ಬಂದ್ರು-ಹೋದ್ರು-ತಂದ್ರು: ಮೂರು ದಿನದ 'ಐಟಿ' ದಾಳಿಯಲ್ಲಿ ಆಗಿದ್ದಿಷ್ಟೇ.!
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮೇಲೆ ಐಟಿ ದಾಳಿ ಆಗಿದ್ದು, ಸತತ ಮೂರು ದಿನಗಳಿಂದ ದಾಖಲೆ ಪತ್ರಗಳನ್ನ, ಆಸ್ತಿವಿವರಗಳನ್ನ, ಆದಾಯದ ಮೂಲವನ್ನ ಪರಿಶೀಲನೆ ಮಾಡಲಾಗ್ತಿದೆ. ಐಟಿ ಅಧಿಕಾರಿಗಳು ಅಂದ್ಮೇಲೆ ಅವರ ಕೆಲಸವೇ ಅದೇ ಬಿಡಿ.
ಎರಡು ದಿನಗಳಿಂದ ಐಟಿ ದಾಳಿಯಿಂದ ಯಾರ ಮನೆಯಲ್ಲಿ ಎಷ್ಟು ಆಸ್ತಿ ಸಿಕ್ಕಿದೆ, ಎಷ್ಟು ಕೆಜಿ ಚಿನ್ನ ಸಿಕ್ಕಿದೆ, ಅಕ್ರಮ ಆಸ್ತಿ ಇದೆಯಾ, ಆದಾಯಕ್ಕೆ ದಾಖಲೆಗಳು ಇದ್ಯಾ ಇದರ ಬಗ್ಗೆ ಒಂದೇ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.
ಎರಡು ದಿನದಿಂದ ಸುದ್ದಿ ಏನಪ್ಪಾ ಅಂದ್ರೆ, ಊಟ ತರಿಸಿಕೊಂಡರು, ಬ್ಯಾಗ್ ತಂದರು, ಚೀಟಿ ಹಿಡಿದುಕೊಂಡು ಹೋದರು, ಮಕ್ಕಳು ಮನೆಗೆ ಬಂದರು, ಯಾವ ಅಡಿಗೆ ತರಿಸಿಕೊಂಡರು, ಆನ್ ಲೈನ್ ನಿಂದ ಊಟ ಬಂತು, ಇಬ್ಬರು ಅಧಿಕಾರಿಗಳು ಮನೆ ಒಳಗೆ ಹೋದರು, ನಾಲ್ವರು ಅಧಿಕಾರಿಗಳು ಮನೆಯಿಂದ ಹೊರಗೆ ಹೋದರು....ಇದನ್ನ ಬಿಟ್ಟರೇ ಬೇರೆ ಏನು ಇಲ್ಲ.
ನಿಜಕ್ಕೂ ಐಟಿ ದಾಳಿ ಮಾಡಲು ಕಾರಣವೇನು, ನಟ ಮತ್ತು ನಿರ್ಮಾಪಕರ ಮನೆಯಲ್ಲಿ ಸಿಕ್ಕಿ ಆಸ್ತಿ ವಿವರ ಎಷ್ಟು ಎನ್ನುವುದರ ಬಗ್ಗೆ ಐಟಿ ಅಧಿಕಾರಿಗಳಾಗಲಿ ಅಥವಾ ರೇಡ್ ಗೆ ಒಳಗಾಗಿರುವ ನಟ, ನಿರ್ಮಾಪಕರಾಗಲಿ ಎಲ್ಲಿಯೂ ಮಾತನಾಡಿಲ್ಲ.

ಆದ್ರೂ, ಇದೊಂದು ಐತಿಹಾಸಿಕ ಐಟಿ ದಾಳಿ ಎಂದು ಬಣ್ಣಿಸಲಾಗ್ತಿದೆ. ಎರಡು ದಿನದಿಂದ ಡೆವಲಪ್ ಮೆಂಟ್ ಏನು ಅಂದ್ರೆ, ಬಂದ್ರು-ಹೋದ್ರು, ತಂದ್ರು-ಹೋದ್ರು ಅನ್ನೋದು ಬಿಟ್ಟರೇ ಬೇರೆ ಯಾವ ಮಾಹಿತಿಯೂ ಇಲ್ಲ.
ಸದ್ಯಕ್ಕೆ ಪುನೀತ್, ಶಿವಣ್ಣ, ಯಶ್, ಸುದೀಪ್, ವಿಜಯ್ ಕಿರಗಂದೂರ್, ರಾಕ್ ಲೈನ್ ವೆಂಕಟೇಶ್, ಜಯಣ್ಣ, ಸಿಆರ್ ಮನೋಹರ್ ಎಲ್ಲರೂ ಮನೆಯಲ್ಲಿ ಬಂಧಿತರಾಗಿದ್ದಾರೆ ಎನ್ನುವುದು ಮಾತ್ರ ಸತ್ಯ. ಈ ದಾಳಿ ಬಗ್ಗೆ ಸ್ವತಃ ಐಟಿ ಅಧಿಕಾರಿಗಳು ಹೇಳುವವರೆಗೂ ಯಾವುದಕ್ಕೂ ಸ್ಪಷ್ಟನೆ ಸಿಗಲ್ಲ.


Click it and Unblock the Notifications











