For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಡೇಟಿಂಗ್‌ ಮಾಡುವ ಹುಡುಗ ಹೀಗಿದ್ದರು ಓಕೆ ಅಂತೆ!

  |

  ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂತ ಬಂದಾಗ ವಧುಗಿಂತ ವರ ಮನಸ್ಸಿನಲ್ಲಿ ದೊಡ್ಡವನು ಇರಬೇಕು ಎನ್ನುವಂತಹ ಮಾತಿದೆ. ಅದನ್ನ ಸಹಸ್ರಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚೆಗೆ ಈ ಯೋಚನೆ ಬದಲಾಗಿದೆ. ಅದರಲ್ಲೂ ಸಿನಿಮಾ ರಂಗ ಅಂತ ಬಂದಾಗ ಈಗಾಗಲೇ ಸಾಷ್ಟು ನಟಿಯರು ತಮಗಿಂತ ಯಸ್ಸಿನಲ್ಲಿ ಕಿರಿಯ ಹುಡುಗನನ್ನು ಮದುವೆಯಾಗಿದ್ದಾರೆ. ಪ್ರಿಯಾಂಕಾ ಛೋಪ್ರ-ನಿಕ್ ಜೋನಸ್, ಐಶ್ವರ್ಯ ರೈ -ಅಭಿಷೇಕ್ ಬಚ್ಚನ್, ನೇಹಾ ದುಪಿಯಾ-ಅಂಗದ್ ಬೇಡಿ, ನಮ್ರತಾ ಶಿರೋಡ್ಕರ್-ಮಹೇಶ್ ಬಾಬು, ಸೋಹಾ ಅಲಿ ಖಾನ್- ಕುನಾಲ್ ಕೆಮು ಅವರಂತಹ ಸಾಕಷ್ಟು ಜೋಡಿಗಳಲ್ಲಿ ನಟಿ ಮಣಿಯರು ತಮಗಿಂತ ವಯಸ್ಸಿನಲ್ಲಿ ಕಿರಿಯವರನ್ನು ಪ್ರೀತಿ, ಡೇಟಿಂಗ್ ನಡೆಸಿ, ಮದುವೆಯೂ ಆಗಿದ್ದಾರೆ. ಈ ಜೋಡಿಗಳು ವಯಸ್ಸಿನ ವಿಚಾರಕ್ಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ಇದೇ ಸಾಲಿಗೆ ಸೇರುವಂತಹ ಸೂಚನೆಯನ್ನು ನಟಿ ರಶ್ಮಿಕಾ ಮಂದಣ್ಣ ಕೊಟ್ಟಿದ್ದಾರೆ. ಈ ವಿಚಾರವಾಗಿ ರಶ್ಮಿಕಾ ಏನು ಮಾತಾಡಿದ್ದಾರೆ. ಮುಂದೆ ಓದಿ.

  ತನಗಿಂತ ಕಿರಿಯ ಹುಡುಗರನ್ನು ಡೇಟಿಂಗ್ ಮಾಡ್ತಾರಂತೆ ರಶ್ಮಿಕಾ ಮಂದಣ್ಣ

  ನಟಿ ರಶ್ಮಿಕಾ ಮಂದಣ್ಣ ಆಗಾಗ ತಮ್ಮ ವೈಯಕ್ತಿಕ ಅಭಿಪ್ರಾಯಗಳಿಂದ ಸುದ್ದಿಯಾಗುತ್ತಾರೆ. ಈಗ ಡೇಟಿಂಗ್‌ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡುತ್ತಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಬಂದಾಗ ಸಿಕ್ಕಾಪಟ್ಟೆ ಸುದ್ದಿ ಆಗಿಬಿಡುತ್ತೆ. ಯಾಕೆಂದರೆ ಎಲ್ಲರಿಗೂ ಗೊತ್ತಿರುವ ವಿಚಾರ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಬ್ರೇಕಪ್ ಆಗಿರುವುದು. ಹಾಗಾಗಿ ರಶ್ಮಿಕಾ ಮದುವೆ, ಪ್ರೀತಿ ಅಥವಾ ಡೇಟಿಂಗ್ ಬಗ್ಗೆ ಏನು ಸುದ್ದಿ ಬಂದರೂ ಕೂಡ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಈಗ ಅಂಥದೇ ಒಂದು ವಿಚಾರದ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

  ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಡೇಟಿಂಗ್ ವಿಚಾರವಾಗಿ ಮಾತನಾಡಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಡೇಟಿಂಗ್ ಮಾಡುವುದರ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಈ ರಶ್ಮಿಕಾ ಉತ್ತರ ನೀಡಿದ್ದಾರೆ. ರಶ್ಮಿಕಾಗೆ ಈಗ 25 ವರ್ಷ ವಯಸ್ಸು ತಮಗಿಂತ ಚಿಕ್ಕ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎನ್ನುವ ಬಗ್ಗೆ ಹಂಚಿಕೊಂಡಿದ್ದಾರೆ."ವಯಸ್ಸು ಮುಖ್ಯವಾಗಿರುವುದಿಲ್ಲ, ವ್ಯಕ್ತಿ ಮುಖ್ಯವಾಗುತ್ತಾರೆ" ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ತನಗಿಂತ ಕಿರಿಯ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಾರೋ, ಇಲ್ಲವೋ ಎನ್ನುವ ಬಗ್ಗೆ ಚಕಾರ ಎತ್ತಿಲ್ಲ. ಬದಲಿಗೆ ಇಲ್ಲಿ ವ್ಯಕ್ತಿ ಮುಖ್ಯವಾಗುತ್ತಾರೆ ವಯಸ್ಸು ಮುಖ್ಯ ಆಗುವುದಿಲ್ಲ ಎನ್ನುವ ಜಾಣತನದ ಉತ್ತರವನ್ನ ರಶ್ಮಿಕಾ ನೀಡಿದ್ದಾರೆ. ರಶ್ಮಿಕಾಳ ಈ ಹೇಳಿಕೆಯೂ ಕೂಡ ಚರ್ಚೆಗೆ ಕಾರಣವಾಗಿದೆ. ಅಂದ್ರೆ ರಶ್ಮಿಕಾ ಮುಂದೆ ತಾನು ಮದುವೆಯಾಗುವ ಹುಡುಗ ಆಕೆಗಿಂತಲೂ ವಯಸ್ಸಿನಲ್ಲಿ ಕಿರಿಯನು ಇದ್ದರೂ ಇರಬಹುದು ಎನ್ನುವಂತಹ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ರಶ್ಮಿಕಾ ಮಂದಣ್ಣ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 17ಕ್ಕೆ ತೆಲುಗಿನ ಪುಷ್ಪ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ರಶ್ಮಿಕಾ ಪಾತ್ರದ ಬಗ್ಗೆ ನಿರೀಕ್ಷೆ ಕೂಡ ಹುಟ್ಟಿ ಕೊಂಡಿವೆ. ಶ್ರೀವಲ್ಲಿ ಮತ್ತು ಸಾಮಿ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವ ಪರಿ ಪಾತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಸಿನಿ ಪ್ರಿಯರಿಗೆ ಟೀಸರ್, ಟ್ರೈಲರ್ ಮತ್ತು ಹಾಡಿನ ಮೂಲಕ ಇಷ್ಟ ಆಗಿದ್ದಾರೆ. ಸಿನಿಮಾದ ಮೂಲಕ ಯಾವ ರೀತಿ ಮೋಡಿ ಮಾಡುತ್ತಾರೆ ಎನ್ನುವುದನ್ನು ನೋಡಬೇಕು. ಜೊತೆಗೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸದ್ಯ ಮಿಷನ್ ಮಜ್ನು ಸಿನಿಮಾದ ರಿಲೀಸ್ ಡೇಟ್ ಮುಂದಿನ ವರ್ಷಕ್ಕೆ ನಿಗದಿಯಾಗಿದೆ. ಬಳಿಕ ಅಮಿತಾಬ್‌ ಬಚ್ಚನ್ ಜೊತೆ ರಶ್ಮಿಕಾ ಅಭಿನಯಿಸುತ್ತಿರುವ ಗುಡ್‌ ಬೈ ಸಿನಿಮಾ ರಿಲೀಸ್ ಆಗಲಿದೆ. ಪುಷ್ಪ ಸಿನಿಮಾ ರಿಲೀಸ್ ಬಳಿಕ ರಶ್ಮಿಕಾರ ಮತ್ತಷ್ಟು ಹೊಸ ಸಿನಿಮಾಗಳು ಪ್ರಕಟಗೊಳ್ಳಲಿವೆ.

  English summary
  Rashmika Mandanna Now Is In Talk Because She Comments On Dating With Young Boy

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X