For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿಯಲ್ಲಿ ವರನಟ V/S ಅಭಿನಯ ಭಾರ್ಗವ

  By Suneetha
  |

  ಮುಂದಿನ ತಿಂಗಳು ಫೆಬ್ರವರಿಯಲ್ಲಿ ಆಗಿನ ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ಎರಡು ಖ್ಯಾತ ಹಳೆಯ ಸಿನಿಮಾಗಳು ಮತ್ತೆ ತೆರೆ ಕಾಣಲಿವೆ. ನಟ ಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ 'ರಾಜಾ ನನ್ನ ರಾಜ' ಮತ್ತು ಅಭಿನಯ ಭಾರ್ಗವ ದಿವಂಗತ ಡಾ.ವಿಷ್ಣುವರ್ಧನ್ ಅವರ 'ಸಾಹಸ ಸಿಂಹ'.

  ಹೌದು ಈ ಎರಡು ಸಿನಿಮಾಗಳು ಡಿಜಿಟಲ್ ಆವೃತ್ತಿಯಲ್ಲಿ ಮರು ಬಿಡುಗಡೆಯಾಗುತ್ತಿದ್ದು, ಸುಮಾರು 30 ರಿಂದ 40 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

  ಪ್ರತೀ ವರ್ಷ ಒಂದು ಒಳ್ಳೆ ಸಿನಿಮಾವನ್ನು ಡಿಜಿಟಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿರುವ ಸಿನಿಮಾ ನಿರ್ಮಾಪಕರು ಈ ಬಾರಿ 'ರಾಜಾ ನನ್ನ ರಾಜ' ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. ಅಂದಹಾಗೆ 'ರಾಜಾ ನನ್ನ ರಾಜ' ಸಿನಿಮಾವನ್ನು ನಿರ್ಮಾಪಕ ಆನಂದ್ ಕುಮಾರ್ ಅವರು ಸುಮಾರು 35 ಲಕ್ಷ ಹಣವನ್ನು ವ್ಯಯಿಸಿ ಮರು ಬಿಡುಗಡೆ ಮಾಡುತ್ತಿದ್ದಾರೆ.

  ನಿರ್ದೇಶಕ ಎ.ವಿ ಶೇಷಗಿರಿ ರಾವ್ ನಿರ್ದೇಶನ ಮಾಡಿದ್ದ 'ರಾಜಾ ನನ್ನ ರಾಜ' ಸಿನಿಮಾಗೆ ಜಿ.ಕೆ ವೆಂಕಟೇಶ್ ಅವರು ಸಂಗೀತ ನಿರ್ದೇಶಕ ಮಾಡಿದ್ದರು. ನಟಿ ಆರತಿ ಅವರು ನಾಯಕಿಯಾಗಿ ನಟಿಸಿದ್ದರು.

  1989 ರಲ್ಲಿ ತೆರೆ ಕಂಡ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನಿಮಾ 'ಸಾಹಸ ಸಿಂಹ' ಚಿತ್ರವನ್ನು ನಿರ್ದೇಶಕ ಜೋ ಸೈಮನ್ ಅವರು ನಿರ್ದೇಶನ ಮಾಡಿದ್ದರು.

  ಇನ್ನು ಡಾ.ವಿಷ್ಣು ಅವರ 'ಸಾಹಸ ಸಿಂಹ' ಸಿನಿಮಾವನ್ನು ನಿರ್ಮಾಪಕ ಎಂ. ರಾಜು ಅವರು ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. ಅವರು ಹೇಳುವ ಪ್ರಕಾರ ಅವರು ಈ ಸಿನಿಮಾವನ್ನು ರೀ ರಿಲೀಸ್ ಮಾಡುತ್ತಿರುವುದು ವಿಷ್ಣು ಅವರ ಅಭಿಮಾನಕ್ಕೋಸ್ಕರ ಹೊರತಾಗಿ ಹಣಕ್ಕಾಗಿ ಅಲ್ಲ ಅಂತಾರೆ.

  English summary
  Come February, the new generation of viewers will be treated with two old classic Kannada films. Rajkumar's Raja Nana Raja and Vishuvardhan's Sahasa Simha will be re-released in digital format by distributors Anand Kumar and M Raju respectively. Both are planning to release the film in around 35 to 40 theatres all over Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X