ಶ್ರೀಮುರಳಿ 'ಬಘೀರ' ಚಿತ್ರಕ್ಕೆ ಬಿಗ್‌ಬಿ ನಟನೆಯ ಆ ಸಿನಿಮಾ ಪ್ರೇರಣೆ?

ದೀಪಾವಳಿ ಸಂಭ್ರಮದಲ್ಲಿ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಮೊದಲ ನೋಟದಲ್ಲೇ ಇದು ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಪ್ರಶಾಂತ್ ನೀಲ್ ಕಥೆ ಬರೆದಿರುವುದು ಕುತೂಹಲ ಹೆಚ್ಚಿಸಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಬಘೀರ' ಚಿತ್ರ ನಿರ್ಮಾಣವಾಗಿದೆ. ದೊಡ್ಡ ಬಜೆಟ್‌ನಲ್ಲೇ ಚಿತ್ರ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ಟ್ರೈಲರ್ ನೋಡಿದರೆ ಪ್ರತಿ ಫ್ರೇಮ್ ಹುಬ್ಬೇರಿಸುವಂತಿದೆ. ಖಡಕ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಅಬ್ಬರಿಸಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದು ಪ್ರಕಾಶ್ ರಾಜ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್‌ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Is Srimurali starrer bagheera inspired by Amitabh Bachchan s this film

ಟ್ರೈಲರ್ ನೋಡಿದರೆ 'ಬಘೀರ' ಚಿತ್ರದ ಕಥೆ ಏನು ಎನ್ನುವುದರ ಸುಳಿವು ಸಿಗುತ್ತದೆ. ಶ್ರೀಮುರಳಿ ಖಡಕ್ ಪೊಲೀಸ್ ಆಫೀಸರ್ ವೇದಾಂತ್ ಪಾತ್ರದಲ್ಲಿ ನಟಿಸಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವವರ ವಿರುದ್ಧ ಮಾರುವೇಷದಲ್ಲಿ 'ಬಘೀರ'ನಾಗಿ ಸಮರ ಸಾರಿರುವುದನ್ನು ಕೂಡ ನೋಡಬಹುದು. ಹಾಲಿವುಡ್ ಬ್ಯಾಟ್‌ಮ್ಯಾನ್ ಕಾನ್ಸೆಪ್ಟ್‌ನಲ್ಲಿ ಈ ಚಿತ್ರವೂ ಬರ್ತಿದೆ ಎಂದು ಕೆಲವರು ಈಗಾಗಲೇ ಕಾಮೆಂಟ್ ಮಾಡುತ್ತಿದ್ದಾರೆ.

ಹೀರೊ ಹೀಗೆ ಮಾಸ್ಕ್ ಧರಿಸಿ ದುಷ್ಟರ ಸಂಹಾರ ಮಾಡುವ ಕಾನ್ಸೆಪ್ಟ್ ಈಗಾಗಲೇ ಕೆಲ ಚಿತ್ರಗಳಲ್ಲಿ ಬಂದು ಹೋಗಿದೆ. ಕನ್ನಡ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹೀಗೆ ಮಾಸ್ಕ್ ಧರಿಸಿ ಅಬ್ಬರಿಸಿದ ಸನ್ನಿವೇಶಗಳಿದ್ದವು. ಇನ್ನು ತಮಿಳಿನಲ್ಲಿ ಶಿವ ಕಾರ್ತಿಕೇಯನ್ ನಟನೆಯ 'ಹೀರೊ', ಜೀವ ನಟನೆಯ 'ಮುಗಮುಡಿ' ಚಿತ್ರಗಳಲ್ಲಿ ಸಹ ಸಣ್ಣದಾಗಿ ಇಂತಹ ಕಾನ್ಸೆಪ್ಟ್ ಬಂದಿತ್ತು. ಬಾಲಿವುಡ್ 'ಕ್ರಿಶ್' ಸರಣಿ ಚಿತ್ರಗಳಲ್ಲಿ ಕೂಡ ಇದನ್ನು ನೋಡಿದ್ದೇವೆ.

Is Srimurali starrer bagheera inspired by Amitabh Bachchan s this film

ಇತ್ತೀಚೆಗೆ ಪ್ರೇಕ್ಷಕರು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುತ್ತಾರೆ. ವಿದೇಶದ ಚಿತ್ರಗಳನ್ನು, ವೆಬ್‌ ಸೀರಿಸ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಹಾಗಾಗಿ ಯಾವುದೇ ಚಿತ್ರದಿಂದ ಪ್ರೇರಣೆಗೊಂಡು ಸಿನಿಮಾ ಮಾಡಿದರೂ ಕಂಡು ಹಿಡಿದುಬಿಡುತ್ತಾರೆ. ಬರೀ ಪೋಸ್ಟರ್‌, ಟೀಸರ್ ನೋಡಿಯೇ ಚಿತ್ರಕ್ಕೆ ಯಾವ ಸಿನಿಮಾ ಸ್ಫೂರ್ತಿ ಎನ್ನುವ ನಿರ್ಣಯಕ್ಕೆ ಬಂದುಬಿಡುತ್ತಾರೆ. ಹಾಗಂತ ಯಾವುದೋ ಚಿತ್ರದಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡುವುದು ತಪ್ಪಲ್ಲ.

