For Quick Alerts
  ALLOW NOTIFICATIONS  
  For Daily Alerts

  ಕೊನೆಗೊಂಡ ಐಟಿ ಡ್ರಿಲ್: ಹುಬ್ಬಳ್ಳಿಗೆ ಅಪ್ಪು, 'ದೊಡ್ಮನೆ'ಗೆ ದೀಪು!

  |

  ಹೊಸ ವರ್ಷದ ಸಂಭ್ರಮದಲ್ಲಿ ಇದ್ದ ಸ್ಯಾಂಡಲ್ ವುಡ್ ಗೆ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ಅಂತ ಆಘಾತ ನೀಡಿದರು. ಜನವರಿ 3 ರಂದು ಬೆಳ್ಳಂಬೆಳಗ್ಗೆಯೇ ಗಾಂಧಿನಗರದ ಟಾಪ್ ನಟರು, ನಿರ್ಮಾಪಕರ ನಿವಾಸದ ಮೇಲೆ ಐಟಿ ಆಫೀಸರ್ಸ್ ದಾಳಿ ಮಾಡಿದರು.

  ಸತತ 40 ಗಂಟೆಗಳಿಗೂ ಹೆಚ್ಚು ಕಾಲ ನಟರುಗಳ ಮನೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಇಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು ವಾಪಸ್ ಹೊರಟರು.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಮನೆಯಲ್ಲಿ ಐಟಿ ದಾಳಿ ಪೂರ್ಣಗೊಂಡಿದೆ. ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಐಟಿ ಆಫೀಸರ್ ಗಳು ಹೊರಟ ಮೇಲೆ ತಮ್ಮ ತಮ್ಮ ಕೆಲಸಗಳಲ್ಲಿ ನಟರು ತಲ್ಲೀನರಾಗಿದ್ದಾರೆ. ಮುಂದೆ ಓದಿರಿ...

  ಹುಬ್ಬಳ್ಳಿಗೆ ಹೊರಟ ಪುನೀತ್

  ಐಟಿ ದಾಳಿ ಮುಗಿಯುತ್ತಿದ್ದಂತೆಯೇ, ಹುಬ್ಬಳ್ಳಿಗೆ ಪುನೀತ್ ರಾಜ್ ಕುಮಾರ್ ಪಯಣ ಬೆಳೆಸಿದ್ದಾರೆ. ನಿಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅಭಿನಯದ 'ನಟ ಸಾರ್ವಭೌಮ' ಚಿತ್ರದ ಆಡಿಯೋ ರಿಲೀಸ್ ಇಂದು ಸಂಜೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. 'ನಟ ಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇವತ್ತು ಬೆಳಗ್ಗೆ ಅಪ್ಪು ಹುಬ್ಬಳ್ಳಿ ಕಡೆ ಹೊರಟರು.

  45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.!

  ಬಿಡದಿಗೆ ತೆರಳಿದ ಸುದೀಪ್

  ಬಿಡದಿಗೆ ತೆರಳಿದ ಸುದೀಪ್

  ಇತ್ತ ಸುದೀಪ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಗಳ ಪರಿಶೀಲನೆ ಮುಗಿಯುತ್ತಿದ್ದಂತೆಯೇ, ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಕಿಚ್ಚ ಸುದೀಪ್ ತೆರಳಿದ್ದಾರೆ.

  ಅಂತೂ ಸುದೀಪ್ ಮನೆಯಲ್ಲೂ ಐಟಿ ತಲಾಶ್ ಮುಗೀತು.!

  ತರಾತುರಿಯಲ್ಲಿ ಹೊರಟ ಸುದೀಪ್

  ತರಾತುರಿಯಲ್ಲಿ ಹೊರಟ ಸುದೀಪ್

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಇಂದು ಮತ್ತು ನಾಳೆ ಸುದೀಪ್ ಇರುವ ಸಂಚಿಕೆಗಳು ಪ್ರಸಾರ ಆಗಬೇಕು. ಹೀಗಾಗಿ ಸಂಚಿಕೆಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತರಾತುರಿಯಲ್ಲಿ 'ಬಿಗ್ ಬಾಸ್' ಮನೆಗೆ ಸುದೀಪ್ ಹೊರಟಿದ್ದಾರೆ.

  ಶಿವರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಪರಿಶೀಲನೆ ಮುಕ್ತಾಯ.!

  ರೆಸ್ಟ್ ಮಾಡುತ್ತಿರುವ ಶಿವಣ್ಣ

  ರೆಸ್ಟ್ ಮಾಡುತ್ತಿರುವ ಶಿವಣ್ಣ

  ಸತತ ಎರಡು ದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರಿಂದ ಶಿವಣ್ಣನಿಗೆ ನಿದ್ದೆ ಇರಲಿಲ್ಲ. ಇಂದು ಐಟಿ ದಾಳಿ ಮುಗಿದಿದ್ದು, ಇವತ್ತು ಮನೆಯಲ್ಲೇ ಶಿವಣ್ಣ ವಿಶ್ರಾಂತಿ ಪಡೆಯಲಿದ್ದಾರೆ.

  English summary
  IT Raid ends: Puneeth Rajkumar travels to Hubbali, Sudeep to Bidadi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X