ಸುಕುಮಾರ್ ಜೊತೆ ಡಿ-ಬಾಸ್ ಸಿನಿಮಾ ಮಾಡ್ತಾರಾ? ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗ್ತಿದೆ!

ಕನ್ನಡ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿರುವ ನಟ ದರ್ಶನ್ ಮೇಲೆ ಪರಭಾಷೆ ನಿರ್ದೇಶಕರೊಬ್ಬರು ಕಣ್ಣಾಕಿದ್ದಾರೆ ಎಂಬ ಕುತೂಹಲ, ಅನುಮಾನ, ನಿರೀಕ್ಷೆ ಬಹಳ ದಿನಗಳಿಂದ ಕಾಡ್ತಿದೆ. ಟಾಲಿವುಡ್ ಇಂಡಸ್ಟ್ರಿ ಯಶಸ್ವಿ ನಿರ್ದೇಶಕನ ಜೊತೆ ಡಿ ಬಾಸ್ ಕೈ ಜೋಡಿಸುತ್ತಾರಾ? ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಬಹುದಾ? ಹೀಗೆ ಪ್ರಶ್ನೆಗಳು ಆಗಾಗ ಚರ್ಚೆಯಾಗುತ್ತಲೇ ಇದೆ.

ಈಗ ಇಂತಹದೊಂದು ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ತೆಲುಗು ನಿರ್ದೇಶಕ ಸುಕುಮಾರ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿದ್ದು, ಇದರ ಬೆನ್ನಲ್ಲೆ ಇವರಿಬ್ಬರ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ. ಮುಂದೆ ಓದಿ...

ಸುಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ದರ್ಶನ್

ಸುಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ದರ್ಶನ್

ತೆಲುಗು ಸ್ಟಾರ್ ನಿರ್ದೇಶಕ ಸುಕುಮಾರ್ ಅವರ ಹುಟ್ಟುಹಬ್ಬಕ್ಕೆ ದಾಸ ದರ್ಶನ್ ಶುಭಕೋರಿದ್ದಾರೆ. ಸುಕುಮಾರ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ದರ್ಶನ್ ''ಹ್ಯಾಪಿ ಬರ್ತಡೇ ಸುಕುಮಾರ್ ಅವರೇ, ನಿಮಗೆ ಹೆಚ್ಚು ಯಶಸ್ಸು ಸಿಗಲಿ'' ಎಂದು ಹಾರೈಸಿದ್ದಾರೆ.

ಸಿನಿಮಾ ಬರುತ್ತೆ ಎಂಬ ನಂಬಿಕೆ

ಸಿನಿಮಾ ಬರುತ್ತೆ ಎಂಬ ನಂಬಿಕೆ

ಕರ್ನಾಟಕದ ಮಾಸ್ ಹೀರೋ ಹಾಗೂ ತೆಲುಗಿನ ಕ್ರಿಯೇಟಿವ್ ನಿರ್ದೇಶಕ ಜೋಡಿಯಲ್ಲಿ ಒಂದು ಸಿನಿಮಾ ಬಂದ್ರೆ ಹೇಗಿರುತ್ತೆ ಎಂಬ ಕುತೂಹಲ ಡಿ ಬಾಸ್ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ದರ್ಶನ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಈ ಕಾಂಬಿನೇಷನ್‌ನಿಂದ ಸರ್ಪ್ರೈಸ್ ಇದೆಯಾ ಎಂದು ಕೇಳುತ್ತಿದ್ದಾರೆ.

ಈ ಕಾಂಬಿನೇಷನ್ ಬೇಕು

ಈ ಕಾಂಬಿನೇಷನ್ ಬೇಕು

ಸುಕುಮಾರ್ ಜೊತೆ ದರ್ಶನ್ ಸಿನಿಮಾ ಮಾಡಲಿ, ಈ ಜೋಡಿಯಿಂದ ಒಂದು ಚಿತ್ರ ಬರಲಿ ಎಂದು ಅಭಿಮಾನಿಗಳು ಆಪೇಕ್ಷಿಸುತ್ತಿದ್ದಾರೆ. ಸುಕುಮಾರ್ ಅವರು ಭೇಟಿ ಮಾಡಿದ್ದು, ಈಗ ಸುಕುಮಾರ್ ಬರ್ತಡೇಗೆ ದಾಸ ವಿಶ್ ಮಾಡಿದ್ದು ಈ ಎಲ್ಲವನ್ನು ಗಮನಿಸಿದರೆ ಪ್ಲಾನಿಂಗ್ ಏನಾದರೂ ನಡೆಯುತ್ತಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದರು

ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದರು

2018ರಲ್ಲಿ ಬೆಂಗಳೂರಿಗೆ ಬಂದಿದ್ದ ಸುಕುಮಾರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಒಡೆಯ ಸಿನಿಮಾ ಸೆಟ್‌ನಲ್ಲಿ ಡಿ ಬಾಸ್ ಅವರನ್ನು ಭೇಟಿ ಸುಕುಮಾರ್ ಕ್ಯಾರಾವನ್‌ನಲ್ಲಿ ಕುಳಿತು ಯೋಗಕ್ಷೇಮ ವಿಚಾರಿಸಿದ್ದರು. ಆಗಲೇ ಈ ಜೋಡಿ ಮೇಲೆ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿತ್ತು. ಈಗ ಮತ್ತೊಮ್ಮೆ ಇಂತಹ ಆಸೆ ಅಭಿಮಾನಿಗಳಲ್ಲಿ ಉಂಟಾಗಿದೆ.

'ಪುಷ್ಪ' ನಿರ್ದೇಶಿಸುತ್ತಿರುವ ಸುಕುಮಾರ್

'ಪುಷ್ಪ' ನಿರ್ದೇಶಿಸುತ್ತಿರುವ ಸುಕುಮಾರ್

ಅಲ್ಲು ಅರ್ಜುನ್ ನಟಿಸುತ್ತಿರುವ 'ಪುಷ್ಪ' ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. 'ರಂಗಸ್ಥಳಂ' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ' ಆರಂಭಿಸಿದ್ದರು. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿ. ಈ ಕಡೆ ರಾಬರ್ಟ್ ಮುಗಿಸಿರುವ ದರ್ಶನ್ 'ಮದಕರಿ ನಾಯಕ' ಪ್ರಾಜೆಕ್ಟ್ ಶುರು ಮಾಡಿದ್ದಾರೆ.

More from Filmibeat

English summary
Is telugu director SuKumar planning to make a film with Kannada actor Darshan?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X