ಯಶ್ ಸ್ಟಾರ್ ಪಟ್ಟ ಉಳಿಸುತ್ತಾರಾ ಪೂರಿ ಜಗನ್ನಾಥ್?

Recommended Video

ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡಿದ ನಂತರ ಯಶ್ ಸ್ಟಾರ್ ಪಟ್ಟ ಹಾಗೆ ಉಳಿಯುತ್ತಾ? | FILMIBEAT KANNADA

'ಕೆಜಿಎಫ್' ಎನ್ನುವ ಮಹಾ ಸಿನಿಮಾ ಯಶ್ ಸ್ಟಾರ್ ಗಿರಿಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದ ಯಶ್ ಈ ಸಿನಿಮಾದ ನಂತರ ನ್ಯಾಷನಲ್ ಸ್ಟಾರ್ ಆಗಿರುವುದು ಗೊತ್ತಿರೋ ವಿಷಯ.

ಈಗ ಯಶ್ ಮೇಲೆ ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣು ಬಿದ್ದಿದೆ. ಟಾಲಿವುಡ್ ಸ್ಟಾರ್‌ ಡೈರೆಕ್ಟರ್ ಅಣ್ತಮ್ಮನಿಗೆ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಮುಂದಿನ ಜನವರಿಗೆ ಈ ಸಿನಿಮಾ ಸೆಟ್ಟೇರುವ ಎಲ್ಲ ಸಾಧ್ಯತೆಗಳು ಇವೆ.

ಮಹೇಶ್ ಬಾಬು ಜೊತೆಗೆ 'ಜನ ಗಣ ಮನ' ಚಿತ್ರವನ್ನು ಪೂರಿ ಜಗನ್ನಾಥ್ ಮಾಡಬೇಕಿತ್ತು. ಆದರೆ, ಮಹೇಶ್ ಬಾಬು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ, ಆ ಜಾಗಕ್ಕೆ ಬೇರೆ ಯಾರು..? ಎಂದು ಹುಡುಕುವ ಸಮಯಕ್ಕೆ ಯಶ್ ಬಾಯ್ ಸಿಕ್ಕಿದ್ದಾರೆ. ಆದರೆ, ಪೂರಿ ಜಗನ್ನಾಥ್ ಹಾಗೂ ಯಶ್ ಅವರ ಈ ಸಿನಿಮಾದ ಮೇಲೆ ಸಾಕಷ್ಟು ಅನುಮಾನಗಳು ಮೂಡಿದೆ.

ಖದರ್ ಕಳೆದುಕೊಂಡಿರುವ ಪೂರಿ ಜಗನ್ನಾಥ್

ಖದರ್ ಕಳೆದುಕೊಂಡಿರುವ ಪೂರಿ ಜಗನ್ನಾಥ್

ಒಂದು ಕಾಲದಲ್ಲಿ ಪೂರಿ ಜಗನ್ನಾಥ್ ಸಿನಿಮಾಗಳು ಟ್ರೆಂಡ್ ಹುಟ್ಟುಹಾಕುತ್ತಾ ಇದ್ದವು. ಆದರೆ, ಈಗ ಪೂರಿ ಜಗನ್ನಾಥ್ ಹೆಸರು ನೋಡಿ ಚಿತ್ರಮಂದಿರಕ್ಕೆ ಹೋಗುವವರ ಸಂಖ್ಯೆ ಬಹಳ ಕಡಿಮೆ. ಅಲ್ಲದೆ, ಪೂರಿ ಜಗನ್ನಾಥ್ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಾ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರು ಯಶ್ ಸಿನಿಮಾ ಮಾಡುವರೆ ಅದರ ಫಲಿತಾಂಶ ಏನಾಗಬಹುದು.

ಯಶ್ ಲೆವೆಲ್ ಗೆ ಸಿನಿಮಾ ಇರುತ್ತಾ ?

ಯಶ್ ಲೆವೆಲ್ ಗೆ ಸಿನಿಮಾ ಇರುತ್ತಾ ?

'ಕೆಜಿಎಫ್' ಸಿನಿಮಾ ಬಂದ ಮೇಲೆ ಯಶ್ ಲೆವೆಲ್ ಬದಲಾಗಿದೆ. ಈಗಲೇ, ಇಷ್ಟೊಂದು ಕ್ರೇಜ್ ಇರುವಾಗ 'ಕೆಜಿಎಫ್ 2' ಹಿಟ್ ಆದ್ರೆ, ಆ ಕ್ರೇಜ್ ಡಬಲ್ ಆಗುತ್ತದೆ. ಇಡೀ ಇಂಡಿಯಾದಲ್ಲಿ ಯಶ್ ಅಭಿಮಾನಿಗಳನ್ನು ಹೊಂದಿರುತ್ತಾರೆ. ಹೀಗಾಗಿ, ಜನರು ಅವರಿಂದ ನಿರೀಕ್ಷೆ ಮಾಡುವ ಸಿನಿಮಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಪೂರಿ ಜೊತೆ ಸೇರಿ 'ಕೆಜಿಎಫ್' ಮೀರಿಸೋ ಸಿನಿಮಾ ಯಶ್ ಮಾಡುತ್ತಾರೆಯೇ ಎನ್ನುವುದು ದೊಡ್ಡ ಕುತೂಹಲ.

