»   » ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಾರಂತೆ 'ಸೂರ್ಯವಂಶ'ದ ಸೊಸೆ !

ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಾರಂತೆ 'ಸೂರ್ಯವಂಶ'ದ ಸೊಸೆ !

Posted By:
Subscribe to Filmibeat Kannada
ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತಾರಂತೆ 'ಸೂರ್ಯವಂಶ'ದ ಸೊಸೆ ! | Filmibeat Kannada

ಇಶಾ ಕೊಪ್ಪಿಕರ್.... ಕನ್ನಡದಲ್ಲಿ ಕೆಲವೇ ಸಿನಿಮಾ ಮಾಡಿದ್ದರೂ ಕೂಡ ಅವರ ಮುಖವನ್ನು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರು ಮರೆತಿಲ್ಲ. 'ಸೂರ್ಯವಂಶ' ಸಿನಿಮಾದಲ್ಲಿ ಸತ್ಯಮೂರ್ತಿ ಸೊಸೆಯಾಗಿದ್ದ ಈ ಚೆಲುವೆ ಈಗ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರಂತೆ.

'ಸೀರಿಯಲ್ ಕ್ಷೇತ್ರ'ಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

ಮಲೆಯಾಳಂ ಭಾಷೆಯ 'ಒಪ್ಪಂ' ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಕುರುಡನಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ನಟಿ ಇಶಾ ಕೊಪ್ಪಿಕರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಪೊಲೀಸ್ ಪಾತ್ರದಲ್ಲಿ ಇಶಾ ಕಾಣಿಸಿಕೊಳ್ಳಲಿದ್ದಾರಂತೆ.

Isha Koppikar comes back to Sandalwood as cop for 'Oppam' remake

2000ರಲ್ಲಿ 'ಓ ನನ್ನ ನಲ್ಲೆ' ಸಿನಿಮಾ ಮಾಡಿದ್ದ ಇಶಾ ಕೊಪ್ಪಿಕರ್ ಆ ಬಳಿಕ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬಿಜಿ ಆಗಿದ್ದರು. ಆದರೆ ಇದೀಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದು, ಇದೇ ಮೊದಲ ಬಾರಿಗೆ ಶಿವಣ್ಣನ ಜೊತೆ ಇಶಾ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರ ನವೆಂಬರ್ 23ಕ್ಕೆ ಸೆಟ್ಟೇರಲಿದ್ದು, ಜಿವಿಆರ್ ವಾಸು ನಿರ್ದೇಶನ ಮಾಡಲಿದ್ದಾರೆ.

English summary
Isha Koppikar back as cop in Sandalwood, for 'Oppam' remake. 'ಒಪ್ಪಂ' ಸಿನಿಮಾ ಕನ್ನಡದ ರಿಮೇಕ್ ಚಿತ್ರದಲ್ಲಿ ಇಶಾ ಕೊಪ್ಪಿಕರ್ ನಟಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada