ಸುದೀಪ್ ಮನೆ ಮೇಲೆ ಐಟಿ ದಾಳಿ: 'ಪೈಲ್ವಾನ್' ನಿರ್ದೇಶಕ ಕೃಷ್ಣ ಹೇಳಿದ್ದೇನು.?

Recommended Video

Sandalwood IT Raid: IT ದಾಳಿಗೆ 'ಪೈಲ್ವಾನ್' ಸಿನಿಮಾ ಕಾರಣಾನ..? | FILMIBEAT KANNADA

ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಎರಡನೇ ದಿನವೂ ಮುಂದುವರೆದಿದೆ.

ಕಿಚ್ಚ ಸುದೀಪ್ ನಿವಾಸಕ್ಕೆ ನಿನ್ನೆ ಐಟಿ ಅಧಿಕಾರಿಗಳು ಎಂಟ್ರಿಕೊಡುತ್ತಿದ್ದಂತೆಯೇ, 'ಪೈಲ್ವಾನ್' ಚಿತ್ರೀಕರಣವನ್ನ ಮೊಟಕುಗೊಳಿಸಿ ಸುದೀಪ್ ಮನೆ ಸೇರಿದರು. ಇಂದು ಕೂಡ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸುದೀಪ್ ನಿವಾಸಕ್ಕೆ 'ಪೈಲ್ವಾನ್' ನಿರ್ದೇಶಕ ಕೃಷ್ಣ ಭೇಟಿ ಕೊಟ್ಟಿದ್ದರು.

'ಪೈಲ್ವಾನ್' ಬಿಗ್ ಬಜೆಟ್ ಚಿತ್ರವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಐಟಿ ಅಧಿಕಾರಿಗಳು ನಿರ್ದೇಶಕ ಕೃಷ್ಣ ರವರನ್ನ ಬರಮಾಡಿಕೊಂಡರು ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಆದ್ರೆ, ವಾಸ್ತವ ಇದಲ್ಲ. ಕಾಳಜಿ ಹಾಗೂ ಕಳಕಳಿಯಿಂದ ನಿರ್ದೇಶಕ ಕೃಷ್ಣ, ಸುದೀಪ್ ನಿವಾಸಕ್ಕೆ ಭೇಟಿ ಕೊಟ್ಟರು ಅಷ್ಟೇ. ಮುಂದೆ ಓದಿರಿ..

ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಕೃಷ್ಣ

ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಕೃಷ್ಣ

ಕಿಚ್ಚ ಸುದೀಪ್ ನಿವಾಸಕ್ಕೆ ಇಂದು ಮಧ್ಯಾಹ್ನದ ವೇಳೆಗೆ ನಿರ್ದೇಶಕ ಕೃಷ್ಣ ಭೇಟಿ ಕೊಟ್ಟರು. ದಿಢೀರ್ ಅಂತ ಡೈರೆಕ್ಟರ್ ಕೃಷ್ಣ ಬಂದಿದ್ದರಿಂದ ಹಲವು ಊಹಾಪೋಹ ಸೃಷ್ಟಿ ಆಯ್ತು. ಹೀಗಾಗಿ, ಈ ಬಗ್ಗೆ ಮಾಧ್ಯಮಗಳಿಗೆ ನಿರ್ದೇಶಕ ಕೃಷ್ಣ ಸ್ಪಷ್ಟನೆ ಕೊಟ್ಟಿದ್ದಾರೆ.

ಶೂಟಿಂಗ್ ಕ್ಯಾನ್ಸಲ್

ಶೂಟಿಂಗ್ ಕ್ಯಾನ್ಸಲ್

''ಪೈಲ್ವಾನ್' ಶೂಟಿಂಗ್ ಕ್ಯಾನ್ಸಲ್ ಆಗಿದೆ. ಕಾಳಜಿ, ಕಳಕಳಿಯಿಂದ ಸುದೀಪ್ ಮನೆಗೆ ಬಂದೆ. ಬೇರೇನೂ ಇಲ್ಲ. ಸುದೀಪ್ ಆರಾಮಾಗಿ ಇದ್ದಾರೆ. ಇನ್ನೇನು ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿ ಇದೆ'' ಎಂದರು ನಿರ್ದೇಶಕ ಕೃಷ್ಣ.

ಸುಳ್ಳು ಸುದ್ದಿ

ಸುಳ್ಳು ಸುದ್ದಿ

''ಡಿಜಿಟಲ್ ಮನಿ ಆದ್ಮೇಲೆ ಬ್ಲಾಕ್ ಮನಿ, ವೈಟ್ ಮನಿ ಅನ್ನೋದು ಇಲ್ಲ. 95% ವೈಟ್ ಮನಿಯಲ್ಲೇ ಚಿತ್ರರಂಗ ಕೆಲಸ ಮಾಡುತ್ತಿರುವುದು. ದಿನಗೂಲಿ, ಊಟ-ತಿಂಡಿ ಅನ್ನೋದು ಬಿಟ್ಟರೆ ಬೇರೆ ಯಾವ ವ್ಯವಹಾರವೂ ಕ್ಯಾಶ್ ನಲ್ಲಿ ನಡೆಯಲ್ಲ. ಚಿತ್ರರಂಗ ಮಾತ್ರ ಅಂತಲ್ಲ, ಎಲ್ಲೆಡೆ ಹೀಗೇ ಆಗ್ತಿರೋದು. ಚಿತ್ರರಂಗದಲ್ಲಿ ಬ್ಲಾಕ್ ನ ವೈಟ್ ಮಾಡಬಹುದು ಎಂಬುದೆಲ್ಲ ಸುಳ್ಳು ಸುದ್ದಿ'' ಅಂತಾರೆ ನಿರ್ದೇಶಕ ಕೃಷ್ಣ

ಪೈಲ್ವಾನ್ ಬಗ್ಗೆ ಏನೂ ಕೇಳಿಲ್ಲ.!

ಪೈಲ್ವಾನ್ ಬಗ್ಗೆ ಏನೂ ಕೇಳಿಲ್ಲ.!

''ಪೈಲ್ವಾನ್' ಸಂಬಂಧಪಟ್ಟಂತೆ ಏನ್ನನ್ನೂ ಕೇಳಿಲ್ಲ. ಯಾಕಂದ್ರೆ, ಇನ್ನೂ ಯಾವುದೂ ಮುಕ್ತಾಯ ಆಗಿಲ್ಲ. ಸಿನಿಮಾ ಕಂಪ್ಲೀಟ್ ಆಗದೆ, ಅದರ ಆಡಿಟ್ ಶೀಟ್ ಫೈಲ್ ಆಗದೆ, ಯಾಕೆ ತನಿಖೆ ಮಾಡ್ತಾರೆ.? ಸಾಧ್ಯ ಇಲ್ಲ'' ಎಂದು ನಿರ್ದೇಶಕ ಕೃಷ್ಣ ತಿಳಿಸಿದರು.

More from Filmibeat

English summary
IT Raid on Kiccha Sudeep's house: Phailwan Director Krishna's reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X