For Quick Alerts
  ALLOW NOTIFICATIONS  
  For Daily Alerts

  KGF 2: 'ಕೆಜಿಎಫ್ 2' ಸಿನಿಮಾದಲ್ಲಿ ರವೀನಾ ಟಂಡನ್ ಹೀರೋನಾ? ವಿಲನ್ನಾ?

  |

  ಬಹುನಿರೀಕ್ಷಿತ 'ಕೆಜಿಎಫ್ 2' ಸಿನಿಮಾ ಇಂದು ಬಿಡುಗಡೆ ಆಗಿದೆ. 'ಕೆಜಿಎಫ್: ಚಾಪ್ಟರ್ 1' ಸಿನಿಮಾ ಬಿಡುಗಡೆ ಆದ ಮೂರು ವರ್ಷಗಳ ಬಳಿಕ ಈ ಸಿನಿಮಾ ಬಿಡುಗಡೆ ಆಗಿದ್ದು, ಜನ ಬಹುಸಮಯದಿಂದ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರು.

  Recommended Video

  KGF 2 Review | 'KGF 2 ' ಸಿನಿಮಾದಲ್ಲಿ ಏನಿದೆ ? ಏನಿಲ್ಲ? | Yash | First Day First Show Review

  'ಕೆಜಿಎಫ್ 1' ಸಿನಿಮಾಕ್ಕಿಂತಲೂ ದೊಡ್ಡ ಬಜೆಟ್‌ನಲ್ಲಿ, ಬಾಲಿವುಡ್ ತಾರೆಯರನ್ನು ಕರೆತಂದು 'ಕೆಜಿಎಫ್ 2' ಸಿನಿಮಾ ನಿರ್ಮಾಣ ಮಾಡಲಾಗಿದೆ.

  KGF Chapter 2 Review: 'ಕೆಜಿಎಫ್ 2' ಸಿನಿಮಾದಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ವಿಮರ್ಶೆKGF Chapter 2 Review: 'ಕೆಜಿಎಫ್ 2' ಸಿನಿಮಾದಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ವಿಮರ್ಶೆ

  ಸಂಜಯ್ ದತ್, ರವೀನಾ ಟಂಡನ್ ಅವರನ್ನು ಕರೆತಂದ ಪ್ರಶಾಂತ್ ನೀಲ್ ಅವರಿಗಾಗಿ ವಿಶೇಷ ಪಾತ್ರಗಳನ್ನೆ ಹೆಣೆದಿರುತ್ತಾರೆ ಎಂಬ ನಂಬಿಕೆ ಪ್ರೇಕ್ಷಕರದ್ದು. ಸಂಜಯ್ ದತ್, 'ಕೆಜಿಎಫ್ 2' ತಂಡ ಸೇರಿಕೊಂಡಾಗಲೇ ಗೊತ್ತಾಗಿತ್ತು, ಅವರದ್ದು ವಿಲನ್ ಅಧೀರನ ಪಾತ್ರವೆಂದು. ಆದರೆ ರವೀನಾ ಟಂಡನ್ ಪಾತ್ರದ ಬಗ್ಗೆ ಭಾರಿ ಕುತೂಹಲ ಉಳಿಸಿಕೊಂಡಿತ್ತು ಚಿತ್ರತಂಡ.

  ರವೀನಾ ಟಂಡನ್, 'ಕೆಜಿಎಫ್ 2' ನಲ್ಲಿ ರಾಜಕಾರಣಿಯ ಪಾತ್ರದಲ್ಲಿ ನಟಿಸಿದ್ದಾರೆಂಬುದು ಪೋಸ್ಟರ್‌ನಿಂದ ಗೊತ್ತಾಗಿತ್ತು. ಆದರೆ ಸಿನಿಮಾದಲ್ಲಿ ಅವರು ಶಾಸಕಿಯಾ? ಸಂಸದೆಯಾ? ಮುಖ್ಯ ಮಂತ್ರಿಯಾ, ಪ್ರಧಾನ ಮಂತ್ರಿಯಾ? ಅಸಲಿಗೆ ರವೀನಾ ಟಂಡನ್ ನಿರ್ವಹಿಸಿರುವ ರೀಮಾ ಸೇನ್ ನಾಯಕಿಯಾ ಅಥವಾ ವಿಲನ್ನಾ? ಎಂಬ ಅನುಮಾನ ಅಭಿಮಾನಿಗಳಲ್ಲಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ರವೀನಾ ಟಂಡನ್ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟತೆ ದೊರೆತಿದೆ.

