ಹರೀಶ್ ರಾಯ್‌ಗೆ ಕ್ಯಾನ್ಸರ್ ಚಿಕಿತ್ಸೆಗೆ ಕೋಟಿ ಆದ್ರೂ ಕೊಡ್ತಿನಿ ಎಂದ ಕನ್ನಡದ ಸ್ಟಾರ್ ನಟ!
ಕನ್ನಡದ ಹೆಸರಾಂತ ಕಲಾವಿದ ಹರೀಶ್ ರಾಯ್ ಯಾರಿಗೆ ಗೊತ್ತಿಲ್ಲ ಹೇಳಿ. ದಶಕಗಳಿಂದ ಸಿನಿಮಾರಂಗದಲ್ಲಿ ಹರೀಶ್ ರಾಯ್ ಸಕ್ರಿಯವಾಗಿದ್ದಾರೆ. ಕೆಲಕಾಲ ಅವರು ನಟನೆಯಿಂದ ದೂರ ಉಳಿದ ಕಾರಣ, ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಜಿಎಫ್ನಲ್ಲಿ ನಟಿಸುವ ಮೂಲಕ ಮತ್ತೇ ಕಮ್ ಬ್ಯಾಕ್ ಮಾಡಿದರು.
ಹಲವಾರು ಸಿನಿಮಾಗಳ ಮೂಲಕ ಜನಮನ ಗೆದ್ದ ನಟನಿಗೀನ ಸಂಕಷ್ಟ ಎದುರಾಗಿದೆ. ಹರೀಶ್ ರಾಯ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮುಗಿದ ಬಳಿಕ ಹರೀಶ್ ರಾಯ್ ಅವರಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿದೆ.
ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳುತ್ತಿದ್ದ ಇವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡು. ಅದರಿಂದ ಹರೀಶ್ ರಾಯ್ ಅವ್ರಿಗೆ ಸಹಾಯ ಬೇಕಾಗಿದೆ ಎನ್ನುವುದು ಬೆಳಕಿಗೆ ಬಂತು. ಇದನ್ನು ತಿಳಿದ ಕೂಡಲೇ, ಇವರಿಗೆ ನೂರಾಗು ಕರೆಗಳು ಬಂದಿವೆ. ಅದರಲ್ಲಿ ಬಂದ ಒಂದು ವಿಶೇಷವಾದ ಕರೆಯ ಬಗ್ಗೆ ಅವರು ಮಾತನಾಡಿದ್ದಾರೆ.

ಹರೀಶ್ ರಾಯ್‌ಗೆ ಸ್ಟಾರ್ ನಟನ ಭರವಸೆ!
ಹರೀಶ್ ಅವ್ರಿಗೆ ಕ್ಯಾನ್ಸರ್ ಇದೆ ಎಂದು ತಿಳಿದ ತಕ್ಷಣ, ಅವರಿಗೆ ಸಿನಿಮಾರಂಗದ ಹಲವಾರು ಕಲಾವಿದರು ಕರೆ ಮಾಡಿ ಭವರಸೆ ಕೊಟ್ಟಿದ್ದಾರೆ. ಏನೇ ಸಹಾಯ ಬೇಕಿದ್ದರೂ ಕೇಳಿ ಎಂದು ಕಲವು ಕರೆ ಮಾಡಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರೀಶ್ ರಾಯ್ ಒಂದು ವಿಶೇಷವಾದ ಕರೆಯ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ಅಂದು ರಾತ್ರಿ 12 ಗಂಟೆಗೆ ಒಂದು ಕರೆ ಬಂದು. ಅವರು ಕನ್ನಡದ ದೊಡ್ಡ ನಟ, ದೊಡ್ಡ ಹೆಸರು ಮಾಡಿದವರು. ನಾವಿದ್ದೀವಲ್ಲಾ, ಒಂದು ಮಾತು ಹೇಳಬಹುದಿತ್ತಲ್ಲ, ನನ್ನ ಪರ್ಸನ್ ನಂಬರ್ ನಿಮಗೆ ಕೊಟ್ಟಿದ್ದೇನೆ. ನೀವು ಕರೆ ಮಾಡಿ ಮಾತಾಡಿ. ಚಿಕಿತ್ಸೆಗೆ ಕೋಟಿ ಖರ್ಚಾದರೂ ಪರ್ವಾಗಿಲ್ಲ, ನಾನು ನೋಡಿಕೊಳ್ಳುತ್ತೇನೆ. ಆದರೆ ಈ ವಿಚಾರ ಎಲ್ಲೂ ಹೇಳಬೇಡಿ" ಎಂದು ಭರವಸೆ ಕೊಟ್ಟಿದ್ದಾರೆ.

