'ಬಘೀರ'ನನ್ನು ತೆಲುಗಿನಲ್ಲಿ ತುಳಿಯುವ ಪ್ರಯತ್ನ ನಡೀತಿದ್ಯಾ? ಕಾರಣವೇನು?

ಶ್ರೀಮುರಳಿ ನಟನೆ 'ಬಘೀರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಗುರುವಾರಕ್ಕಿಂತ ಶುಕ್ರವಾರ, ಶನಿವಾರ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ದೀಪಾವಳಿ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ಆದರೆ ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಹಿನ್ನಡೆ ಆಗಿದೆ.

ಪ್ರಶಾಂತ್ ನೀಲ್ 'ಬಘೀರ' ಚಿತ್ರಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಜೊತೆಗೆ ತೆಲುಗಿನಲ್ಲಿ ಕೂಡ ಸಿನಿಮಾ ತೆರೆಗೆ ಬಂದಿದೆ. ತೆಲುಗು ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಿದೆ. ಆದರೆ ಕೆಲವರು ಬೇಕಂತಲೇ ಚಿತ್ರದ ಬಗ್ಗೆ ನೆಗೆಟಿವ್ ಸ್ಪ್ರೆಡ್ ಮಾಡುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಹಿನ್ನಡೆ ಆಗುವಂತೆ ಮಾಡುತ್ತಿದ್ದಾರೆ.

Is telugu Youtubers targeting sri murali Prashanth neel s Bagheera film

ತೆಲುಗು ಪ್ರೇಕ್ಷಕರಿಗೆ ಮಾಸ್ ಸಿನಿಮಾಗಳಂದ್ರೆ ಇಷ್ಟ. ಆಕ್ಷನ್ ಎಂಟರ್‌ಟೈನರ್ 'ಬಘೀರ' ಚಿತ್ರವನ್ನು ಡಾ. ಸೂರಿ ಬಹಳ ಸೊಗಸಾಗಿ ತಿದ್ದಿ ತೀಡಿದ್ದಾರೆ. ತೆಲುಗು ಮಾಧ್ಯಮಗಳಲ್ಲಿ ಕೂಡ ಚಿತ್ರದ ಬಗ್ಗೆ ಉತ್ತಮ ಮಾತುಗಳು ಕೇಳಿಬಂದಿದೆ. ಆದರೆ ಕೆಲ ಯೂಟ್ಯೂಬರ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುರೆನ್ಸರ್‌ಗಳು 'ಬಘೀರ' ಚಿತ್ರದ ಬಗ್ಗೆ ಬೇಕಂತಲೇ ನೆಗೆಟಿವ್ ರಿವ್ಯೂ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಒಂದು ಚಿತ್ರದ ಸರಿ, ತಪ್ಪು ಹೇಳುವುದು ಬೇರೆ. ಆದರೆ ಉದ್ದೇಶಪೂರ್ವಕವಾಗಿ ಚೆನ್ನಾಗಿರುವ ಚಿತ್ರವನ್ನು ಚೆನ್ನಾಗಿಲ್ಲ ಎಂದು ತುಳಿಯುವುದು ತಪ್ಪು ಎಂದು ಕನ್ನಡ ಸಿನಿರಸಿಕರು ಬೇಸರ ವ್ಯಕ್ತಪಡಿಸಿದ್ದಾರೆ.

'KGF' ಸರಣಿ ಹಾಗೂ 'ಸಲಾರ್' ಚಿತ್ರದಿಂದ ಟಾಲಿವುಡ್‌ನಲ್ಲಿ ಪ್ರಶಾಂತ್ ನೀಲ್ ಕ್ರೇಜ್ ಹೆಚ್ಚಾಗಿದೆ. ರಾಜಮೌಳಿ ಬಳಿಕ ನೀಲ್ ಎನ್ನುವಂತೆ ತೆಲುಗು ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ತೆಲುಗು ಫಿಲ್ಮ್ ಮೇಕರ್ಸ್‌ಗೆ ಕೂಡ ಪ್ರಶಾಂತ್ ನೀಲ್ ಅಚ್ಚುಮೆಚ್ಚು. ಅದೇ ಕಾರಣಕ್ಕೆ ಅವರು ಕಥೆ ಬರೆದಿದ್ದಾರೆ ಎಂದು ಗೊತ್ತಾಗಿ 'ಬಘೀರ' ಬಗ್ಗೆ ಅಲ್ಲಿ ಕ್ರೇಜ್ ಹುಟ್ಟಿತ್ತು. ಮೊದಲ ಸಿನಿಮಾ ಸಿನಿಮಾ ನೋಡಿ ಹೊರಬಂದವರು ಚೆನ್ನಾಗಿದೆ ಎಂದು ಹೇಳಿರುವ ವೀಡಿಯೋ ವೈರಲ್ ಆಗ್ತಿದೆ. ಅದರ ಬೆನ್ನಲ್ಲೇ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಮಾಡಿರುವುದು ಗೊತ್ತಾಗುತ್ತಿದೆ.

