ಸುದೀಪ್ 47ನೇ ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ..!

ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಕಿಚ್ಚ ಸುದೀಪ್ ಅಭಿನಯದ 47ನೇ ಚಿತ್ರ. ಹೌದು.. ಮ್ಯಾಕ್ಸ್ ಚಿತ್ರದ ಅಭೂತಪೂರ್ವ ಗೆಲುವು ಮತ್ತೊಮ್ಮೆ ಆ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತು ಸುದೀಪ್ ಅವರನ್ನು ಒಂದಾಗಿಸಿದೆ.

ಇಂದು { ಜುಲೈ 7 } ಸರಳವಾಗಿ ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಕೂಡ ನಡೆದಿದೆ. ಕಾಲಿವುಡ್‌ನ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡುತ್ತಿದೆ. ಇದರ ನಡುವೆ ಈ ಚಿತ್ರದ ನಾಯಕಿ ಯಾರು ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಇದಕ್ಕೆ ನಿಖರವಾದ ಉತ್ತರ ಚಿತ್ರತಂಡವೇ ಅಧಿಕೃತವಾಗಿ ಕೊಡಬೇಕಾದರೂ ಸದ್ಯ ದೀಪ್ಷಿಕಾ ಈ ಚಿತ್ರಕ್ಕೆ ನಾಯಕಿ ಎನ್ನುವ ಸುದ್ದಿ ಪಕ್ಕದ ಚೆನ್ನೈನಲ್ಲಿ ಕೇಳಿ ಬರುತ್ತಿದೆ.

is-tamil-actress-deepshikha-the-heroine-of-kichcha-sudeeps-47th-film-heres-what-we-know

ಹೌದು, ದೀಪ್ಷಿಕಾ .. ನೋಡಲು ತುಂಬಾನೇ ಮುದ್ದಾಗಿರುವ ಚೆಲುವೆ. ಮೈಖಲ್, ರವಿಕುಲ ರಘುರಾಮ, ಮಾರ್ಗನ್ ಚಿತ್ರಗಳಲ್ಲಿ ಈಗಾಗಲೇ ಕಾಣಿಸಿಕೊಂಡು ತಮಿಳು ಸಿನಿರಸಿಕರ ಕಣ್ಮನ ಸೆಳೆದಿರುವ ದೀಪ್ಷಿಕಾ, ಸುದೀಪ್ ಅವರ ಈ ಮಹಾಯಾಗಕ್ಕೆ ಕೈ ಜೋಡಿಸಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಇಂದು { ಜುಲೈ 7 } ನಡೆದ ಮುಹೂರ್ತ ಸಮಾರಂಭದಲ್ಲಿ ದೀಪ್ಷಿಕಾ ಕೂಡ ಭಾಗಿಯಾಗಿದ್ದಾರೆ. ದೇವರ ಆಶೀರ್ವಾದ ಬೇಡಿದ್ದಾರೆ.

ಅಂದ್ಹಾಗೇ ಸುದೀಪ್ ಅವರ 47ನೇ ಚಿತ್ರವನ್ನು ಇದೇ ಸತ್ಯಜ್ಯೋತಿ ಸಂಸ್ಥೆಗೆ ತಮಿಳಿನ ಖ್ಯಾತ ನಿರ್ದೇಶಕ ಚೇರನ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರಕ್ಕೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ನಾಯಕಿ ಎಂದು ಹೇಳಲಾಗಿತ್ತು. ಆದರೆ ಆ ನಂತರ ಅದೇನಾಯ್ತೋ. ಚೇರನ್ ಚಿತ್ರ ಶುರುವಾಗಲೇ ಇಲ್ಲ. ಚೇರನ್ ಬದಲು ಇದೀಗ ವಿಜಯ್ ಕಾರ್ತಿಕೇಯನ್ ಚಿತ್ರವನ್ನು ಸತ್ಯಜ್ಯೋತಿ ಸಂಸ್ಥೆಗೆ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಸಂಸ್ಥೆ ಮತ್ತು ನಾಯಕ ಒಂದೇ ಆದ ಕಾರಣ ಈ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಬಹುದು ಎನ್ನುವ ನಿರೀಕ್ಷೆ ಇತ್ತು.

is-tamil-actress-deepshikha-the-heroine-of-kichcha-sudeeps-47th-film-heres-what-we-know

ಆದರೆ ಈಗ ಆ ನಿರೀಕ್ಷೆ ಹುಸಿಯಾಗಿದೆ. ದೀಪ್ಷಿಕಾಗೆ ಸುದೀಪ್ ಎದುರು ಅಭಿನಯಿಸುವ ಬಂಪರ್ ಆಫರ್ ಸಿಕ್ಕಿದೆ. ಇನ್ನು ವಿಜಯ್ ಕಾರ್ತಿಕೇಯನ್ ಮತ್ತು ಸುದೀಪ್ ಜೋಡಿಯ ಹಿಂದಿನ ಮ್ಯಾಕ್ಸ್‌ ಚಿತ್ರದಲ್ಲಿ ಕೂಡ ಸುದೀಪ್‌ಗೆ ನಾಯಕಿ ಇರಲಿಲ್ಲ. ಹಾಡುಗಳು ಇದ್ದವಾದರೂ ರೊಮ್ಯಾನ್ಸ್‌ಗೆ ಜಾಗ ಇರಲಿಲ್ಲ. ಈ ಚಿತ್ರ ಕೂಡ ಮ್ಯಾಕ್ಸ್ ಪ್ಲೇವರ್‌ನಂತೆಯೇ ಇದ್ದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ದೀಪ್ಷಿಕಾ ಇಲ್ಲಿ ಪ್ರಮುಖ ನಾಯಕಿಯಾ ಅಥವಾ ಕಥೆಯೇ ಈ ಚಿತ್ರದ ಜೀವಾಳವಾದ ಹಿನ್ನೆಲೆ ಪ್ರಮುಖವಾದ ಪಾತ್ರವನ್ನು ದೀಪ್ಷಿಕಾ ನಿರ್ವಹಿಸುತ್ತಿದ್ದಾರಾ ಎನ್ನುವ ಗೊಂದಲ ಸದ್ಯ ಸುದೀಪ್ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಇನ್ನುಳಿದಂತೆ 'ಮ್ಯಾಕ್ಸ್' ಚಿತ್ರದಲ್ಲಿ ಕನ್ನಡ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದರು. ಹೀಗಾಗಿ ಈ ಚಿತ್ರದಲ್ಲಿ ಕೂಡ ನಾವು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರನ್ನು ನಿರೀಕ್ಷೆ ಮಾಡಬಹುದು. ಇನ್ನು ಸದ್ಯ ಚಿತ್ರದ ಚಿತ್ರೀಕರಣ ಶುರು ಮಾಡಿರುವ ಸುದೀಪ್ ಈ ವರ್ಷ ಡಿಸೆಂಬರ್ 25ಕ್ಕೆ ಶತಾಯಗತಾಯ ಚಿತ್ರವನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡುವುದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

More from Filmibeat

English summary
Rumours abound: Is Tamil actress Deepshikha the heroine of Kichcha Sudeep's 47th film? Find out the confirmed details now!
Read more about: sudeep filmibeat news sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X