ಆ ನಟ ಯಾರು!
ಹರೀಶ್ ರಾಯ್ ತಮಗೆ ಕನ್ನಡದ ಒಬ್ಬ ನಟ ಸಹಾಯ ಮಾಡಲು ಹೇಳಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಹೇಳಿದ್ದಾರೆ. ಆದರೆ ಆ ನಟ ಯಾರು ಎನ್ನುವುದನ್ನು ಮಾತ್ರ ರಿವೀಲ್ ಮಾಡಿಲ್ಲ. ಯಾಕೆಂದರೆ ಅವರು ಈ ವಿಚಾರನ್ನು ಬಹಿರಂಗ ಪಡಿಸಬೇಡಿ ಎಂದು ಹೇಳಿದ್ದಾರಂತೆ. ಆದರೆ ಈ ನಟ ಮತ್ಯಾರೂ ಅಲ್ಲ, ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಲಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ಯಶ್ ಹೆಸರೇ ಕೇಳಿ ಬರುತ್ತಿದೆ. ಆದರೆ ಇದು ಅಧಿಕೃತವಲ್ಲ.

ಹರೀಶ್ ರಾಯ್ ಅನಾರೋಗ್ಯ!
ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತ ತಲುಪಿದೆ. ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಯುಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಸದ್ಯ ಇವರಿಗೆ ಚಿಕಿತ್ಸೆ ಕೊಡಿಸಿ, ಉಳಿಸಿಕೊಳ್ಳಲು ಕುಟುಂಬಸ್ಥರು ಕಷ್ಟಪಡುತ್ತಿದ್ದಾರೆ. ಇನ್ನು ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ ಎನ್ನಲಾಗಿದೆ.

ಹರೀಶ್ ರಾಯ್ ಅವ್ರಗೆ ಸಹಾಯ ಬೇಕಾಗಿದೆ!
ಅವರು ಕೊಟ್ಟ ಸಂದರ್ಶನದಲ್ಲಿ ಈ ವಿಚಾರವನ್ನು ಯಾಕೆ ಮುಚ್ಚಿಟ್ಟಿದ್ದಾರೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಅವರು ನಟಿಸಿಸದ್ದಾರೆ. ಹಾಗಾಗಿ ಅವರ ಬಳಿ ಈ ವಿಚಾರ ಯಾಕೆ ಹೇಳಿಕೊಂಡಿಲ್ಲ ಎನ್ನುವ ಬಗ್ಗೆ ತಿಳಿಸಿದ್ದಾರೆ. ಈ ವಿಚಾರ ಸಿನಿಮಾರಂಗದಲ್ಲಿ ಗೊತ್ತಾದರೆ ಯಾರೂ ಅವಕಾಶ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಮುಚ್ಚಿಟ್ಟಿದ್ದರಂತೆ. ಸಂದರ್ಶನದ ವೇಳೆ ಅವರ ಫೋನ್ ನಂಬರ್ ಕೂಡ ನೀಡಿದ್ದಾರೆ. 9606960656 ಈ ನಂಬರ್‌ಗೆ ಹಣ ಹಾಕುವ ಮೂಲಕ ನೀವೂ ಕೂಡ ಅವರಿಗೆ ಸಹಾಯ ಮಾಡಬಹುದಾಗಿದೆ.


Click it and Unblock the Notifications











