'ತಿಥಿ' ನೋಡಿ ನಕ್ಕು-ನಕ್ಕು ಸುಸ್ತಾದ ಹಿಂದಿ ನಟ ಅಮೀರ್ ಖಾನ್

By Suneetha

ನಿರ್ದೇಶಕ ರಾಮ್ ರೆಡ್ಡಿ ಅವರು ನಟನೆಯ ಬಗ್ಗೆ ಏನೂ ಗೊತ್ತಿಲ್ಲದವರನ್ನು ಹಾಕಿಕೊಂಡು ಮಾಡಿದ್ದ 'ತಿಥಿ' ಸಿನಿಮಾ ದೇಶ ವಿದೇಶದಲ್ಲಿ ಸುದ್ದಿ ಮಾಡಿದ್ದು ಮಾತ್ರವಲ್ಲದೇ, ಇದೀಗ ಬಾಲಿವುಡ್ ಅಂಗಳದಲ್ಲೂ ಸುದ್ದಿ ಮಾಡುತ್ತಿದೆ.

ಹೌದು ಮೊನ್ನೆ ಮೊನ್ನೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಬಾಲಿವುಡ್ ನಟಿ ಕಲ್ಕಿ ಕೊಚ್ಲಿನ್ ಅವರು 'ತಿಥಿ' [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ] ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಅವರ ಸರದಿ.

'It's a little difficult to slot it into a genre, but it's really funny says Aamir Khan

'ಪಿ.ಕೆ' ಚಿತ್ರದ ಖ್ಯಾತಿಯ ನಟ ಅಮೀರ್ ಖಾನ್ ಅವರು ರಾಜ್ಯ ಪ್ರಶಸ್ತಿ ವಿಜೇತ 'ತಿಥಿ' ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಸಾಲು-ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ.[ಸೆಂಚುರಿ ಗೌಡರ 'ತಿಥಿ'ಗೆ ಮಾರು ಹೋದ ಬಾಲಿವುಡ್ ನಟಿ ಕಲ್ಕಿ]

'It's a little difficult to slot it into a genre, but it's really funny says Aamir Khan

'ತುಂಬಾ ದಿನಗಳ ನಂತರ ನಾನು ಒಂದು ಅತ್ಯಂತ ಅದ್ಭುತವಾದ ಸಿನಿಮಾ ನೋಡಿದೆ' ಎಂದು ಅಮೀರ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ.

'ವೃತ್ತಿಯಲ್ಲಿ ಕಲಾವಿದರಲ್ಲದವರ, ನಂಬಲಾರದಂತಹ ಅದ್ಭುತ ನಟನೆ ಮತ್ತು ತುಂಬಾ ತಮಾಷೆಯಾಗಿರುವ ಚಿತ್ರ 'ತಿಥಿ' ಎಂದು ಅಮೀರ್ ಖಾನ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.['ನಾನು ಎಷ್ಟು ಬಾರಿ ಬೇಕಾದರೂ 'ತಿಥಿ' ನೋಡಲು ಸಿದ್ಧ' ಎಂದವರಾರು?]

ಸೆಂಚುರಿ ಗೌಡರ ಸಾವಿನ ಕಥೆಯನ್ನು ಕೊಂಚ ಹಾಸ್ಯಭರಿತವಾಗಿ ನಿರ್ದೇಶಕ ರಾಮ್ ರೆಡ್ಡಿ ಅವರು ತಮ್ಮ 'ತಿಥಿ' ಸಿನಿಮಾದಲ್ಲಿ ತೋರಿಸಿದ್ದರು.

ಈರೇ ಗೌಡ ಅವರು ಸಂಭಾಷಣೆ ಬರೆದಿದ್ದ 'ತಿಥಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಮಂಡ್ಯ ಆಸು-ಪಾಸಿನವರೇ ನಟಿಸಿದ್ದು, ವೃತ್ತಿಯಲ್ಲಿ ಕಲಾವಿದರಲ್ಲದ ನಟ-ನಟಿಯರು ನಟಿಸಿದ್ದಾರೆ.

More from Filmibeat

English summary
Bollywood Actor Aamir Khan has applauded National Award-winning Kannada-language film Thithi, which released in India on Friday (May 6th). He says that 'Thithi' 'It's a little difficult to slot it into a genre, but it's really funny by Raam Reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X