Just In
Don't Miss!
- Sports
ಐಎಸ್ಎಲ್: ಹೈದರಾಬಾದ್ ಎಫ್ಸಿ vs ಒಡಿಶಾ ಎಫ್ಸಿ, Live ಸ್ಕೋರ್
- News
ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆಯಾದವರ ಬಗ್ಗೆ ಸಮೀಕ್ಷೆ
- Automobiles
2030ರ ವೇಳೆಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಟಿ ಕೆಂಗಣ್ಣಿಗೆ ಬಿತ್ತಾ ಕಿರಿಕ್ ಬೆಡಗಿಯ ಈ ಟಾಪ್ 5 ಸಿನಿಮಾಗಳು
ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶೋಧ ನಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಮನೆ ಮೇಲೆ ದಾಳಿ ಅಧಿಕಾರಿಗಳು ನಡೆಸಿದ್ದಾರೆ. ಸುಮಾರು 10ಕ್ಕು ಹೆಚ್ಚು ಅಧಿಕಾರಿಗಳು ಮನೆ ಮೇಲೆ ರೈಡ್ ಮಾಡಿದ್ದು, ಬೆಳಗ್ಗೆಯಿಂದ ಶೋಧ ನಡೆಸುತ್ತಿದ್ದು, ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಒಂದು ಸಿನಿಮಾಗೆ ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?
ಜೊತೆಗೆ ರಶ್ಮಿಕಾ ತಾಯಿ, ತಂದೆ ಕೆಲಸದವರಿಂದ ಮಾಹಿತಿ ಕಲೆಹಾಕುಚ್ಚಿದ್ದಾರೆ. ರಶ್ಮಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇನ್ನು ಮೂರ್ನಾಲ್ಕು ವರ್ಷಗಳಾಗಿದೆ. ಆಗಲೆ ರಶ್ಮಿಕಾ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುತ್ತ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ತೀರ ಕಡಿಮೆ ಅವಧಿಯಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ರಶ್ಮಿಕಾಗೆ ಈಗ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಂದ್ಹಾಗೆ ರಶ್ಮಿಕಾ ಮನೆಮೇಲಿನ ದಾಳಿಗೆ ಈ ಸಿನಿಮಾಗಳೆ ಕಾರಣವಾಯ್ತಾ? ಯಾವುದು ಆ ಸಿನಿಮಾಗಳು? ಮುಂದೆ ಓದಿ...

ಕಿರಿಕ್ ಪಾರ್ಟಿ
ರಶ್ಮಿಕಾ ಮಂದಣ್ಣ ಯಾರು ಎನ್ನುವುದನ್ನು ಕರ್ನಾಟಕಕ್ಕೆ ಪರಿಚಯಿಸಿದ ಸಿನಿಮಾ ಕಿರಿಕ್ ಪಾರ್ಟಿ. ಮೊದಲ ಸಿನಿಮಾವೆ ರಶ್ಮಿಕಾಗೆ ದೊಡ್ಡ ಮಟ್ಟಕ್ಕೆ ಸಕ್ಸಸ್ ತಂದು ಕೊಟ್ಟಿತು. ಆ ನಂತರ ರಶ್ಮಿಕಾ ದೊಡ್ಡ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ಮೊದಲ ಸಿನಿಮಾಗೆ ರಶ್ಮಿಕಾ ಪಡೆದ ಸಂಭಾವನೆ ತೀರ ಕಡಿಮೆ. ಸಿನಿಮಾ ದೊಡ್ಡ ಮಟ್ಟಕ್ಕೆ ಹಿಟ್ ಆಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಆ ನಂತರ ರಶ್ಮಿಕಾಗೆ ಶೇರ್ ನೀಡಿರಬಹುದು.