  KGF 2 First Half Review: ರಾಕಿ ಭಾಯ್-ಅಧೀರನ ಕಾದಾಟ, ತಾಯಿ ಸೆಂಟಿಮೆಂಟ್ ಮೊದಲಾರ್ಧKGF 2 First Half Review: ರಾಕಿ ಭಾಯ್-ಅಧೀರನ ಕಾದಾಟ, ತಾಯಿ ಸೆಂಟಿಮೆಂಟ್ ಮೊದಲಾರ್ಧ

  ನೇರವಾಗಿ ಹೇಳಿಬಿಡುವುದಾದರೆ 'ಕೆಜಿಎಫ್ 2' ಸಿನಿಮಾದಲ್ಲಿ ರವೀನಾ ಟಂಡನ್‌ರದ್ದು ಪ್ರಧಾನ ಮಂತ್ರಿಯ ಪಾತ್ರ. ರವೀನಾ ನಿರ್ವಹಿಸಿರುವ ರಮಿಕಾ ಸೇನ್ ಪಾತ್ರ ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರಿಂದ ಪ್ರೇರಿತಗೊಂಡ ಪಾತ್ರ. ಸಿನಿಮಾದಲ್ಲಿ ರಮಿಕಾ ಧರಿಸಿರುವ ಸೀರೆ, ಮಾತನಾಡುವ ಧಾಟಿ ಸಹ ಇಂದಿರಾ ಗಾಂಧಿ ಅವರೊಟ್ಟಿಗೆ ಹೋಲುತ್ತದೆ.

  ಇನ್ನು ಸಿನಿಮಾದಲ್ಲಿ ರವೀನಾ ಟಂಡನ್, ಹೀರೋನಾ? ಅಥವಾ ವಿಲನ್ನಾ? ಎನ್ನುವುದಕ್ಕೆ ಸ್ಪಷ್ಟ ಉತ್ತರ ಕೊಡಲು ಸಾಧ್ಯವಿಲ್ಲವಾದರೂ, ಅವರ ಪಾತ್ರ ಯಾವ ಕೆಟಗೆರಿಗೆ ಸೇರುತ್ತದೆಂದು ನಿರ್ಣಯಿಸಲು ಸುಲಭವಾಗುವಂತೆ ಕೆಲವು ಅಂಶಗಳನ್ನು ನೀಡಬಹುದು.

  ಕೆಟ್ಟ ವ್ಯಕ್ತಿಯೊಬ್ಬ ಅಧಿಕಾರದಲ್ಲಿದ್ದಾಗ ಜನಬಲದಿಂದ ಚುನಾವಣೆ ಗೆದ್ದು ರಮಿಕಾ ಸೇನ್ ಪ್ರಧಾನಿ ಆಗುತ್ತಾರೆ. ಪ್ರಧಾನಿ ಆದ ಬಳಿಕವೂ ಬಹಳ ದಿಟ್ಟ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ರಾಕಿ ಭಾಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಕಿಭಾಯ್ ಅನ್ನು ಕ್ರಿಮಿನಲ್ ಎನ್ನುತ್ತಾರೆ. ರಾಕಿಯನ್ನು ಅವನ ಸಾಮಾಜ್ಯವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ರಾಕಿ ಭಾಯ್ ಡೆತ್ ವಾರೆಂಟ್‌ಗೆ ಸಹಿ ಮಾಡುತ್ತಾರೆ.

  ಇವನ್ನೆಲ್ಲ ಮಾಡುವ ರಮಿಕಾ ಸೇನ್ ಹೀರೋನಾ ಅಥವಾ ವಿಲನ್ನಾ? ನೀವೇ ನಿರ್ಧರಿಸಿ...

  English summary
  Raveena Tandon acted in KGF 2 movie. Is Raveena Tandon is a good lady or Villain in KGF 2 movie.
  Thursday, April 14, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X