twitter
    For Quick Alerts
    ALLOW NOTIFICATIONS  
    For Daily Alerts

    ಅಂತೂ ಸುದೀಪ್ ಮನೆಯಲ್ಲೂ ಐಟಿ ತಲಾಶ್ ಮುಗೀತು.!

    |

    Recommended Video

    Sandalwood IT Raid: ಅಂತೂ ಸುದೀಪ್ ಮನೆಯಲ್ಲೂ ಐಟಿ ತಲಾಶ್ ಮುಗೀತು.!

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ. ಜನವರಿ 3 ರಂದು ಮುಂಜಾನೆ 6 ಗಂಟೆಗೆ ಸುದೀಪ್ ಮನೆಯಲ್ಲಿ ಶುರುವಾದ ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ಇಂದು ಬೆಳಗ್ಗೆ 5.30 ರ ಸುಮಾರಿಗೆ ಮುಗಿಯಿತು.

    ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ಆದಾಯ ತೆರಿಗೆಯ ಹಿರಿಯ ಅಧಿಕಾರಿಗಳು ಇಂದು ಬೆಳಗ್ಗಿನ ಜಾವ ಸುದೀಪ್ ಮನೆಯಿಂದ ಹೊರಟರು.

    45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.!45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.!

    IT Raid at Sudeep house ends

    ಆದಾಯ ತೆರಿಗೆ ಇಲಾಖೆಯ ಎಂಟು ಅಧಿಕಾರಿಗಳು ಎರಡು ದಿನ ಸುದೀಪ್ ಮನೆಯಲ್ಲಿ ಪರಿಶೀಲನೆ ನಡೆಸಿದರು. ಸುದೀಪ್, ಅವರ ತಾಯಿ ಮತ್ತು ಪತ್ನಿಯನ್ನ ವಿಚಾರಣೆಗೆ ಒಳಪಡಿಸಲಾಯಿತು. ಸುದೀಪ್ ರವರ ಬ್ಯಾಂಕ್ ವಹಿವಾಟು, ರಿಯಾಲಿಟಿ ಶೋ ಸಂಭಾವನೆ, ಚಿತ್ರಗಳ ಸಂಭಾವನೆ ಸೇರಿದಂತೆ ಎಲ್ಲಾ ಆದಾಯ ಮೂಲಗಳ ಕುರಿತು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಶಿವರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಪರಿಶೀಲನೆ ಮುಕ್ತಾಯ.! ಶಿವರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಪರಿಶೀಲನೆ ಮುಕ್ತಾಯ.!

    47 ಗಂಟೆಗಳ ಸುದೀರ್ಘ ತನಿಖೆ ಮುಗಿದ ಬಳಿಕ ಸುದೀಪ್ ನಿವಾಸದಿಂದ ಅಧಿಕಾರಿಗಳು ಹೊರಟಿದ್ದಾರೆ. ಐಟಿ ಆಫೀಸರ್ ಗಳು ಹೊರಡುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಗೆ ಕಿಚ್ಚ ಸುದೀಪ್ ತೆರಳಿದ್ದಾರೆ.

    ಇಂದು ಮತ್ತು ನಾಳೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುದೀಪ್ ರವರ ಸಂಚಿಕೆಗಳು ಪ್ರಸಾರ ಆಗಬೇಕು. ಅದರ ಚಿತ್ರೀಕರಣದಲ್ಲಿ ಭಾಗವಹಿಸಲು ತರಾತುರಿಯಲ್ಲಿ ಸುದೀಪ್ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ತೆರಳಿದ್ದಾರೆ.

    English summary
    After 47 hours, IT Raid at Kannada Actor Sudeep house ends.
    Saturday, January 5, 2019, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X