'ರಣಗಲ್' ಕಥೆಯಲ್ಲಿ ಗಣ ಕೂಡ ಇದ್ದಾನಾ? ರಮೇಶ್ ಅರವಿಂದ್‌ ಪಾತ್ರ ಏನು?

ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ತೆರೆಗಪ್ಪಳಿಸಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಖುಷಿಯಾಗಿದ್ದಾರೆ. ಸಣ್ಣಪುಟ್ಟ ತಪ್ಪುಗಳ ಹೊಸತಾಗಿಯೂ ಸಿನಿಮಾ ಒಳ್ಳೆ ಮನರಂಜನೆ ಉಣಬಡಿಸುತ್ತಿದೆ. ಮತ್ತೊಮ್ಮೆ ರಣಗಲ್ ಆಗಿ ಶಿವಣ್ಣ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಮೇಕಿಂಗ್, ಸೆಟ್, ಆಕ್ಷನ್ ಎಲ್ಲವೂ ಭರ್ಜರಿ ಎನ್ನುವಂತಿದೆ. ವಕೀಲನಾಗಿ ಮಾಫಿಯಾ ಡಾಬ್ ಆಗಿ ಶಿವಣ್ಣ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 'ಮಫ್ತಿ' ಪ್ರೀಕ್ವೆಲ್ ಇದು. ಕನ್ನಡ ಚಿತ್ರರಂಗದಲ್ಲೇ ಮೊದಲ ಪ್ರಯತ್ನ.

Is Srimurali a part of Shivarajkumar s Bhairathi Ranagal what is Ramesh Aravind role

7 ವರ್ಷಗಳ ಹಿಂದೆ 'ಮಫ್ತಿ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಚಿತ್ರದಲ್ಲಿ ಪೊಲೀಸ್ ಆಫೀಸರ್ ಗಣ ಆಗಿ ಶ್ರೀಮುರಳಿ ಅಬ್ಬರಿಸಿದ್ದರು. ಸೆಕೆಂಡ್ ಹಾಫ್‌ನಲ್ಲೇ 'ಭೈರತಿ ರಣಗಲ್' ಶಿವಣ್ಣನ ಆರ್ಭಟ ಇತ್ತು. ಆದರೆ ಇಲ್ಲಿ ಕಂಪ್ಲೀಟ್ ಸಿನಿಮಾ ರಣಗಲ್ ಆವರಿಸಿಕೊಂಡಿದ್ದಾನೆ. ಕೆಟ್ಟವರ ಪಾಲಿಗೆ ಅಚ್ಚರಶಃ ರಕ್ಷಸನಾಗಿದ್ದಾನೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೆದರಲ್ಲ, ದುಷ್ಟರ ತಲೆ, ಕೈ ಕಾಲು ಕಡಿಯಲು ಒಂದು ಕ್ಷಣ ಯೋಚಿಸಲ್ಲ. ಕೊನೆಗೆ ಒಬ್ಬನ ಕಣ್ಣು ಕಿತ್ತು ತಂದು ಟೇಬಲ್ ಮೇಲಿಡುವಷ್ಟು ಕ್ರೌರ್ಯ ಅವನದ್ದು.

'ಭೈರತಿ ರಣಗಲ್' ಚಿತ್ರಕ್ಕಾಗಿ ನಟ ರಮೇಶ್ ಅರವಿಂದ್ ಕೂಡ ಕೆಲಸ ಮಾಡಿದ್ದಾರೆ. ಆದರೆ ನಟನಾಗಿ ತೆರೆಮೇಲೆ ಬಂದಿಲ್ಲ. ಬದಲಿಗೆ ತಮ್ಮ ಹಿನ್ನೆಲೆ ಧ್ವನಿಯ ಮೂಲಕ ಕಥೆಯ ನಿರೂಪಣೆ ಮಾಡುತ್ತಾ ಸಾಗುತ್ತಾರೆ. ಕಥೆ ಅಲ್ಲಲ್ಲಿ ಸೇತುವೆಯಂತೆ ಅವರ ಧ್ವನಿ ಬರುತ್ತಾ ಹೋಗುತ್ತದೆ. ಅದು ಚಿತ್ರಕ್ಕೆ ಪೂರಕವಾಗಿದೆ.

