ ಪೋಸ್ಟರ್ ಮೂಲಕವೇ ಚಿತ್ರರಸಿಕರ ಗಮನ ಸೆಳೆದ ಪವನ್ ಕುಮಾರ್ ಮೇಲೆ ಅತಿಯಾದ ನಿರೀಕ್ಷೆ ಹುಟ್ಟಿಕೊಂಡಿದೆ.
ದ್ವಿತ್ವ ಪೋಸ್ಟರ್ ನೋಡಿ ಖುಷಿಯಾಗಿದ್ದ ಅಭಿಮಾನಿಗಳಿಗೆ ಈಗ ಅಚ್ಚರಿಯೊಂದು ಎದುರಾಗಿದೆ. 'ದ್ವಿತ್ವ' ಪೋಸ್ಟರ್ ಹೋಲುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದು ಈ ಪೋಟೋ, ಎಲ್ಲಿನದ್ದು ಎಂದು ಹುಡುಕಿ ಹೋದಾಗ ದ್ವಿತ್ವ ಚಿತ್ರದ ಪೋಸ್ಟರ್ ಕಾಪಿನಾ ಎಂಬ ಅನುಮಾನ ಮೂಡಿದೆ. ಮುಂದೆ ಓದಿ...

'ದ್ವಿತ್ವ' ಪೋಸ್ಟರ್‌ನಂತೆ ಫೋಟೋ
ಪುನೀತ್ ಮತ್ತು ಪವನ್ ಜೋಡಿಯಲ್ಲಿ ಶುರುವಾಗಿರುವ ಹೊಸ ಸಿನಿಮಾದ ದ್ವಿತ್ವ ಪೋಸ್ಟರ್ ಹೋಲುವಂತೆ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ನೋಡಿದ್ರೆ ದ್ವಿತ್ವ ಚಿತ್ರದ ಪೋಸ್ಟರ್ ಡಿಸೈನ್ ಇಲ್ಲಿಂದಾನೇ ಸ್ಫೂರ್ತಿಯಾಗಿರಬಹುದು ಎಂಬ ಅನುಮಾನ ಕಾಡ್ತಿದೆ. ಇದಕ್ಕೆ ನಿರ್ದೇಶಕ ಪವನ್ ಕುಮಾರ್ ಅವರೇ ಉತ್ತರ ಕೊಡಬೇಕಿದೆ.

ಸೌಂಡ್‌ಕ್ಲೌಡ್ ವೆಬ್‌ಸೈಟ್ ಜಾಹೀರಾತು
ದ್ವಿತ್ವ ಪೋಸ್ಟರ್ ಹೋಲುವಂತೆ ವೈರಲ್ ಆಗಿರುವ ಫೋಟೋ ಸೌಂಡ್‌ಕ್ಲೌಡ್ ಎಂಬ ಪಾಡ್‌ಕಾಸ್ಟ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದೊಂದು ಮ್ಯೂಸಿಕ್ ಮತ್ತು ಆಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಈ ಫೋಟೋ ಡಿಸೈನ್ ಇದೆ. ಥೇಟ್ ದ್ವಿತ್ವ ಚಿತ್ರದ ಪೋಸ್ಟರ್‌ನಂತೆ ಇದೆ.

ಪೋಸ್ಟರ್ ಡಿಸೈನ್ ಮಾಡಿದ್ದು ಆದರ್ಶ್
ಅಂದ್ಹಾಗೆ, ದ್ವಿತ್ವ ಚಿತ್ರದ ಪೋಸ್ಟರ್ ಡಿಸೈನ್ ಮಾಡಿರುವುದು ಆದರ್ಶ್ ಎನ್ನುವ ವ್ಯಕ್ತಿ. ಇವರು ಪವನ್ ಕುಮಾರ್ ಜೊತೆ ಬಹುಕಾಲದಿಂದ ಕೆಲಸ ಮಾಡ್ತಿದ್ದಾರೆ. ಲುಸಿಯಾ, ಯೂಟರ್ನ್, ತೆಲುಗು ವೆಬ್ ಸಿರೀಸ್ ಹೀಗೆ ಎಲ್ಲಾ ಸಿನಿಮಾಗಳಲ್ಲು ತೊಡಗಿಕೊಂಡಿದ್ದಾರೆ. ಈ ಪೋಸ್ಟರ್ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿರುವ ಪವನ್ ''ಈ ಒಂದು ಪೋಸ್ಟರ್ ಮೂಲಕ ಹಲವು ವಿಷಯಗಳು ಹೇಳಲು ಸಾಧ್ಯವಾಗಿದೆ'' ಎಂದಿದ್ದರು.
Recommended Video

ದ್ವಿತ್ವ ಎಂದರೇನು?
'ದ್ವಿತ್ವ' ಎಂದರೆ ಎರಡು ರೀತಿಯ ವ್ಯಕ್ತಿತ್ವ ಎಂದು ಈ ಸಿನಿಮಾದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಬ್ಬನೇ ವ್ಯಕ್ತಿಯ ಎರಡು ಮುಖ ಅಥವಾ ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿ ಹೀಗೆ ಭಿನ್ನ ಅರ್ಥಗಳನ್ನು ಸೂಸುತ್ತಿದೆ ಈ ಹೆಸರು.


Click it and Unblock the Notifications











