For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್ ಕೊಟ್ಟರೆ ಅಚ್ಚರಿ ಪಡಬೇಡಿ.!

  |
  Ramya comeback to Sandalwood shortly. | Oneindia Kannada

  ಒಂದು ದಶಕ ಕನ್ನಡ ಚಿತ್ರರಂಗವನ್ನು ರಾಣಿಯಂತೆ ಆಳಿದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಇದೀಗ ಆಲ್ಮೋಸ್ಟ್ ನಾಪತ್ತೆ ಆಗಿದ್ದಾರೆ. ಸ್ಯಾಂಡಲ್ ವುಡ್ ನ ಲಕ್ಕಿ ಗರ್ಲ್ ಆಗಿದ್ದ ರಮ್ಯಾ ಮೇಡಂ ಗಾಂಧಿನಗರದ ಕಡೆ ಮುಖ ಮಾಡಿ ವರ್ಷಗಳೇ ಉರುಳಿವೆ.

  ವೃತ್ತಿ ಜೀವನ ಟಾಪ್ ಗೇರ್ ನಲ್ಲಿ ಸಾಗುವಾಗ ನಟಿ ರಮ್ಯಾ ದಿಢೀರ್ ಅಂತ ರಾಜಕೀಯಕ್ಕೆ ಧುಮುಕಿದರು. ಏಕ್ದಂ ಮಂಡ್ಯ ಸಂಸದೆ ಆಗಿ ಸಂಸತ್ ಭವನ ಪ್ರವೇಶ ಮಾಡಿದರು. ರಾಜಕೀಯದಲ್ಲೂ ರಮ್ಯಾ ಹವಾ ಬಲು ಜೋರು ಅಂತ ಅಭಿಮಾನಿಗಳು ಬಾಯಿ ಮೇಲೆ ಬೆರಳಿಡುವಾಗಲೇ, ಚುನಾವಣೆಯಲ್ಲಿ ರಮ್ಯಾ ಸೋತರು.

  ಬಳಿಕ ಲಂಡನ್ ಗೆ ಹಾರಿದ ರಮ್ಯಾ ಮೇಡಂ ಸ್ವಲ್ಪ ದಿನ ಭಾರತದ ಕಡೆ ತಲೆ ಹಾಕಲಿಲ್ಲ. ನಂತರ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ನ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ ರಮ್ಯಾ ಈಗ ಆ ಪೋಸ್ಟ್ ಗೂ ರಾಜೀನಾಮೆ ಕೊಟ್ಟಿದ್ದಾರೆ. ರಾಜಕೀಯ ಮತ್ತು ಸಿನಿಮಾ ಎರಡರಿಂದಲೂ ದೂರ ಉಳಿದಿರುವ ರಮ್ಯಾ ಮೇಡಂ ಸದ್ಯಕ್ಕೆ ಬ್ರೇಕಿಂಗ್ ನ್ಯೂಸ್ ಕೊಟ್ಟರೂ ಅಚ್ಚರಿ ಪಡಬೇಡಿ. ಯಾಕೆ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ರಮ್ಯಾ ಈಗ ಎಲ್ಲಿದ್ದಾರೆ.?

  ರಮ್ಯಾ ಈಗ ಎಲ್ಲಿದ್ದಾರೆ.?

  ರಾಜಕೀಯ ಜಂಜಾಟ ಮತ್ತು ಸಿನಿಮಾ ಶೂಟಿಂಗ್.. ಇವೆರಡರಿಂದಲೂ ಬ್ರೇಕ್ ಪಡೆದುಕೊಂಡಿರುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಫೋನ್.. ಇವೆರಡಕ್ಕೂ ಗುಡ್ ಬೈ ಹೇಳಿ ಹಾಯಾಗಿ ಕಾಲಕಳೆಯುತ್ತಿದ್ದಾರೆ ಮಂಡ್ಯದ ಮಾಜಿ ಸಂಸದೆ.

  ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ

  ದುಬೈನಲ್ಲಿ ಮದುವೆ ಆಗ್ಬಿಟ್ರಾ ರಮ್ಯಾ.?

  ದುಬೈನಲ್ಲಿ ಮದುವೆ ಆಗ್ಬಿಟ್ರಾ ರಮ್ಯಾ.?