'ಮಫ್ತಿ' ಚಿತ್ರದಲ್ಲಿ ಗಣ ಆಗಿ ಅಬ್ಬರಿಸಿದ್ದ ಶ್ರೀಮುರಳಿ ಕೂಡ ಇರ್ತಾರಾ? ಅದನ್ನು ಸರ್‌ಪ್ರೈಸ್ ಆಗಿ ಚಿತ್ರದಲ್ಲಿ ಇಟ್ಟಿದ್ದಾರಾ? ಎನ್ನುವ ಅನುಮಾನ ಕೆಲವರಲ್ಲಿ ಇತ್ತು. ಆದರೆ 'ಭೈರತಿ ರಣಗಲ್' ಕಥೆಯಲ್ಲಿ ಗಣ ಕಾಣಿಸಲ್ಲ. ಆದರೆ ಗಣ ಯಾಕೆ ರೋಣಾಪುರಕ್ಕೆ ಬಂದ ಎಂದು ಕ್ಲೈಮ್ಯಾಕ್ಸ್ ಮುಗಿದ ಮೇಲೆ ಹಿನ್ನೆಲೆ ಧ್ವನಿ ಮೂಲಕ ಹೇಳಲಾಗುತ್ತದೆ. ಆಗ 'ಮಫ್ತಿ' ಚಿತ್ರದ ಹೈಲೆಟ್ ಸನ್ನಿವೇಶಗಳ ಝಲಕ್ ತೆರೆಮೇಲೆ ಕೊಲಾಜ್ ಆಗಿ ಬರುತ್ತಾ ಹೋಗುತ್ತದೆ. ಇದರಲ್ಲಿ ರೋರಿಂಗ್ ಸ್ಟಾರ್ ಕೂಡ ಕಾಣಿಸುತ್ತಾರೆ.

Is Srimurali a part of Shivarajkumar s Bhairathi Ranagal what is Ramesh Aravind role

ಈಗಾಗಲೇ 'ಮಫ್ತಿ' ಸೀಕ್ವೆಲ್ ಕೂಡ ಮಾಡುವ ಆಲೋಚನೆ ಇರುವುದಾಗಿ ಶಿವಣ್ಣ ಹೇಳಿದ್ದಾರೆ. ಅದಕ್ಕೆ ಸುಳಿವು ಕೊಡುವಂತೆ ಲಿಂಕ್ ಕೊಡುವಂತೆ ಯಾವುದೇ ಸನ್ನಿವೇಶವೂ 'ಭೈರತಿ ರಣಗಲ್' ಚಿತ್ರದಲ್ಲಿಲ್ಲ. ಅಥವಾ 'ಟಗರು-2' ಟೀಸರ್ ರೀತಿ ಯಾವುದೇ ಇಂಟ್ರೆಸ್ಟಿಂಗ್ ಅಂಶವನ್ನು ಕ್ಲೈಮ್ಯಾಕ್ಸ್‌ನಲ್ಲಿ ಪ್ಲ್ಯಾನ್ ಮಾಡಿಲ್ಲ. ರೋಣಾಪುರದ ಜನರಿಗಾಗಿ ರಣಗಲ್ ಯಾಕೆ ಮಾಫಿಯಾ ಡಾನ್ ಆಗಿ ಬದಲಾದ? ಈ ಹಾದಿಯಲ್ಲಿ ಏನೆಲ್ಲಾ ಕಳೆದುಕೊಂಡ? ಕೊನೆಗೆ ಸರ್ಕಾರ ರಣಗಲ್ ಆರ್ಭಟಕ್ಕೆ ಅಂತ್ಯ ಹಾಡಲು ಗಣನನ್ನು ಅಖಾಡಕ್ಕೆ ಯಾಕೆ ಇಳಿಸಿತು? ಎನ್ನುವುದನ್ನಷ್ಟೆ ಹೇಳಿ ಮುಗಿಸಿದ್ದಾರೆ.

'ಭೈರತಿ ರಣಗಲ್' ಚಿತ್ರದ ಸಕ್ಸಸ್ ನೋಡಿ 'ಮಫ್ತಿ' ಸೀಕ್ವೆಲ್ ಮಾಡುವ ಸಾಧ್ಯತೆಯಿದೆ. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಎಷ್ಟರಮಟ್ಟಿಗೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.

ನಿರೀಕ್ಷಿತ ಮಟ್ಟದಲ್ಲಿ 'ಭೈರತಿ ರಣಗಲ್' ಚಿತ್ರಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಲಿಲ್ಲ. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆಯಿದೆ. ಫಸ್ಟ್ ವೀಕೆಂಡ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟಾರೆ ನರ್ತನ್ ಮಾತ್ರ ಸಾಧ್ಯವಾದಷ್ಟು 'ಮಫ್ತಿ'ಗೆ ಒಂದೊಳ್ಳೆ ಪ್ರೀಕ್ವೆಲ್ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

More from Filmibeat

English summary
Shivarajkumar starrer Bhairathi Ranagal released; here is actin thriller highlights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X