twitter
    For Quick Alerts
    ALLOW NOTIFICATIONS  
    For Daily Alerts

    ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡ ಚಿತ್ರರಂಗ ಅಪ್ಸೆಟ್: ಯಾರ್ರೀ ಹೇಳಿದ್ದು? ಸಾಕ್ಷಿ ಕೊಡಿ!

    |

    Recommended Video

    ರಶ್ಮಿಕಾ ಕಂಡ್ರೆ ಕನ್ನಡಿಗರಿಗೆ ಆಗಲ್ವಂತೆ..! | FILMIBEAT KANNADA

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್, ನೆಗೆಟಿವ್ ಕಾಮೆಂಟ್ಸ್ ಜಾಸ್ತಿ ಆಗಿವೆ. ಹಾಗೇ, ಗಾಸಿಪ್ ಕಾಲಂಗಳಲ್ಲೂ ಹೆಚ್ಚು ಸುದ್ದಿ ಆಗುತ್ತಿದ್ದಾರೆ.

    ''ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ, ಟಾಲಿವುಡ್ ಗೆ ಹೋದ ಮೇಲಂತೂ ಅಲ್ಲೇ ಸೆಟಲ್ ಆಗಿದ್ದಾರೆ. ಮರಳಿ ಕನ್ನಡ ಚಿತ್ರರಂಗದ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ, ಸ್ಯಾಂಡಲ್ ವುಡ್ ಮಂದಿ ರಶ್ಮಿಕಾ ಬಗ್ಗೆ ಅಪ್ ಸೆಟ್ ಆಗಿದ್ದಾರೆ'' ಎಂದು ಇತ್ತೀಚೆಗಷ್ಟೇ ಇಂಗ್ಲೀಷ್ ವೆಬ್ ಸೈಟ್ ವೊಂದು ವರದಿ ಮಾಡಿತ್ತು.

    ಈ ವರದಿಯನ್ನು ಓದಿ ರಶ್ಮಿಕಾ ಮಂದಣ್ಣ ಕೊಂಚ ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ ಈ ವರದಿಗೆ ಸಾಕ್ಷಿ ಕೊಡಿ ಎಂದು ಒತ್ತಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

    ವರದಿಯಲ್ಲಿ ಏನಿತ್ತು.?

    ವರದಿಯಲ್ಲಿ ಏನಿತ್ತು.?

    ''ರಶ್ಮಿಕಾ ಮಂದಣ್ಣ ಸದ್ಯದ ಟಾಲಿವುಡ್ ಸೆನ್ಸೇಷನ್. ಇದೀಗ ಅವರ ಕೈಯಲ್ಲಿ ಎರಡು ತೆಲುಗು ಚಿತ್ರಗಳಿವೆ. ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ'' ಎಂದು ಇಂಗ್ಲೀಷ್ ವೆಬ್ ಸೈಟ್ ವೊಂದು ವರದಿ ಮಾಡಿತ್ತು. ಇಷ್ಟೇ ಆಗಿದ್ರೆ, ರಶ್ಮಿಕಾ ಬೇಸರ ಮಾಡಿಕೊಳ್ಳುತ್ತಿರಲಿಲ್ಲ.

    'ಪೊಗರು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.?'ಪೊಗರು' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ.?

    ಕನ್ನಡ ಚಿತ್ರರಂಗ ಅಪ್ಸೆಟ್.!

    ಕನ್ನಡ ಚಿತ್ರರಂಗ ಅಪ್ಸೆಟ್.!

    ''ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಬಂದವರು. ತೆಲುಗು ಚಿತ್ರರಂಗದಿಂದ ರಶ್ಮಿಕಾಗೆ ಉತ್ತಮ ಸಂಭಾವನೆ ಸಿಗುತ್ತಿದೆ. ಹೀಗಾಗಿ, ಕನ್ನಡ ಚಿತ್ರರಂಗದ ಕಡೆಗೆ ರಶ್ಮಿಕಾ ಮುಖ ಮಾಡುತ್ತಿಲ್ಲ. ಹೀಗಾಗಿ, ಆಕೆಯ ವಿರುದ್ಧ ಸ್ಯಾಂಡಲ್ ವುಡ್ ಮಂದಿ ಅಪ್ಸೆಟ್ ಆಗಿದ್ದಾರೆ'' ಎಂದು ಇಂಗ್ಲೀಷ್ ವೆಬ್ ಸೈಟ್ ವರದಿ ಮಾಡಿದೆ.

    ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.!ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.!

    ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ

    ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ

    ಇಂಗ್ಲೀಷ್ ವೆಬ್ ಸೈಟ್ ಮಾಡಿರುವ ವರದಿಯ ಲಿಂಕ್ ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವರದಿ ಬಗ್ಗೆ ಬೇಸರಗೊಂಡಿದ್ದರೂ, ನಗು ನಗುತ್ತಲೇ ಮ್ಯಾನೇಜ್ ಮಾಡಿ ಟ್ವೀಟ್ ಮಾಡಿದ್ದಾರೆ.

    ಅಭಿಮಾನಿಗಳನ್ನ ಬೈದ ವ್ಯಕ್ತಿ ವಿರುದ್ಧ ರಶ್ಮಿಕಾ ಮಂದಣ್ಣ ಸಿಡಿಮಿಡಿಅಭಿಮಾನಿಗಳನ್ನ ಬೈದ ವ್ಯಕ್ತಿ ವಿರುದ್ಧ ರಶ್ಮಿಕಾ ಮಂದಣ್ಣ ಸಿಡಿಮಿಡಿ

    ರಶ್ಮಿಕಾ ಮಂದಣ್ಣ ಟ್ವೀಟ್

    ''ಇದನ್ನು ಯಾರ್ರೀ ಹೇಳಿದ್ದು.? ದಯವಿಟ್ಟು ನನಗೆ ಉತ್ತರ ಕೊಡಿ. ನನ್ನ ಬಗ್ಗೆ ನನ್ನ ಚಿತ್ರರಂಗ ಕೋಪಗೊಂಡಿದೆ ಅಂತ ವರದಿ ಆಗಿರುವುದು ಸತ್ಯಕ್ಕೆ ದೂರವಾದ ಮಾತು. ಇದನ್ನು ನಾನು ನಂಬುವುದಿಲ್ಲ. ನನಗೆ ಸಾಕ್ಷಿ ಬೇಕು.. ಕೊಡಿ ಕೊಡಿ..'' ಎಂದು ರಶ್ಮಿಕಾ ಮಂದಣ್ಣ ಒತ್ತಾಯಿಸಿದ್ದಾರೆ.

    ತರಹೇವಾರಿ ಪ್ರತಿಕ್ರಿಯೆ

    ತರಹೇವಾರಿ ಪ್ರತಿಕ್ರಿಯೆ

    ರಶ್ಮಿಕಾ ರವರ ಈ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ರಶ್ಮಿಕಾ ಪರ ಬ್ಯಾಟಿಂಗ್ ಮಾಡಿದರೆ, ಹಲವರು ಕಾಲೆಳೆದಿದ್ದಾರೆ. ಅಂದ್ಹಾಗೆ, ರಶ್ಮಿಕಾ ಕನ್ನಡದ 'ಯಜಮಾನ' ಮತ್ತು 'ಪೊಗರು' ಚಿತ್ರಗಳಲ್ಲಿ ನಟಿಸಿದ್ದಾರೆ ಅನ್ನೋದು ನಿಮ್ಮ ಗಮನದಲ್ಲಿರಲಿ.

    English summary
    Is Sandalwood upset with Rashmika Mandanna.? Read the article to know the answer.
    Monday, February 11, 2019, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X