ಗೀತಾ ಗೋವಿಂದಂ
ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಆಗುತ್ತಿದ್ದಂತೆ ರಶ್ಮಿಕಾ ತೆಲುಗು ಚಿತ್ರರಂಗದ ಕಡೆ ಮುಖಮಾಡುತ್ತಾರೆ. ಮೊದಲ ಸಿನಿಮಾ ಮಾಡುತ್ತಿದ್ದಂತೆ ನಂತರ ಗೀತಾ ಗೋವಿಂದಂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಗೀತಾ ಗೋವಿಂದಂ ಸಿನಿಮಾ ಕೂಡ ರಶ್ಮಿಕಾ ಪಾಲಿನ ಅದೃಷ್ಟದ ಸಿನಿಮಾವಾಗಿದೆ. ಕೋಟಿ ಕೋಟಿ ಬಾಚಿಕೊಂಡ ಗೀತಾ ಗೋವಿಂದಂ ಒಟ್ಟು 130 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತೆ ಸಂಭಾವನೆ ಕೂಡ ಹೆಚ್ಚಿಸಿಕೊಳ್ಳುತ್ತಾ ಹೋದರು.
ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ರೈಡ್

ಡಿಯರ್ ಕಾಮ್ರೇಡ್
ರಶ್ಮಿಕಾ ಪಾಲಿನ ಮತ್ತೊಂದು ದೊಡ್ಡ ಮಟ್ಟದ ಸಿನಿಮಾ ಡಿಯರ್ ಕಾಮ್ರೇಡ್. ಬಿಗ್ ಬಜೆಟ್ ನಲ್ಲಿ ತಯಾರಾದ ಡಿಯರ್ ಕಾಮ್ರೇಡ್ ಸಿನಿಮಾ ಮಾಡುವಾಗ ರಶ್ಮಿಕಾ ಖ್ಯಾತಿ ಉತ್ತುಂಗಕ್ಕೆ ಏರಿತ್ತು. ಈ ಸಿನಿಮಾಗೆ ರಶ್ಮಿಕಾ 60 ರಿಂದ 80 ಲಕ್ಷ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಸೋತರು ಕಲೆಕ್ಷನ್ ವಿಚಾರದಲ್ಲಿ ಗೆದ್ದಿತ್ತು.

ಕನ್ನಡದ ಪೊಗರು
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಿರಿಕ್ ನಟಿ ಬ್ಯುಸಿಯಾಗುತ್ತಿದ್ದಂತೆ ಕನ್ನಡದಲ್ಲಿ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಸದ್ಯ ರಶ್ಮಿಕಾ ಬಳಿ ಕನ್ನಡದ ಪೊಗರು ಸಿನಿಮಾವಿದೆ. ಈ ಚಿತ್ರಕ್ಕೆ ರಶ್ಮಿಕಾ 64 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಪಟ್ಟಿಗೆ ಈ ಸಂಭಾವನೆ ದೊಡ್ಡ ಮಟ್ಟದ್ದಾಗಿದೆ. ಕನ್ನಡ ಯಾವ ನಟಿಯರು ಕೂಡ ಈ ಮಟ್ಟದ ಸಂಭಾವನೆ ಪಡೆಯುತ್ತಿಲ್ಲ.
ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ಗಮನಿಸಬೇಕಾದ ಅಂಶಗಳು

ಸರಿಲೇರು ನೀಕೆವ್ವರು
ರಶ್ಮಿಕಾ ಮಂದಣ್ಣ ಪಾಲಿನ ಅತೀ ದೊಡ್ಡ ಸಿನಿಮಾವಿದು. ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿದ್ದ ರಶ್ಮಿಕಾ ಈ ಸಿನಿಮಾಗೆ ಕೋಟಿ ಮೇಲೆ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ನಂತರ ಒಪ್ಪಿಕೊಂಡ ಸಿನಿಮಾಗಳಿಗೆ ರಶ್ಮಿಕಾ ಕೋಟಿಗೂ ಅಧಿಕ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತು, ದುಬಾರಿ ಕಾರುಗಳು ಐಟಿ ಕೆಂಗಣ್ಣಿಗೆ ಗುರಿಯಾಗಿವೆ. ಅಲ್ಲದೆ ಸಂಭಾವನೆ ವಿಚಾರವಾಗಿ ರಶ್ಮಿಕಾ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಾಗುತ್ತಿದೆ.