ಅಂತೂ ಸುದೀಪ್ ಮನೆಯಲ್ಲೂ ಐಟಿ ತಲಾಶ್ ಮುಗೀತು.!
Recommended Video

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ. ಜನವರಿ 3 ರಂದು ಮುಂಜಾನೆ 6 ಗಂಟೆಗೆ ಸುದೀಪ್ ಮನೆಯಲ್ಲಿ ಶುರುವಾದ ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ಇಂದು ಬೆಳಗ್ಗೆ 5.30 ರ ಸುಮಾರಿಗೆ ಮುಗಿಯಿತು.
ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ಆದಾಯ ತೆರಿಗೆಯ ಹಿರಿಯ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ಸುದೀಪ್ ಮನೆಯಿಂದ ಹೊರಟರು.

ಆದಾಯ ತೆರಿಗೆ ಇಲಾಖೆಯ ಎಂಟು ಅಧಿಕಾರಿಗಳು ಎರಡು ದಿನ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿದರು. ಸುದೀಪ್, ಅವರ ತಾಯಿ ಮತ್ತು ಪತ್ನಿಯನ್ನ ವಿಚಾರಣೆಗೆ ಒಳಪಡಿಸಲಾಯಿತು. ಸುದೀಪ್ ರವರ ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋ ಸಂಭಾವನೆ, ಚಿತ್ರಗಳ ಸಂಭಾವನೆ ಸೇರಿದಂತೆ ಎಲ್ಲಾ ಆದಾಯ ಮೂಲಗಳ ಕುರಿತು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
47 ಗಂಟೆಗಳ ಸುದೀರ್ಘ ತನಿಖೆ ಮುಗಿದ ಬಳಿಕ ಸುದೀಪ್ ನಿವಾಸದಿಂದ ಅಧಿಕಾರಿಗಳು ಹೊರಟಿದ್ದಾರೆ. ಐಟಿ ಆಫೀಸರ್ ಗಳು ಹೊರಡುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಗೆ ಕಿಚ್ಚ ಸುದೀಪ್ ತೆರಳಿದ್ದಾರೆ.
ಇಂದು ಮತ್ತು ನಾಳೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುದೀಪ್ ರವರ ಸಂಚಿಕೆಗಳು ಪ್ರಸಾರ ಆಗಬೇಕು. ಅದರ ಚಿತ್ರೀಕರಣದಲ್ಲಿ ಭಾಗವಹಿಸಲು ತರಾತುರಿಯಲ್ಲಿ ಸುದೀಪ್ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ತೆರಳಿದ್ದಾರೆ.


Click it and Unblock the Notifications











