ಶಿವರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಪರಿಶೀಲನೆ ಮುಕ್ತಾಯ.!
ಜನವರಿ 3, 2019 ಮುಂಜಾನೆ ಆರು ಗಂಟೆ ಸುಮಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಯಲ್ಲಿ ಶುರುವಾದ ಐಟಿ ರೇಡ್ ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮುಕ್ತಾಯಗೊಂಡಿದೆ.
ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ಪಂಚನಾಮೆ ಮಾಡಿ ನಾಗವಾರದ ಶಿವಣ್ಣನ ನಿವಾಸದಿಂದ ಹಿರಿಯ ಆದಾಯ ತೆರಿಗೆ ಅಧಿಕಾರಿಗಳು ಇವತ್ತು ಬೆಳಗ್ಗೆ ವಾಪಸ್ ಹೊರಟರು.
ಶಿವರಾಜ್ ಕುಮಾರ್ ಬದುಕಿನಲ್ಲಿ ಐಟಿ ರೇಡ್ ಆಗಿರುವುದು ಇದೇ ಮೊಟ್ಟ ಮೊದಲ ಬಾರಿಗೆ. ಹೀಗಾಗಿ ಇದು ಶಾಕ್ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಹೊಸ ಅನುಭವ ಅಂತ ಮಾಧ್ಯಮಗಳ ಮುಂದೆ ಶಿವರಾಜ್ ಕುಮಾರ್ ಹೇಳಿದ್ದಾರೆ. ಮುಂದೆ ಓದಿರಿ..

ಶಿವಣ್ಣ ಮನೆಯಲ್ಲಿ ಐಟಿ ರೇಡ್ ಅಂತ್ಯ
ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯ ಅಂತ್ಯಗೊಂಡಿದೆ. ಶಿವಣ್ಣ ಪತ್ನಿ ಗೀತಾಗೆ ಸೇರಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಇಂದು ಮುಂಜಾನೆ ಐಟಿ ಅಧಿಕಾರಿಗಳು ವಾಪಸ್ ಹೊರಟರು.

ಹೊಸ ಅನುಭವ
''ಐಟಿ ರೇಡ್ ನನಗೆ ಮೊದಲ ಬಾರಿ ಆಗಿದ್ದು. 84-85 ನಲ್ಲಿ ನಾವು ಚೆನ್ನೈನಲ್ಲಿದ್ದಾಗ, ಐಟಿ ದಾಳಿ ಆಗಿತ್ತು. ಆಗಿನ್ನೂ ನಾನು ಓದುತ್ತಿದ್ದೆ. ನನಗೆ ಶಾಕ್ ಅನ್ನೋದಕ್ಕಿಂತ ಒಂದು ಹೊಸ ಅನುಭವ ಆಗಿದೆ. ಐಟಿ ಅಧಿಕಾರಿಗಳು ಏನೂ ತೊಂದರೆ ಮಾಡಲಿಲ್ಲ. ಸ್ವಲ್ಪ ಬೇಜಾರು ಆಗುತ್ತಿತ್ತು. ಆದ್ರೆ, ಅದು ಅವರ ಕರ್ತವ್ಯ. ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿದ್ದೇವೆ'' ಎಂದು ಐಟಿ ದಾಳಿ ಮುಗಿದ ಬಳಿಕ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಐಟಿ ದಾಳಿ ನಡೆದಿದ್ದು ಯಾಕೆ.?
''ಯಾಕೆ ಐಟಿ ದಾಳಿ ಮಾಡಿದರು ಅನ್ನೋದು ನನಗೂ ಗೊತ್ತಿಲ್ಲ. ನಾನು ಆದಾಯ ತೆರಿಗೆ ಕಟ್ಟಿದ್ದೇನೆ. ಹೈ ಬಜೆಟ್ ಸಿನಿಮಾ ಮಾಡಿದ್ದಕ್ಕೆ ಹೀಗೆ ಮಾಡಿದ್ರಾ ಅನ್ನೋದು ನಮಗೆ ಗೊತ್ತಿಲ್ಲ. ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ, ಹೋಗಬೇಕಾಗುತ್ತದೆ'' ಎಂದರು ಶಿವಣ್ಣ.

ರಿಲ್ಯಾಕ್ಸ್ ಮೂಡ್ ನಲ್ಲಿ ಶಿವಣ್ಣ ಫ್ಯಾಮಿಲಿ
ಕಳೆದ ಮೂರು ದಿನಗಳಿಂದ ನಡೆದ ಐಟಿ ದಾಳಿಯಿಂದಾಗಿ, ಶಿವರಾಜ್ ಕುಮಾರ್ ಫ್ಯಾಮಿಲಿ ಕೊಂಚ ಟೆನ್ಷನ್ ನಲ್ಲಿತ್ತು. ಆದ್ರೀಗ, ಐಟಿ ರೇಡ್ ಕಂಪ್ಲೀಟ್ ಆಗಿದ್ದು, ಶಿವಣ್ಣ ಫ್ಯಾಮಿಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.


Click it and Unblock the Notifications











