'ದಿ ವಿಲನ್' ತಂಡದ ಮೇಲೆ ಬೇಸರಗೊಂಡರಾ ಸುದೀಪ್?
'ನಟ ಕಿಚ್ಚ ಸುದೀಪ್ 'ದಿ ವಿಲನ್' ತಂಡದ ಮೇಲೆ ಬೇಸರಗೊಂಡರ?' ಎನ್ನುವ ಪ್ರಶ್ನೆ ಈಗ ಏಕೆ ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಆದರೆ, ಸುದೀಪ್ ಅವರ ಒಂದು ಟ್ವೀಟ್ ಈಗ ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮರಾಠಿಯ ಪತ್ರಿಕೆಯೊಂದರಲ್ಲಿ 'ದಿ ವಿಲನ್' ಚಿತ್ರದ ಜಾಹೀರಾತು ಬಂದಿತ್ತು. ಅದನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ ಖಾತೆಯ ಮೂಲಕ ಕಿಚ್ಚನ ಜೊತೆಗೆ ಹಂಚಿಕೊಂಡಿದ್ದರು. ಅದಕ್ಕೆ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದು, ಅದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು ತಿಳಿಯದಾಗಿದೆ.

''ಆ (ಮರಾಠಿ) ಪತ್ರಿಕೆಗಳಲ್ಲಿ ನಮ್ಮ ಸಿನಿಮಾದ ಜಾಹೀರಾತು ನೋಡಲು ಖುಷಿ ಆಗುತ್ತದೆ. ಆದರೆ, ಇಂತಹ ಜಾಹೀರಾತು ನಮ್ಮ ಪತ್ರಿಕೆಗಳಲ್ಲಿ ಎಲ್ಲಿ?. ಚಿತ್ರ ರಿಲೀಸ್ ಆದ ಒಂದು ವಾರಗಳ ನಂತರ ನನ್ನ ಕಾಳಜಿ ವಿಶ್ರಾಂತಿಗೆ ಮರಳಿತು. ನೀವು ಏನಾದರೂ ನಮ್ಮ 'ದಿ ವಿಲನ್' ಚಿತ್ರತಂಡವನ್ನು ಭೇಟಿ ಮಾಡಿದರೆ, ನಾನು ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂಬ ವಿಷಯವನ್ನು ತಲುಪಿಸಿ'' ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, ಸುದೀಪ್ ತಮ್ಮ ಈ ಟ್ವೀಟ್ ಮೂಲಕ ತಮಾಷೆ ಮಾಡಿದ್ದಾರೋ ಅಥವಾ ಪರೋಕ್ಷವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೋ ಗೊತ್ತಾಗುತ್ತಿಲ್ಲ.


Click it and Unblock the Notifications











