ನಮ್ಮ ಕ್ರಶ್ ಮದ್ವೆಯಾಗ್ತಿದ್ದಾರೆ ಕಣ್ರಪ್ಪ ಎಂದು ಹೇಳಿದವರಿಗೆ ಮೋಹಕತಾರೆ ರಮ್ಯಾ ಕೊಟ್ಟ ಉತ್ತರವೇನು ?

ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ಎಂದು ಕರೆಯಿಸಿಕೊಂಡಾಗಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಚಿತ್ರರಂಗದಿಂದ ದೂರ ಸರಿದು ರಾಜಕೀಯದ ಚದುರಂಗವಾಡಲು ಹೋದ ರಮ್ಯಾ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಕೂಡ ಹೌದು.

ಇಂಥಾ ರಮ್ಯಾಗೆ ಈಗ 42ರ ಹರೆಯ. ಹೀಗಾಗಿ ಇವರ ಮದುವೆ ಚಿಂತೆಯನ್ನು ಆಗಾಗ ಇವರ ಅಭಿಮಾನಿಗಳು ಮಾಡುತ್ತಿರುತ್ತಾರೆ. ರಮ್ಯಾ ಯಾವುದೇ ಹುಡುಗನ ಜೊತೆ ಕಾಣಿಸಿಕೊಳ್ಳಲಿ ಅವರ ಜೊತೆ ಮದುವೆಯನ್ನು ಮಾಡಿಸಲು ಮುಂದಾಗುತ್ತಾರೆ.ಆ ಹುಡುಗನ ಕುಲ ಗೋತ್ರ ಜಾತಕವನ್ನೆಲ್ಲ ಜಾಲಾಡುತ್ತಾರೆ. ಕಳೆದ ವರ್ಷ ಇಂತಹದ್ದೇ ಒಂದು ಪ್ರಯತ್ನ ನಡೆದಿತ್ತು. ವರ್ಷಾಂತ್ಯದಲ್ಲಿ ರಮ್ಯಾ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

Is Sandalwood Queen Ramya getting married to Sanjeev Mohan Here s what the actress said

ಹೌದು, ಅಸಲಿಗೆ ಕಳೆದ ವರ್ಷ ತಮ್ಮ ಜನುಮದಿನದ ಪ್ರಯುಕ್ತ ರಮ್ಯಾ ಕೀನ್ಯಾ ಪ್ರವಾಸದಲ್ಲಿದ್ದರು. ಈ ಸಮಯದಲ್ಲಿ ಸಂಜೀವ್ ಎಂಬ ವ್ಯಕ್ತಿ ಹ್ಯಾಪಿ ಬರ್ತ್‌ಡೇ ದಿವೂ ಲವ್ ಯು ಫಾರೆವರ್ ಎಂದು ಶುಭ ಕೋರಿದ್ದರು. ರಮ್ಯಾ ಜೊತೆ ಇರುವ ಫೋಟೊ ಶೇರ್ ಮಾಡಿದ್ದರು. ಇದಕ್ಕೆ ರಮ್ಯಾ ಕೂಡ ಲವ್ ಯೂ ಸನಾ ಎಂದು ಉತ್ತರವನ್ನು ನೀಡಿದ್ದರು.