ದೇಶ ವಿದೇಶದ ಸಿನಿಮಾಗಳಿಂದ ಪ್ರೇರಣೆಗೊಂಡು ಮಾಡಿರುವ ಸಾಕಷ್ಟು ಚಿತ್ರಗಳು ಗೆದ್ದಿವೆ. ಎಲ್ಲಿಂದಲೇ ಸ್ಪೂರ್ತಿ ಪಡೆದರೂ ಕೊನೆಯದಾಗಿ ಸಿನಿಮಾ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಬೇಕು ಅಷ್ಟೆ. ರೀಮೆಕ್ ಸಿನಿಮಾಗಳನ್ನು ಮಾಡಿ ಗೆದ್ದವರು ಇದ್ದಾರೆ. ಸದ್ಯ 'ಬಘೀರ' ಚಿತ್ರದ ಟೀಸರ್, ಟ್ರೈಲರ್ ನೋಡಿ ಹಿಂದಿ ಚಿತ್ರದಿಂದ ಪ್ರೇರಣೆಗೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಅಮಿತಾಬ್ ಬಚ್ಚನ್ ನಟನೆಯ 'ಶಾಹೆನ್‌ಶಾ' ಚಿತ್ರದಿಂದ ಸ್ಫೂರ್ತಿ ಪಡೆದು 'ಬಘೀರ' ಚಿತ್ರದ ಕಥೆ ಮಾಡಿದ್ದಾರೆ ಎಂದು ಹೋಲಿಸಿ ನೋಡಲಾಗುತ್ತಿದೆ. ಹೇಳಿ ಕೇಳಿ ಪ್ರಶಾಂತ್ ನೀಲ್ 70, 80 ದಶಕದ ಬಾಲಿವುಡ್ ಆಕ್ಷನ್ ಸಿನಿಮಾಗಳ ಅಭಿಮಾನಿ. ಆ ಸಿನಿಮಾಗಳಿಂದ ಪ್ರಭಾವಿತರಾಗಿ ತಾವು ಸಿನಿಮಾ ಕಥೆಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾರೆ. 1988ರಲ್ಲಿ ಬಂದಿದ್ದ 'ಶಾಹೆನ್‌ಶಾ' ಚಿತ್ರದ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಬಿಗ್‌ಬಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಮಿಂಚಿದ್ದರು.

ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಶ್ರೀವತ್ಸವ(ಅಮಿತಾಬ್ ಬಚ್ಚನ್) ದುಷ್ಟರನ್ನು ಶಿಕ್ಷಿಸಲು 'ಶೆಹನ್‌ಶಾ' ವೇಷ ಹಾಕುತ್ತಾನೆ. ಕಾನೂನಿನಿಂದ ತಪ್ಪಿಸಿಕೊಳ್ಳುವವರನ್ನು ರಾತ್ರಿ ಹೊತ್ತು ಬೇಟೆ ಆಡುತ್ತಿರುತ್ತಾನೆ. ಆದರೆ ಆ ಚಿತ್ರದಲ್ಲಿ ಬಿಗ್‌ಬಿ ಯಾವುದೇ ಮಾಸ್ಕ್ ಧರಿಸಿರುವುದಿಲ್ಲ. ಬದಲಿಗೆ ಕುರುಚಲು ಗಡ್ಡ ಬಿಟ್ಟು, ಮುಂಗೂದಲನ್ನು ಒಂದು ಕಣ್ಣು ಮುಚ್ಚುವಂತೆ ಮುಂದಕ್ಕೆ ಬಿಟ್ಟು ಗುರುತು ಸಿಗದಂತೆ ಕಾಣಿಸಿಕೊಂಡಿದ್ದರು. ಟಿನ್ನು ಆನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಮೊದಲೇ ಹೇಳಿದಂತೆ ಚಿತ್ರಮಂದಿರಗಳಲ್ಲಿ ಲೈಫ್ ಆಫ್ ಅದ ಬಳಿಕ ತೆರೆಮೇಲೆ ಬರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕು ಅಷ್ಟೆ. ಯಾವುದೋ ಚಿತ್ರದ ಕಾಪಿ, ಪ್ರೇರಣೆ, ಸ್ಫೂರ್ತಿ ಎನ್ನುವುದೆಲ್ಲಾ ಇಲ್ಲಿ ಲೆಕ್ಕಕ್ಕೆ ಬರಲ್ಲ. 'ಬಘೀರ' ಚಿತ್ರಕ್ಕಾಗಿ ಶ್ರೀಮುರಳಿ ಬಹಳ ಶ್ರಮ ವಹಿಸಿದ್ದಾರೆ. ಅದಕ್ಕೆ ಪ್ರತಿಫಲ ಸಿಗುವ ಸಮಯ ಹತ್ತಿರ ಬಂದಿದೆ. "ಸಿನಿಮಾ ಚೆನ್ನಾಗಿ ಇದ್ದರೆ ಮಾತ್ರ ಉಳಿಸಿ ಇಲ್ಲಾಂದ್ರೆ ಬ್ಯಾಡ " ಎಂದು ನಿರ್ದೇಶಕ ಡಾ. ಸೂರಿ ಬಗಳ ಕಾನ್ಫಿಡೆಂಟ್‌ನಿಂದ ಹೇಳಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Section of netizens debate on bagheera trailer, say shots inspired from this Bollywood film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X