ಪೂರಿಗೆ ಪ್ಯಾನ್ ಇಂಡಿಯಾ ಸಿನಿಮಾ ಹೊಸತು

ಪೂರಿಗೆ ಪ್ಯಾನ್ ಇಂಡಿಯಾ ಸಿನಿಮಾ ಹೊಸತು

'ಜನ ಗಣ ಮನ' ಸಿನಿಮಾವನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಮಾಡುವ ಉದ್ದೇಶ ಪೂರಿ ಜಗನ್ನಾಥ್ ಅವರದ್ದು. ಆದರೆ, ಪೂರಿ ಜಗನ್ನಾಥ್ ಮಾಡುವ ಸಿನಿಮಾಗಳು ತೆಲುಗು ಹಾಗೂ ಕರ್ನಾಟಕ ದಾಟಿ ಮುಂದಕ್ಕೆ ಹೋಗಲು ಬಹಳ ಕಷ್ಟ ಆಗುತ್ತದೆ. ಈ ಹಿಂದೆ ಪೂರಿ ಡೈರೆಕ್ಟ್ ಮಾಡಿರುವ ಯಾವ ಸಿನಿಮಾ ಸಹ ಪ್ಯಾನ್ ಇಂಡಿಯಾ ಆಗಿಲ್ಲ. ಬರೀ ಮಾಸ್ ಮೊರೆ ಹೋಗುವ ಅವರು ಟಾಲಿವುಡ್ ಬಿಟ್ಟರೆ ಬೇರೆ ಕಡೆ ಗೆದ್ದಿರುವುದು ಕಡಿಮೆ.

ಇದೇ ಕಾರಣಕ್ಕೆ ಮಹೇಶ್ ಬಾಬು ರಿಜೆಕ್ಟ್ ಮಾಡಿದ್ರಾ?

ಇದೇ ಕಾರಣಕ್ಕೆ ಮಹೇಶ್ ಬಾಬು ರಿಜೆಕ್ಟ್ ಮಾಡಿದ್ರಾ?

ಮಹೇಶ್ ಬಾಬು ಹಾಗೂ ಪೂರಿ ಜಗನ್ನಾಥ್ ಜೋಡಿಯಲ್ಲಿ ಈಗಾಗಲೇ ಎರಡು ಹಿಟ್ ಸಿನಿಮಾಗಳ ಬಂದಿವೆ. 'ಪೋಕಿರಿ' ಹಾಗೂ 'ಬಿಸಿನೆಸ್ ಮ್ಯಾನ್' ಪ್ರಿನ್ಸ್ ಗೆ ದೊಡ್ಡ ಹಿಟ್ ನೀಡಿವೆ. ಹೀಗಿದ್ದರೂ, 'ಜನ ಗಣ ಮನ' ಸಿನಿಮಾವನ್ನು ಮಹೇಶ್ ಬಾಬು ಒಪ್ಪಿಲ್ಲ. 'ಮಹರ್ಷಿ' ಸಿನಿಮಾ ದೊಡ್ಡ ಹಿಟ್ ಆಗಿದ್ದು, ಆ ನಂತರ ಆ ಮಟ್ಟದ ಸಿನಿಮಾ, ಪೂರಿ ಮಾಡಲು ಆಗಲ್ಲ ಎನ್ನುವುದು ಮಹೇಶ್ ಬಾಬು ನಿರ್ಧಾರ ಆಗಿರಬಹುದು.

ಮುಂದೆ ಏನಾಗುತ್ತೆ ?

ಮುಂದೆ ಏನಾಗುತ್ತೆ ?

ಈ ರೀತಿ ಏನೇ ಲೆಕ್ಕಾಚಾರ ಹಾಕಿದರೂ, ಸಿನಿಮಾ ಕೆಲವು ಬಾರಿ ಅದೆಲ್ಲವನ್ನು ಮೀರಿ ಬಿಡುತ್ತದೆ. ಅದೇ ರೀತಿ ಈ ಸಿನಿಮಾ ಕೂಡ ಆಗಬಹುದು. ಪೂರಿ ಜಗನ್ನಾಥ್ ಹೆಸರು ಈ ಸಿನಿಮಾದಿಂದ ಮತ್ತಷ್ಟು ದೊಡ್ಡದಾಗಬಹುದು. ಇತ್ತೀಚಿಗೆ ಪೂರಿ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಒಂದು ಮಟ್ಟಕ್ಕೆ ಒಳ್ಳೆಯ ಗಳಿಕೆ ಮಾಡುತ್ತಿದೆ. ಯಶ್ ಕೂಡ ಯೋಚನೆ ಮಾಡಿಯೇ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಒಮ್ಮೆಲೆ ಕಡೆಗಣಿಸುವ ಹಾಗಿಲ್ಲ.

More from Filmibeat

English summary
Is Kannada actor Yash stardom will remain after working with director Puri Jagannadh. Yash will play lead role in director Puri Jagannadh's 'Jana Gana Mana' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X