ಇನ್ನು ಸಂಜೀವ್ ಮತ್ತು ರಮ್ಯಾ ಇಬ್ಬರ ಆ ದಿನದ ಲೊಕೇಶನ್ ಒಂದೇ ಆಗಿತ್ತು.ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಸಂಜೀವ್ ಅವರ ಜೊತೆಯಲ್ಲಿಯೇ ರಮ್ಯಾ ಅವರ ಬರ್ತ್‌ಡೇ ಪಾರ್ಟಿ ನಡೆದಿತ್ತು. ಹೀಗಾಗಿ ಎದೆ ಹೊಡೆದುಕೊಂಡ ಅನೇಕರು ಸಂಜೀವ್ ಮೋಹನ್ ಜೊತೆ ರಮ್ಯಾ ಮದುವೆಯಾಗಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ತಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಹುಡುಗನ ಜೊತೆ ರಮ್ಯಾ ಲವ್ವಲ್ಲಿ ಬಿದ್ದಿದ್ದಾರೆ ಎಂದೆಲ್ಲ ಮಾತನಾಡಿದರು. ಆದರೆ, ಈ ಕುರಿತು ರಮ್ಯಾ ಆಗ ಮಾತನಾಡಿರಲಿಲ್ಲ. ಆದರೆ ಈಗ ಮಾತನಾಡಿದ್ದಾರೆ. ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಟ್ರೋಲ್ ಪೇಜ್‌ವೊಂದು ಫೋಸ್ಟ್ ಹಂಚಿಕೊಂಡಿತ್ತು. ಆ ಪೋಸ್ಟ್‌ನಲ್ಲಿ ಸ್ಯಾಂಡಲ್‌ವುಡ್ ಮೋಹಕತಾರೆ ರಮ್ಯಾ ಅವರ ಬಾಯ್‌ಫ್ರೆಂಡ್ ಸಂಜೀವ್ ಮೋಹನ್ ! ಇವರು ರಮ್ಯಾ ಅವರನ್ನು ಪ್ರೀತಿಯಿಂದ Divs ಎಂದು ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ. ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣ್ರಪ್ಪ ಎಂದು ಬರೆಯಲಾಗಿತ್ತು. ಈ ಫೋಸ್ಟ್ ನ ರಮ್ಯಾ ತಮ್ಮ ಇನ್ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೇಕ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಅಂದ್ಹಾಗೇ ಸಂಜೀವ್ ಮೋಹನ್ ಮೊದಲಿಂದ ರಮ್ಯಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜೀವದ ಗೆಳೆಯರು. ಇದಕ್ಕೆ ಕೈಗನ್ನಡಿ ಎಂಬಂತೆ ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಮ್ಯಾಚ್‌ನ್ನೂ ಇಬ್ಬರು ಜೊತೆಯಲ್ಲಿಯೇ ಈ ಹಿಂದೆ ನೋಡಿದ್ದಾರೆ. ಅನೇಲ ಸಲ ಒಟ್ಟಿಗೆ ಪಾರ್ಟಿಯನ್ನು ಮಾಡಿದ್ದಾರೆ.

Is Sandalwood Queen Ramya getting married to Sanjeev Mohan Here s what the actress said

ಅಮೆರಿಕದ ಕ್ಯಾಲಿಫೋರ್ನಿಯಾದ ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದಿಂದ ಜೆಮಾಲಜಿಯಲ್ಲಿ ಪದವಿ ಪಡೆದಿರುವ ಸಂಜೀವ್ ಮೋಹನ್, ಬೆಂಗಳೂರಿನ ರಿಚ್ಮಂಡ್ ರೋಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿಯ ಮಾಲೀಕ ನರಸಿಂಹುಲು ಚೆಟ್ಟಿಯ ಮೊಮ್ಮಗ ಹಾಗೂ ಮುರಳಿ ಮೋಹನ್ ಅವರ ಮಗ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತೆ. ಇವರಿಬ್ಬರನ್ನು ಹತ್ತಿರದಿಂದ ನೋಡಿರುವ ಅನೇಕರ ಪ್ರಕಾರ ರಮ್ಯಾ ಮತ್ತು ಸಂಜೀವ್ ಮೋಹನ್ ಅವರ ನಡುವೆ ಇರುವುದು ಅಕ್ಕ ಮತ್ತು ತಮ್ಮನ ಸಂಬಂಧ. ಒಟ್ನಲ್ಲಿ ಸದ್ಯ ಸಂಜೀವ್ ಮೋಹನ್ ಅವರ ಜೊತೆ ಮದುವೆಯ ಸುದ್ದಿಯನ್ನು ರಮ್ಯಾ ಅಲ್ಲಗೆಳೆದಿದ್ದಾರೆ. ಹೀಗಾಗಿ ರಮ್ಯಾ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ ? ಇದ್ದರೆ ಯಾರು ? ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.

More from Filmibeat

Read more about: ramya divya spandana actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X