ಗುಟ್ಟಾಗಿ ನಡೆಯಿತಾ ಶ್ರೀಲೀಲಾ ಮದುವೆ ? ಅರಿಶಿನ ಶಾಶ್ತ್ರದ ಫೋಟೊಗಳು ವೈರಲ್..!

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.

ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬೀಳಬಹುದು, ಮದುವೆಯ ಬ್ರೇಕಿಂಗ್ ನ್ಯೂಸ್ ಸಿಗಬಹುದು ಎಂದು ಅನೇಕರು ಕಾಯುತ್ತಿರುತ್ತಾರೆ.

is-sreeleela-getting-married-haldi-photos-go-viral-amid-kartik-aaryan-link-up

ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ಸದ್ಯ ಸದ್ದಿಲ್ಲದೇ ಶ್ರೀಲೀಲಾ ಮದುವೆಗೆ ಅಣಿಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇದಕ್ಕೆ ಪೂರಕವಾಗಿ ಶ್ರೀಲೀಲಾ ಅವರ ಫೋಟೊಗಳು ಕೂಡ ವೈರಲ್ ಆಗಿವೆ.

ಹೌದು, ಅಸಲಿಗೆ ಕೆಲ ದಿನಗಳಿಂದ ಬಾಲಿವುಡ್‌ನ ಹೊಸ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ನಿಜ ಜೀವನದಲ್ಲಿ ಕೂಡ ಪ್ರೇಮ ಗೀತೆ ಹಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡೆ ಕೂಡ ಹಾಗೇ ಇದೆ. ಕಾರ್ತಿಕ್ ಆರ್ಯನ್ ಮನೆಯಲ್ಲಿ ಶ್ರೀಲೀಲಾ ಕುಣಿದು ಕುಪ್ಪಳಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಇದು ಸಾಲದು ಎನ್ನುವಂತೆ ಕಾರ್ತಿಕ್ ಆರ್ಯನ್ ಅವರ ತಾಯಿ ಮಾಲಾ ತಿವಾರಿ ಮಾಧ್ಯಮದವರು ನಿಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು, ಅವರ ಮೇಲೆ ನಿಮಗೆ ಇರುವ ನಿರೀಕ್ಷೆಗಳೇನು ಎಂದು ಕೇಳಿದ ಪ್ರಶ್ನೆಗೆ ನನ್ನ ಮಗನ ಕೈ ಹಿಡಿಯುವ ಹುಡುಗಿ ಒಳ್ಳೆಯ ಡಾಕ್ಟರ್ ಆಗಿರಬೇಕು ಎಂದು ಹೇಳಿದ್ದಾರೆ. ಇದು ನನ್ನ ಬೇಡಿಕೆ ಮಾತ್ರವಲ್ಲ ನಮ್ಮ ಇಡೀ ಕುಟುಂಬದ ಬೇಡಿಕೆ ಕೂಡ ಹೌದು ಎಂದು ಹೇಳಿದ್ದಾರೆ.

ಇನ್ನು ಬಹುತೇಕರಿಗೆ ಗೊತ್ತಿರುವಂತೆ ಶ್ರೀಲೀಲಾ ಕೇವಲ ನಾಯಕಿ ಮಾತ್ರ ಅಲ್ಲ. ಆಕ್ಟಿಂಗ್ ಜೊತೆಯಲ್ಲಿ ಶ್ರೀಲೀಲಾ ಎಂಬಿಬಿಎಸ್ ವ್ಯಾಸಂಗವನ್ನು ಕೂಡ ಮಾಡುತ್ತಿದ್ದಾರೆ. ಹೀಗಾಗಿಯೇ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಸಂಬಂಧದ ಕುರಿತು ಈಗ ಅನೇಕರು ತಲೆ ಕೆಡಿಸಿಕೊಂಡಿದ್ದಾರೆ.

ಹೀಗಿರುವಾಗ ಇದೀಗ ಶ್ರೀಲೀಲಾ ಅರಿಶಿನ ಶಾಸ್ತ್ರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಮಿಂಗ್ ಸೂನ್ ಎಂದು ಕೂಡ ಬರೆದುಕೊಂಡಿದ್ದಾರೆ. ಫೋಟೊಗಳಲ್ಲಿ ಶ್ರೀಲೀಲಾ ಹಣೆಗೆ ಕುಂಕುಮ ಹಚ್ಚಲಾಗಿದೆ. ಕೆನ್ನೆಯ ಮೇಲೆ ಅರಿಶಿನ ಕೂಡ ಹಚ್ಚಲಾಗಿದೆ.

ಗುಲಾಬಿ ಡ್ರೆಸ್‌ನಲ್ಲಿರುವ ಶ್ರೀಲೀಲಾ ಅವರಿಗೆ ಅರಿಶಿಣ, ಕುಂಕುಮ ಮತ್ತು ಎಲೆಯನ್ನೊಂದಿರುವ ಟ್ರೇ ಮೂಲಕ ಇಬ್ಬರು ಹಿರಿಯ ಮಹಿಳೆಯರು ಅರಿಶಿಣ ಹಚ್ಚುತ್ತಿದ್ದಾರೆ. ಶ್ರೀಲೀಲಾ ಮೊಗದಲ್ಲಿ ಮಂದಹಾಸ ಅರಳಿದೆ. ಮತ್ತೊಂದು ಫೋಟೊದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಶ್ರೀಲೀಲಾ ಕಂಗೊಳಿಸಿದ್ದಾರೆ.

ಶ್ರೀಲೀಲಾ ಅವರ ಈ ಫೋಟೋಗಳನ್ನು ನೋಡಿದ ಅನೇಕರು ಸದ್ಯ ಶ್ರೀಲೀಲಾ ಗುಟ್ಟಾಗಿ ಮದುವೆಯಾದರಾ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವರು ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ಶೀಘ್ರದಲ್ಲಿಯೇ ನಡೆಯಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಶ್ರೀಲೀಲಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

ಇನ್ನು ಸಾಮಾನ್ಯವಾಗಿ ಖ್ಯಾತಿಯ ಉತ್ತುಂಗದಲ್ಲಿರುವಾಗ ನಟ ನಟಿಯರು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಶ್ರೀಲೀಲಾ ಕೈಯಲ್ಲಿ ಸದ್ಯ ಹಲವು ಅವಕಾಶಗಳಿವೆ. ಹೀಗಾಗಿ ಸಂಬಂಧಿಕರ ಮನೆಯ ಸಮಾರಂಭದಲ್ಲಿ ಶ್ರೀಲೀಲಾ ಭಾಗಿಯಾಗಿರಬಹುದು ಎನ್ನುವ ಅಭಿಪ್ರಾಯವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಶ್ರೀಲೀಲಾ ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಿಜಾಂಶವೇನು ಎನ್ನುವುದನ್ನು ಶ್ರೀಲೀಲಾ ಅವರೇ ಈಗ ಹೇಳಬೇಕಿದೆ.

More from Filmibeat

English summary
Actress Sreeleela's haldi pics stir wedding rumors online, intensifying speculation about her rumored romance with Kartik Aaryan.
Read more about: sreeleela rumours filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X