ಧ್ರುವ ಜೊತೆ ಸಿನಿಮಾ ಸಿಗಲಿಲ್ಲ, ಸೇಡು ತೀರಿಸಿಕೊಳ್ಳಲು ಶ್ರುತಿ ಹೀಗೆ ಮಾಡಿದ್ರಂತೆ.!

Recommended Video

ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರುವ ಶ್ರುತಿ ಹರಿಹರನ್ ಅಸಲಿ ಕಾರಣ ಬಯಲು | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಅಭಿಯಾನ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

#ಮೀಟೂ ಎಂಬ ಅಸ್ತ್ರಕ್ಕೂ ಲಿಬರಲ್ ಗ್ಯಾಂಗ್ ಗೂ ಲಿಂಕ್ ಇದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ, ಸೇಡು ತೀರಿಸಿಕೊಳ್ಳಲು ನಟಿ ಶ್ರುತಿ ಹರಿಹರನ್ ಹೀಗೆ ಮಾಡಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಅದು ಬೇರೆಲ್ಲೂ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ.!

ಹೌದು, ಫಿಲ್ಮ್ ಚೇಂಬರ್ ನಲ್ಲಿಯೇ ನಟಿ ಶ್ರುತಿ ಹರಿಹರನ್ ಬಗ್ಗೆ ಗಾಸಿಪ್ ಕೇಳಿಬಂದಿದೆ. ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವ ಬಯಕೆ ಶ್ರುತಿ ಹರಿಹರನ್ ಗಿತ್ತು. ಆದ್ರೆ, ಅದಕ್ಕೆ ಅರ್ಜುನ್ ಸರ್ಜಾ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ, ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ದ್ವೇಷ ಸಾಧಿಸುತ್ತಿದ್ದಾರಂತೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಭಾಮಾ ಹರೀಶ್ ಬಳಿ ಅರ್ಜುನ್ ಸರ್ಜಾ ಆಪ್ತರ ಮಾತು

ಭಾಮಾ ಹರೀಶ್ ಬಳಿ ಅರ್ಜುನ್ ಸರ್ಜಾ ಆಪ್ತರ ಮಾತು

''ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಬೇಕು ಅಂತ ಶ್ರುತಿ ಹರಿಹರನ್ ಅಂದುಕೊಂಡಿದ್ದರು. ಆದ್ರೆ, ಅರ್ಜುನ್ ಸರ್ಜಾ ರಿಜೆಕ್ಟ್ ಮಾಡಿದ್ದರು. ಹೀಗಾಗಿ ಶ್ರುತಿ ಹೀಗೆಲ್ಲ ಆರೋಪ ಮಾಡುತ್ತಿದ್ದಾರೆ'' ಎಂದು ಅರ್ಜುನ್ ಸರ್ಜಾ ಆಪ್ತರು ನಿರ್ಮಾಪಕ ಭಾಮಾ ಹರೀಶ್ ಬಳಿ ಹೇಳಿಕೊಂಡಿದ್ದಾರಂತೆ.

ಚಾನ್ಸ್ ತಪ್ಪಿದ್ದಕ್ಕೆ ಶ್ರುತಿ ಹೀಗೆ ಮಾಡಿದ್ರಾ.?

ಚಾನ್ಸ್ ತಪ್ಪಿದ್ದಕ್ಕೆ ಶ್ರುತಿ ಹೀಗೆ ಮಾಡಿದ್ರಾ.?

ಧ್ರುವ ಸರ್ಜಾ ಜೊತೆಗಿನ ಸಿನಿಮಾ ಕೈತಪ್ಪಿ ಹೋದ ಸಿಟ್ಟಿಗೆ ಶ್ರುತಿ ಹರಿಹರನ್ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಮಾತುಗಳು ಫಿಲ್ಮ್ ಚೇಂಬರ್ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಇದರಲ್ಲಿ ನಿಜ ಎಷ್ಟು, ಸುಳ್ಳು ಎಷ್ಟು... ದೇವರೇ ಬಲ್ಲ.!

ಸಿಡಿದೆದ್ದಿದ್ದ ಧ್ರುವ ಸರ್ಜಾ

ಸಿಡಿದೆದ್ದಿದ್ದ ಧ್ರುವ ಸರ್ಜಾ

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ಮೇಲೆ, ಆಕೆ ವಿರುದ್ಧ ಧ್ರುವ ಸರ್ಜಾ ಸಿಡಿದೆದ್ದಿದ್ದರು. ''ಆರೋಪದ ಕುರಿತು ಸಾಕ್ಷಿ ಇದ್ದರೆ ತೋರಿಸಲಿ'' ಎಂದು ಶ್ರುತಿ ಹರಿಹರನ್ ಗೆ ಧ್ರುವ ಸರ್ಜಾ ಓಪನ್ ಚಾಲೆಂಜ್ ಹಾಕಿದ್ದರು.

ಫಿಲ್ಮ್ ಚೇಂಬರ್ ನಲ್ಲಿ ಸಭೆ

ಫಿಲ್ಮ್ ಚೇಂಬರ್ ನಲ್ಲಿ ಸಭೆ

ಶ್ರುತಿ ಹರಿಹರನ್ ಮಾಡಿರುವ ಆರೋಪದ ಬಗ್ಗೆ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ''ಸದ್ಯದಲ್ಲೇ ಅಂಬರೀಶ್ ಜೊತೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ಸಾರಾ ಗೋವಿಂದು ತಿಳಿಸಿದ್ದಾರೆ.

More from Filmibeat

English summary
Is this the reason why Sruthi Hariharan raised her voice against Arjun Sarja.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X