  ರಮ್ಯಾ ದುಬೈನಲ್ಲಿ ಮದುವೆ ಆಗಿದ್ದಾರಂತೆ ಎಂಬ ಅಂತೆ-ಕಂತೆ ಸುದ್ದಿ ಇತ್ತೀಚೆಗಷ್ಟೇ ಗಾಂಧಿನಗರದಲ್ಲಿ ಗಿರಕಿ ಹೊಡೆದಿತ್ತು. ಇದೇ ಗಾಸಿಪ್ ಗೆ ರಮ್ಯಾ ಸ್ಪಷ್ಟನೆ ಕೊಟ್ಟಿರುವುದು ಹೀಗೆ - ''ಏನು ದುಬೈನಲ್ಲಿ ಮದುವೆನಾ.? ಆ ಫೋಟೋಗಳನ್ನ ನಾನೂ ನೋಡಬೇಕಲ್ಲಾ.? ಈ ಸುಳ್ಳು ಸುದ್ದಿಗೆ ಇಷ್ಟೊಂದು ಹೈಪ್ ಸಿಕ್ಕಿರುವುದು ನನಗೆ ಗೊತ್ತೇ ಇಲ್ಲ. ಯಾಕಂದ್ರೆ, ಸೋಷಿಯಲ್ ಮೀಡಿಯಾಗೆ ನಾನು ಗುಡ್ ಬೈ ಹೇಳಿದ್ದೇನೆ'' ಎಂದು ದಿನಪತ್ರಿಕೆಯೊಂದಕ್ಕೆ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ.

  'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.?'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.?

  ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ಯಾಕೆ.?

  ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ಯಾಕೆ.?

  ''ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ರಾಹುಲ್ ಗಾಂಧಿ ಅವರು ನನ್ನನ್ನ ಆಯ್ಕೆ ಮಾಡಿದಾಗ ನಾನು ದೊಡ್ಡದಾಗಿ ಅನೌನ್ಸ್ ಮಾಡಲಿಲ್ಲ. ಹಾಗೇ, ಅದೇ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿದಾಗ, ಅದನ್ನ ದೊಡ್ಡ ವಿಷಯವಾಗಿ ಪರಿಗಣಿಸಲಿಲ್ಲ'' ಎನ್ನುತ್ತಾರೆ ನಟಿ ಮತ್ತು ಮಾಜಿ ಸಂಸದೆ ರಮ್ಯಾ.

  ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾಗೆ ಗೇಟ್ ಪಾಸ್ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ರಮ್ಯಾಗೆ ಗೇಟ್ ಪಾಸ್

  ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಾರಾ ರಮ್ಯಾ.?

  ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಾರಾ ರಮ್ಯಾ.?

  ''ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇಲ್ಲಿಯವರೆಗೂ ರಾಜಕೀಯದಲ್ಲಿ ಬಿಜಿಯಿದ್ದ ಕಾರಣ, ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಇನ್ಮೇಲೆ ಒಪ್ಪಿಕೊಂಡರೂ ಆಶ್ಚರ್ಯ ಇಲ್ಲ. ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದರಲ್ಲಿ ಮಜಾ ಇದೆ'' ಎಂದು ಸಂದರ್ಶನದಲ್ಲಿ ರಮ್ಯಾ ಹೇಳಿದ್ದಾರೆ.

  ಹಾಗಾದ್ರೆ, ಬ್ರೇಕಿಂಗ್ ನ್ಯೂಸ್ ಗ್ಯಾರೆಂಟಿ

  ಹಾಗಾದ್ರೆ, ಬ್ರೇಕಿಂಗ್ ನ್ಯೂಸ್ ಗ್ಯಾರೆಂಟಿ

  ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿರುವ ರಮ್ಯಾ ಇದೀಗ ''ಕಮ್ ಬ್ಯಾಕ್ ಮಾಡುವುದರಲ್ಲಿ ಮಜಾ ಇದೆ'' ಅಂತ ಹೇಳಿರುವುದನ್ನು ನೋಡಿದರೆ ಸದ್ಯದಲ್ಲೇ ಸ್ಯಾಂಡಲ್ ವುಡ್ ಸಿನಿಮಾರಂಗದಲ್ಲಿ ರಮ್ಯಾ ಕಮ್ ಬ್ಯಾಕ್ ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕರೂ ಆಶ್ಚರ್ಯ ಇಲ್ಲ. ಮತ್ತೆ ನಟಿಸುವ ಇಚ್ಛೆ ವ್ಯಕ್ತಪಡಿಸಿರುವ ರಮ್ಯಾಗೆ ಉತ್ತಮ ಕಥೆ ಮತ್ತು ಪಾತ್ರ ಸಿಕ್ಕರೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ತುಂಬಾನೇ ಇದೆ.

  English summary
  It would fun to make a comeback in Sandalwood says Kannada Actress, EX MP, Congress Politician Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X