ರವಿಚಂದ್ರನ್ ಮನೆ ಮೇಲೆ 20 ವರ್ಷದ ಹಿಂದೆಯೇ ಐಟಿ ದಾಳಿ ಆಗಿತ್ತು: ಆಗ ಸಿಕ್ಕಿದ್ದೇನು?
Recommended Video

ಸ್ಯಾಂಡಲ್ ವುಡ್ ನಟರ ಮೇಲೆ ಐಟಿ ದಾಳಿ ಆದ ಕ್ಷಣವನ್ನ ಇನ್ನು ಮರೆತಿಲ್ಲ. ಏಕಕಾಲದಲ್ಲಿ ಕನ್ನಡದ ಟಾಪ್ ಸ್ಟಾರ್ ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿ ದಾಳಿ ನಡೆಸಿದ್ದರು. ಸತತ ಎರಡೂವರೆ ದಿನಗಳ ಕಾಲ ನಟ ಮತ್ತು ನಿರ್ಮಾಪಕರ ಮನೆಯಲ್ಲೇ ಕೂತು ಸಂಪೂರ್ಣ ವಿಚಾರಣೆ ನಡೆಸಿದ್ದರು.
ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಐಟಿ ರೇಡ್ ಎಂದು ಹೇಳಲಾಗಿತ್ತು. ಈ ಘಟನೆ ಇಂಡಸ್ಟ್ರಿಗೆ ಒಂದು ಕಪ್ಪುಚುಕ್ಕೆ ಆಯಿತಾದರೂ, ಯಾವುದೇ ಅಕ್ರಮ ಸಾಬೀತಾಗಿಲ್ಲ ಎನ್ನುವುದು ನಿರಾಳ ತಂದಿತ್ತು.
ಇದೀಗ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಐಟಿ ರೇಡ್ ಬಗ್ಗೆ ಮಾತನಾಡಿದ್ದು, ತಮ್ಮ ಮನೆ ಮೇಲೂ 20 ವರ್ಷದ ಹಿಂದೆಯೇ ಐಟಿ ದಾಳಿ ನಡೆದಿತ್ತು'' ಎಂದು ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ರವಿ ಸರ್ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಸಿಕ್ಕಿದ್ದೇನು? ಮುಂದೆ ಓದಿ......

ರೇಡ್ ಆದ್ರೆ ತಪ್ಪು ಮಾಡಿದ್ರು ಅಂತಲ್ಲ
ಐಟಿ ರೇಡ್ ಎಲ್ಲರ ಜೀವನದಲ್ಲೂ ಬರುವ ಸಾಮಾನ್ಯ ವಿಷ್ಯ. ದುಡ್ಡಿನ ವ್ಯವಹಾರ ಹೆಚ್ಚು ಇದ್ದ ಕಡೆ ವಿವರಣೆ, ವಿಚಾರಣೆ ಸಾಮಾನ್ಯ. ಅದು ಅವರ ಕರ್ತವ್ಯ. ಇವರೆಲ್ಲ ತಪ್ಪು ಮಾಡಿದ್ದಾರೆ ಎಂದು ದಾಳಿಯಾಗಿರಲ್ಲ. ಕಟ್ಟಿಲ್ಲವೇನೋ, ನಮಗೆ ಕೊಟ್ಟಿರೋ ಲೆಕ್ಕ ಇಷ್ಟೇನಾ ಎಂಬ ಅನುಮಾನದಿಂದ ಬರ್ತಾರೆ.

20 ವರ್ಷದ ಹಿಂದೆಯೇ ಬಂದಿದ್ದರು
ಈ ಹಿಂದೆ ಡಾ ರಾಜ್ ಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು ಎಂಬ ಸುದ್ದಿಯನ್ನ ಕೇಳಿದ್ದೀವಿ. ಅದೇ ರೀತಿ ಕ್ರೇಜಿಸ್ಟಾರ್ ಮನೆ ಮೇಲೂ 20 ವರ್ಷದ ಹಿಂದೆಯೇ ಐಟಿ ದಾಳೆ ನಡೆದಿತ್ತು. ಈ ವಿಷ್ಯವನ್ನ ಖುದ್ದು ರವಿಚಂದ್ರನ್ ಅವರೇ ಬಹಿರಂಗಪಡಿಸಿದ್ದಾರೆ. ದಾಳಿ ಮಾಡಿದ ಅಧಿಕಾರಿಗಳೇ ಅಚ್ಚರಿಯಾಗಿದ್ದರಂತೆ.

ಕೈಬೀಸಿಕೊಂಡು ಹೋದರು
''ನನ್ನ ಮನೆಗೆ 20 ವರ್ಷದ ಹಿಂದೆಯೇ ಐಟಿ ಅಧಿಕಾರಿಗಳು ಬಂದಿದ್ರು. ಬಂದು ಕೈಬೀಸಿಕೊಂಡು ಇಷ್ಟೇನಾ ನಿಮ್ಮ ಮನೆಯಲ್ಲಿರೋದು ಅಂತ ಆಶ್ಚರ್ಯವಾಗಿದ್ದರು. ನಮ್ಮ ಮನೇಲಿ ಇಷ್ಟೇ ಇರೋದು. ನನಗೆ ಬ್ಯಾಂಕ್ ನಲ್ಲಿ ಹಣ ಇಟ್ಟು ಅಭ್ಯಾಸವಿಲ್ಲ, ಜೇಬಲ್ಲೂ ಇಟ್ಟುಕೊಳ್ಳುವುದಿಲ್ಲ. ಬಂದ ಹಣವನ್ನ ಖರ್ಚು ಮಾಡಿಬಿಡ್ತೀನಿ''

'ದಶರಥ'ನಿಗೆ ದರ್ಶನ್ ಸಾಥ್
''ದರ್ಶನ್ ಅವರು ದಶರಥ ಚಿತ್ರದ ಆರಂಭದಲ್ಲಿ ವಾಯ್ಸ್ ನೀಡಿದ್ದಾರೆ. ಇದು ನನಗೂ ಗೊತ್ತಾಗಿದ್ದೇ ಲೇಟ್ ಆಗಿ. ಮೊನ್ನೆ ನಿರ್ದೇಶಕರು ಹೇಳಿದ್ರು. ಇಂಡಸ್ಟ್ರಿಯಲ್ಲಿ ನಟರ ಮಧ್ಯೆ ಒಂದು ಬಾಂಧವ್ಯವಿದೆ. ಅವರು ಸಿನಿಮಾಗಳಿಗೆ ನಾನು, ನಮ್ಮ ಸಿನಿಮಾಗಳಿಗೆ ಅವರು ಅದೊಂದು ಸ್ನೇಹ. ದರ್ಶನ್ ಒಬ್ಬರೇ ಅಲ್ಲ, ಸುದೀಪ್, ಯಶ್, ಎಲ್ಲರೂ ಕೊಡ್ತಾರೆ'' ಎಂದು ರವಿಮಾಮ ಹೇಳಿದ್ರು.


Click it and Unblock the Notifications