Is telugu Youtubers targeting sri murali Prashanth neel s Bagheera film

ಟಾರ್ಗೆಟ್ ಮಾಡಿ 'ಬಘೀರ' ಚಿತ್ರದ ಬಗ್ಗೆ ನೆಗೆಟಿವ್ ರಿವ್ಯೂ ಮಾಡುವವರ ಬಗ್ಗೆ ಕನ್ನಡಿಗರು ಬೇಸರ ಹೊರಹಾಕುತ್ತಿದ್ದಾರೆ. ಮುಂದೆ 'ಪುಷ್ಪ-2' ಸೇರಿದಂತೆ ದೊಡ್ಡ ದೊಡ್ಡ ತೆಲುಗು ಚಿತ್ರಗಳು ಕರ್ನಾಟದಲ್ಲಿ ಬಿಡುಗಡೆ ಆಗುತ್ತವೆ, ಆಗ ನಿಮಗೂ ಬುದ್ಧಿ ಕಲಿಸುತ್ತೇವೆ ಎಂದು ಕಾಮೆಂಟ್ ಮಾಡ್ತಿದ್ದಾರೆ. 'ಬಾಯ್ಕಾಟ್ ಪುಷ್ಪ-2' ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ತೆಲುಗು ಚಿತ್ರಗಳಿಗೆ ಹಿನ್ನಡೆ ಆಗುತ್ತದೆ ಎಂದು 'ಬಘೀರ' ಚಿತ್ರವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಟ ಪ್ರಭಾಸ್ ಕೂಡ 'ಬಘೀರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ತೆಲುಗಿನಲ್ಲಿ 'ಬಘೀರ' ಚಿತ್ರಕ್ಕೆ ಶೋಗಳನ್ನು ಕೊಡಲು ಕೆಲ ಥಿಯೇಟರ್‌ಗಳಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ವರ್ಷನ್‌ಗೆ ಶೋ ಕೊಡಲ್ಲ, ತೆಲುಗಿಗೆ ಜನ ಬರಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಶ್ರೀಮುರಳಿ ನಟನೆಯ 'ಉಗ್ರಂ' ಚಿತ್ರವನ್ನು ಪ್ರಶಾಂತ್ ನೀಲ್ ತೆಲುಗಿಗೆ ರೀಮೆಕ್ ಮಾಡಿದ್ದರು. 'ಸಲಾರ್' ಚಿತ್ರ ಕನ್ನಡ ಸಿನಿರಸಿಕರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಕೋಪಗೊಂಡು ಪ್ರಭಾಸ್ ಫ್ಯಾನ್ಸ್ ಈಗ 'ಬಘೀರ' ಚಿತ್ರದ ಬಗ್ಗೆ ನೆಗೆಟಿವ್ ಹಬ್ಬಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬರ್ತಿದೆ.

ಕರ್ನಾಟಕದಲ್ಲಿ 'ಬಘೀರ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಶ್ರೀಮುರಳಿ ಪರ್ಫಾರ್ಮನ್ಸ್‌ಗೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೂಪರ್ ಹೀರೊ ಕಾನ್ಸೆಪ್ಟ್ ಚಿತ್ರವನ್ನು ಹೊಂಬಾಳೆ ಸಂಸ್ಥೆ ಅದ್ಧೂರಿಯಾಗಿ ನಿರ್ಮಿಸಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ದೊಡ್ಡದಾಗಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

More from Filmibeat

English summary
Is Prabhas fans spread hatred comments against srimurali starrer Bagheera?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X