twitter
    For Quick Alerts
    ALLOW NOTIFICATIONS  
    For Daily Alerts

    ಸೀಮಂತದಲ್ಲಿ ರಾಧಿಕಾ ಪಂಡಿತ್ ಗೆ ಸಿಕ್ಕ ದುಬಾರಿ ಉಡುಗೊರೆಗಳ ಮೇಲೆ ಐಟಿ ಕಣ್ಣು.!

    |

    Recommended Video

    Sandalwood IT Raid: ರಾಧಿಕಾ ಪಂಡಿತ್ ಸೀಮಂತದ ಉಡುಗೊರೆಯನ್ನೂ ಬಿಡದ ಐಟಿ ಅಧಿಕಾರಿಗಳು | Oneindia Kannada

    ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲಿನ ಐಟಿ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅತ್ತ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದರೆ, ಇತ್ತ ಯಶ್ ಮನೆಯಲ್ಲಿ ಇನ್ನೂ ತಲಾಶ್ ನಡೆಯುತ್ತಲೇ ಇದೆ.

    ಯಶ್ ಖರೀದಿ ಮಾಡಿರುವ ಆಸ್ತಿ, ಚಿನ್ನಾಭರಣ, ಚಿತ್ರಗಳಿಗೆ ಪಡೆಯುವ ಸಂಭಾವನೆ ಸೇರಿದಂತೆ ಆದಾಯದ ಮೂಲಗಳ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜೊತೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಸೇರಿದ ದುಬಾರಿ ಉಡುಗೊರೆಗಳ ಮೇಲೂ ಐಟಿ ಕಣ್ಣಿಟ್ಟಿದೆ.

    ಬೆಂಗಳೂರಿಗೆ ಬಂದ ಯಶ್, ಐಟಿ ರೈಡ್ ಬಗ್ಗೆ ಹೇಳಿದ್ದೇನು?ಬೆಂಗಳೂರಿಗೆ ಬಂದ ಯಶ್, ಐಟಿ ರೈಡ್ ಬಗ್ಗೆ ಹೇಳಿದ್ದೇನು?

    IT Raid continues in Yashs house on Day 3

    ನವೆಂಬರ್ ತಿಂಗಳಲ್ಲಿ ತುಂಬು ಗರ್ಭಿಣಿ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಪ್ರತಿಷ್ಟಿತ ಹೋಟೆಲ್ ನಲ್ಲಿ ನಡೆದಿತ್ತು. ಸೀಮಂತಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಆಗಮಿಸಿ ಗರ್ಭವತಿ ರಾಧಿಕಾ ಪಂಡಿತ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದರು.

    ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ? ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ?

    ಈ ಬೆಲೆ ಬಾಳುವ ಉಡುಗೊರೆಗಳ ವಿಚಾರವಾಗಿ ಆದಾಯ ತೆರಿಗೆ ಅಧಿಕಾರಿಗಳು ಸದ್ಯ ಮೌಲ್ಯಮಾಪನ ನಡೆಸುತ್ತಿದ್ದಾರೆ. ಇದರ ನಡುವೆ ಪಂಚನಾಮೆಗೂ ಸಿದ್ಧತೆ ಮಾಡಕೊಳ್ಳಲಾಗಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಯಶ್ ಮನೆಯಲ್ಲಿ ಪರಿಶೀಲನೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.

    English summary
    IT Raid continues in Rocking Star Yash's house on Day 3.
    Saturday, January 5, 2019, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X