twitter
    For Quick Alerts
    ALLOW NOTIFICATIONS  
    For Daily Alerts

    ಮೇ 12 ವಿಜಯ್ ಪ್ರಕಾಶ್ ಡೇ: ಅಮೆರಿಕದ ಶ್ರೇಷ್ಠ ಗೌರವಕ್ಕೆ ವರುಷದ ಹರುಷ

    |

    ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿರುವ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಇಂದು ವಿಶೇಷವಾದ ದಿನ. ಅಮೆರಿಕದ ನಾರ್ತ್ ಕೆರೊಲಿನ ಮೇ 12 "ವಿಜಯ್ ಪ್ರಕಾಶ್ ದಿನ" ಎಂದು ಘೋಷಣೆ ಮಾಡಿ ಒಂದು ವರ್ಷವಾಗಿದೆ. ಇಂದು ವಿಜಯ್ ಪ್ರಕಾಶ್ ದಿನ ಆಚರಣೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಕನ್ನಡದ ಗಾಯಕನಿಗೆ ಶ್ರೇಷ್ಠ ಗೌರವ ಸಿಕ್ಕಿರುವುದು ಹೆಮ್ಮೆಯ ಸಂಗತಿ.

    Recommended Video

    ಮುಂಬೈನಲ್ಲಿರುವ ಕನ್ನಡಿಗರನ್ನು ಸ್ವಂತ ಖರ್ಚಿನಲ್ಲಿ ಕರ್ನಾಟಕಕ್ಕೆ ಕಳುಹಿಸಿದ ಬಾಲಿವುಡ್ ಸ್ಟಾರ್..? | Sonu Sood

    ಇಂದಿನ ದಿನವನ್ನು ನೆನಪಿಸಿಕೊಂಡಿರುವ ವಿಜಯ್ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ನಾರ್ತ್ ಕೆರೊಲಿನಾದ ವಿಜಯ್ ಪ್ರಕಾಶ್ ದಿನ, ಘೋಷಣೆಯಾಗಿ ಇಂದು ಒಂದು ವರ್ಷವಾಗಿದೆ. ಬ್ರಿಯಾನ್ ರಾಜ, ಮೇಯರ್ ವಿಲಿಯಂ, ಹಾರ್ಟ್ಸ್, ಮತ್ತು ಮೈಂಡ್ಸ್ ಗೆ ಪ್ರಾಮಾಣಿಕ ಧನ್ಯವಾದಗಳು" ಎಂದು ವಿಜಯ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

    'ಈ ಬಾಲಕ ಇವತ್ತಿನವರೆಗೂ ಹಾಡುತ್ತಲೇ ಇದ್ದಾನೆ': ಸ್ಟಾರ್ ಗಾಯಕನ ಅಪರೂಪದ ವಿಡಿಯೋ ಹಂಚಿಕೊಂಡ ಭಟ್ರು'ಈ ಬಾಲಕ ಇವತ್ತಿನವರೆಗೂ ಹಾಡುತ್ತಲೇ ಇದ್ದಾನೆ': ಸ್ಟಾರ್ ಗಾಯಕನ ಅಪರೂಪದ ವಿಡಿಯೋ ಹಂಚಿಕೊಂಡ ಭಟ್ರು

    It’s Been Year Today Since Proclamation Of ‘Vijay Prakash Day’ North Carolina

    ಕಳೆದ ವರ್ಷ ವಿಜಯ್ ಪ್ರಕಾಶ್ ಕಾನ್ಕಾರ್ಡ್ ನಲ್ಲಿ ಕಾರ್ಯಕ್ರಮ ನೀಡಿದ್ದರು. ಕನ್ನಡ ಗೀತೆಗಳನ್ನು ಹಾಡಿ ಅಲ್ಲಿನ ಕನ್ನಡಿಗರನ್ನು ರಂಜಿಸಿದ್ದರು. ವಿಜಯ್ ಪ್ರಕಾಶ್ ಕಂಚಿನ ಕಂಠಕ್ಕೆ ಫಿದಾ ಆದ ಅಲ್ಲಿನ ಮೇಯರ್ ವಿಲಿಯಂ ಸಿ, ಮೇ 12 ರಂದು ವಿಜಯ್ ಪ್ರಕಾಶ್ ಡೇ ಎಂದು ಘೋಷಣೆ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದರು.

    It’s Been Year Today Since Proclamation Of ‘Vijay Prakash Day’ North Carolina

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ್ ಪ್ರಕಾಶ್ "ಮರೆಯಲಾಗದ ದಿನ. ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಹರಿದು ಬಂದಿದ್ದರು. ಇಂಥದ್ದೊಂದು ಗೌರವ ನನಗೆ ಸಿಕ್ಕಿದ್ದು ತುಂಬಾ ಹೆಮ್ಮೆಯ ಸಂಗತಿ" ಎಂದು ಹೇಳಿದ್ದರು.

    English summary
    It’s been a year today since proclamation of ‘Vijay Prakash Day’ North Carolina.
    Tuesday, May 12, 2020, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X