ಅರೇ ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ನಿಂತೇ ಹೋಯ್ತಾ?

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. 'KGF-2' ಬಳಿಕ ಯಶ್ ನಟನೆಯ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಸಿನಿಮಾ ಹೆಚ್ಚಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ಸೆಟ್ಟೇರಿತ್ತು. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಭಾರೀ ಸೆಟ್ ಹಾಕಿ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ಯಶ್ ಜೊತೆಗೆ ನಯನತಾರ, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸಂಪೂರ್ಣ ಹೊಸ ತಂಡವನ್ನು ಕಟ್ಟಿಕೊಂಡು ಯಶ್ 'ಟಾಕ್ಸಿಕ್' ಸಿನಿಮಾ ತೆರೆಗೆ ತರುತ್ತಿದ್ದಾರೆ.

Is Yash s Toxic with Kvn productions shelved Here s the truth

ಕೆವಿಎನ್‌ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಎನ್ನುವ ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದೇ ಬ್ಯಾನರ್ ಅಡಿಯಲ್ಲಿ 'ರಾಮಾಯಣ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ರೂಪ ತಳೆಯುತ್ತಿದೆ.

ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಡಿಸೆಂಬರ್ 8ಕ್ಕೆ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಸಿನಿಮಾ ಮುಹೂರ್ತ ಸಮಾರಂಭದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಚಿತ್ರಕ್ಕೆ ಪೂಜೆ ಸಲ್ಲಿಸಿದ ಫೋಟೊ, ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಡ್ರಗ್ಸ್ ಮಾಫಿಯಾ ಸುತ್ತಾ 'ಟಾಕ್ಸಿಕ್' ಸಿನಿಮಾ ಕಥೆ ಸುತ್ತುತ್ತದೆ ಎನ್ನಲಾಗ್ತಿದೆ. ಮತ್ತೊಮ್ಮೆ ಯಶ್ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Is Yash s Toxic with Kvn productions shelved Here s the truth

60, 70ರ ದಶಕದ ಕಥೆ 'ಟಾಕ್ಸಿಕ್' ಎನ್ನಲಾಗ್ತಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಪ್ಲ್ಯಾನ್ ನಡೀತಿದೆ. ಲಂಡನ್‌ನಲ್ಲಿ ಕೂಡ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿಯುತ್ತಾರಂತೆ. ಬ್ರಿಟೀಷ್ ಕಲಾವಿದರನ್ನು ಬಳಸಿಕೊಳ್ಳಲಾಗ್ತಿದ್ದು ಯೂರೋಪ್‌ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಚಾರವೂ ನಡೀತಿದೆ.

15 ದಿನಗಳ ಹಿಂದೆಯಷ್ಟೆ 'ಟಾಕ್ಸಿಕ್' ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಇದೆಲ್ಲದರ ನಡುವೆ ಸಿನಿಮಾ ನಿಂತೇಹೋಯ್ತು ಎನ್ನುವ ಗುಸುಗುಸು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ದಿಢೀರನೇ ಇಂತಾದೊಂದು ವದಂತಿ ಹರಡಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಇದು ಸುಳ್ಳು ವದಂತಿ ಎನ್ನುವುದು ಗೊತ್ತಾಗುತ್ತಿದೆ. ನೆಟ್ಟಿಗರು ಈ ರೀತಿ ಟ್ರೆಂಡ್ ಮಾಡುವುದಕ್ಕೂ ಕಾರಣವಿದೆ ಎನ್ನಲಾಗ್ತಿದೆ.

'ಟಾಕ್ಸಿಕ್' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಕೆವಿಎನ್ ಸಂಸ್ಥೆ ಯಾವುದೇ ಅಪ್‌ಡೇಟ್ ಕೊಡದೇ ಸೈಲೆಂಟ್ ಆಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಸರ್‌ಪ್ರೈಸ್‌ ನೀಡಬೇಕು ಎಂದು ಪ್ಲ್ಯಾನ್ ಮಾಡುತ್ತಿದೆ. ಸರಿಯಾದ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಅಪ್‌ಡೇಟ್ ಕೊಡುವ ಲೆಕ್ಕಾಚಾರ ನಡೀತಿದೆ. ಆದರೆ ಮತ್ತೊಂದು ಕಡೆ ಸಾಲು ಸಾಲಾಗಿ ದಳಪತಿ 69 ಚಿತ್ರದಲ್ಲಿ ಅಪ್‌ಡೇಟ್‌ ಬರುತ್ತಿದೆ.

ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 69ನೇ ಚಿತ್ರವನ್ನು ಕೆವಿಎನ್‌ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಅಪ್‌ಡೇಟ್‌ ಸಿಗುತ್ತಿದೆ. ಪೂಜಾ ಹೆಗ್ಡೆ, ಪ್ರಿಯಾಮಣಿ ಸೇರಿದಂತೆ ಹಲವರು ಚಿತ್ರತಂಡ ಸೇರಿಕೊಂಡಿದ್ದಾರೆ. ಆ ಬಗ್ಗೆ ಕೆವಿಎನ್‌ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುತ್ತಿದೆ. ಆದರೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಮೌನವಹಿಸಿದೆ. ಇದೇ ಕಾರಣಕ್ಕೆ ಚಿತ್ರತಂಡದ ಗಮನ ಸೆಳೆಯಲು 'ಟಾಕ್ಸಿಕ್' ಸಿನಿಮಾ ನಿಂತು ಹೋಯ್ತು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದಾರೆ.

'ಟಾಕ್ಸಿಕ್' ಸಿನಿಮಾ ನಿಂತು ಹೋಯ್ತು ಎನ್ನುವುದು ಕೇವಲ ವದಂತಿ ಅಷ್ಟೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸರಿಯಾದ ಸಮಯದಲ್ಲಿ ಖಂಡಿತ ಚಿತ್ರತಂಡ ಅಪ್‌ಡೇಟ್ ಕೊಡಲಿದೆ. ಸ್ಟಾರ್‌ಕಾಸ್ಟ್, ಟೀಸರ್, ಟ್ರೈಲರ್ ಅಂತೆಲ್ಲಾ ಸರ್‌ಪ್ರೈಸ್ ಪ್ಲ್ಯಾನ್ ನಡೀತಿದೆ. ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಅನುಮಾನ ಎನ್ನಲಾಗ್ತಿದ್ದು ಕಾದು ನೋಡಬೇಕಿದೆ.

More from Filmibeat

English summary
Rocking star yash starrer Toxic film shelved?
Read more about: filmibeat original yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X