Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇಸರದಲ್ಲಿ ನಟಿ ರಾಖಿ ಸಾವಂತ್!
ಬಿಗ್ ಬಾಸ್ ಪ್ರಚಾರಕ್ಕಾಗಿ ಮದುವೆ ಆದ್ರಾ ರಾಖಿ ಸಾವಂತ್: ಈಗ ಬ್ರೇಕಪ್ ಯಾಕೆ?
ವಿವಾದಾತ್ಮಕ ನಟಿ ರಾಖಿ ಸಾವಂತ್ ಅವರು ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ವಿವಾದಗಳ ಮೂಲಕವೇ ಸುದ್ದಿ ಆಗುತ್ತಲಿರುತ್ತಾರೆ. ಅಂತೆಯೇ ಈಗ ಮತ್ತೊಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಆದರೆ ಅದು ಅವರ ಪಾಲಿಗೆ ಅತ್ಯಂತ ಕೆಟ್ಟ ವಿಚಾರವಂತೆ. ಯಾಕೆಂದರೆ ರಾಖಿ ರಾವಂತ್ ತನ್ನ ಪತಿಯಿಂದ ದೂರ ಆಗುತ್ತಿದ್ದಾರೆ.
ಅಚ್ಚರಿ:
ರಹಸ್ಯವಾಗಿ
ಮದುವೆ
ಆಗಿದ್ದಾರಂತೆ
ಆಲಿಯಾ,
ರಣ್ಬೀರ್!
ಬಿಗ್ ಬಾಸ್ ಬಳಿಕ ರಾಖಿ ಸಾವಂತ್ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದರು. ಇದೇ ಬಿಗ್ ಬಾಸ್ ಬಳಿಕ ಅವರಿಗೆ ಕಷ್ಟದ ದಿನ ಎದುರಾಗಿದೆಯಂತೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ ರಾಖಿ ಸಾವಂತ್ ಮತ್ತು ರಿತೇಶ್ ಸಿಂಗ್ ಅವರು ಬ್ರೇಕಪ್ ಮಾಡಿಕೊಂಡು ದೂರ ಆಗುತ್ತಿದ್ದಾರೆ. ಈ ವಿಚಾರವನ್ನು ಅವರೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಪೋಸ್ಟ್ ಹಂಚಿಕೊಂಡ ರಾಖಿ ಸಾವಂತ್ ಅವರು ಭಾವುಕ ನುಡಿಗಳನ್ನು ಬತರೆದುಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ನಡುವೆ ಏನೇನೋ ನಡೆದು ಹೋಗಿದೆ. ಹಾಗಾಗಿ ನಾವು ದೂರ ಆಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮಾಂಸಾಹಾರ
ತ್ಯಜಿಸಿ
ವೇಗನ್
ಆದ
ಸಿನಿಮಾ
ತಾರೆಯರಿವರು!

ಈ ವ್ಯಾಲೆಂಟೈನ್ಸ್ ಡೇ ರಾಖಿ ಸಾವಂತ್‌ಗೆ ಕಹಿ ನೆನಪು!
ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳಿದ ಮೇಲೆ ಅವರ ಜನಪ್ರಿಯತೆ ಹೆಚ್ಚಾಯಿತು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಬೀಸಿದೆ. ಮದುವೆಯ ಬಳಿಕವೂ ಅನೇಕ ದಿನಗಳ ಕಾಲ ರಾಖಿ ಸಾವಂತ್ ಅವರ ಮದುವೆ ನಿಗೂಢವಾಗಿಯೇ ಉಳಿದುಕೊಂಡಿತ್ತು. ಆದರೆ ಪತಿಯನ್ನು ಪರಿಚಯಿಸಿದ ನಂತರ ಅವರ ದಾಂಪತ್ಯ ಚೆನ್ನಾಗಿ ಇದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅಷ್ಟರಲ್ಲೇ ರಾಖಿ ಸಾವಂತ್ ಬ್ಯಾಡ್ ನ್ಯೂಸ್ ರಿವೀಲ್ ಮಾಡಿದ್ದಾರೆ. ಹೌದು ನಟಿ ರಾಖಿ ಸಾವಂತ್ ಅವರಿಗೆ ಈ ವ್ಯಾಲೆಂಟೈನ್ಸ್ ಡೇ ಕಹಿ ನೆನಪಾಗಿ ಉಳಿಯಲಿದೆ. ಯಾಕೆಂದರೆ ಅವರು ತಮ್ಮ ಪತಿ ರಿತೇಶ್ ಸಿಂಗ್ ಅವರಿಂದ ದೂರ ಆಗುತ್ತಿದ್ದಾರೆ.
ರಾಖಿ ಫೋಸ್ಟ್‌ನಲ್ಲಿ ಬಾವುಕ ನುಡಿ!
"ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ನಾನು ಮತ್ತು ರಿತೇಶ್ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಬಹಳಷ್ಟು ಘಟನೆಗಳು ಸಂಭವಿಸಿವೆ ಮತ್ತು ನನ್ನ ನಿಯಂತ್ರಣದಲ್ಲಿರದ ಕೆಲವು ವಿಷಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ಆದರೆ ನಾವಿಬ್ಬರೂ ಸೌಹಾರ್ದಯುತವಾಗಿ ಮುಂದುವರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಮತ್ತು ನಾವಿಬ್ಬರೂ ನಮ್ಮ ಜೀವನವನ್ನು ಪ್ರತ್ಯೇಕವಾಗಿ ಆನಂದಿಸುತ್ತೇವೆ." ಎಂದು ಬರೆದುಕೊಂಡಿದ್ದಾರೆ.

ಪ್ರೇಮಿಗಳ ದಿನಕ್ಕೂ ಮೊದಲೇ ಬೇರಾದ ದಂಪತಿ!
"ಇದು ಪ್ರೇಮಿಗಳ ದಿನದ ಮೊದಲೇ ಸಂಭವಿಸಿದ್ದಕ್ಕೆ, ಈ ರೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವುದಕ್ಕೆ ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ. ಮತ್ತು ನಾನು ಎದೆಗುಂದಿದ್ದೇನೆ. ನಾನು, ರಿತೇಶ್ ಜೀವನದಲ್ಲಿ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ ಆದರೆ ನನಗೆ ಜೀವನದಲ್ಲಿ ಈ ಹಂತದಲ್ಲಿ ನನ್ನ ಕೆಲಸ, ನನ್ನ ಸಂತೋಷ ಮತ್ತು ಆರೋಗ್ಯದ ಮೇಲೆ ನಾನು ಹೆಚ್ಚು ಗಮನ ಕೊಡುತ್ತೇನೆ. ಯಾವಾಗಲೂ ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು." ಎನ್ನುವುದನ್ನು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಚ್ಚರಿ ಮೂಡಿಸಿದ ರಾಖಿ ಮದುವೆ, ಬ್ರೇಕಪ್!
ಬಿಗ್ ಬಾಸ್ ಕಾರ್ಯಕ್ರಮದಿಂದಲೇ ರಾಖಿ ಅವರ ಪತಿ ರಿತೇಶ್ ಬಗ್ಗೆ ಹೆಚ್ಚಾಗಿ ಜನರಿಗೆ ತಿಳಿದಿದ್ದು, ಅದರೆ ಕಾರ್ಯಕ್ರಮ ಮುಗಿದ ಬಳಿಕ ಈ ಜೋಡಿ ಅಚ್ಚರಿಯ ಬೆಳವಣಿಗೆಗೆ ಕಾರಣ ಆಗಿದೆ. ಯಾಕೆಂದರೆ ಇದ್ದಕ್ಕಿದ್ದ ಹಾಗೆ ಈ ಜೋಡಿ ದೂರ ಆಗುವ ನಿರ್ಧಾರ ಮಾಡಿದೆ. ಹಾಗಾಗಿ ರಾಖಿ ಸಾವಂತ್ ಬಿಗ್ ಬಾಸ್ ಕಾರ್ಯಕ್ರಮದ ಪ್ರಚಾರಕ್ಕಾಗಿಯೇ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಅದೇನೆ ಇದ್ದರು ಪತಿಯಿಂದ ದೂರ ಆಗಿರು ನೋವನ್ನು ಹಂಚಿಕೊಂಡಿದ್ದಾರೆ.