ಗರತಿ ಗೌರಮ್ಮನ ಗೆಟಪ್ ನಲ್ಲಿ ಮುಮೈತ್ ಖಾನ್

By ಅನಂತರಾಮು, ಹೈದರಾಬಾದ್

ಐಟಂ ಗರ್ಲ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಮುಮೈತ್ ಖಾನ್ ಈಗ ತಮ್ಮ ವೇಷ, ಭೂಷಣ ಬದಲಾಯಿಸಿದ್ದಾರೆ. ಹೀರೋಯಿನ್ ಗಳೆಲ್ಲಾ ಐಟಂ ಗರ್ಲ್ ಪಾತ್ರ ಮಾಡುತ್ತಿದ್ದರೆ ಐಟಂ ಹುಡುಗಿಯರು ಇನ್ನೇನು ಮಾಡಲಿಕ್ಕೆ ಸಾಧ್ಯ? ಮುಮೈತ್ ಖಾನ್ ಈಗ ತಮ್ಮ ವರಸೆ ಬದಲಾಯಿಸಿದ್ದಾರೆ.

ತಮ್ಮ ದೇಹದ ತೂಕವನ್ನು ಇಳಿಸಿಕೊಂಡಿರುವ ಮುಮೈತ್ ಖಾನ್ ಸದ್ಯಕ್ಕೆ ತೆಳ್ಳಗೆ ಬಳುಕುವ ಬಳ್ಳಿಯಂತಾಗಿದ್ದಾರೆ. ಗರತಿ ಗೌರಮ್ಮನ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕನ್ನಡದ ಒಂದೇ ಒಂದು ಚಿತ್ರ 'ಶೌರ್ಯ' ಚಿತ್ರದಲ್ಲಿ ಕುಣಿದಿದ್ದು ಬಿಟ್ಟರೆ ಮತ್ತೆ ಮುಮೈತ್ ಕನ್ನಡಕ್ಕೆ ಬರಲಿಲ್ಲ.

ಆದರೆ ಪಕ್ಕದ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಸಖತ್ ಬಿಜಿ ತಾರೆ. ಸದ್ಯಕ್ಕೆ ತೆಲುಗಿನ ಚಿತ್ರವೊಂದರಲ್ಲಿ ಮುಮೈತ್ ಗೆಟಪ್ ಬದಲಾಯಿಸಿದ್ದಾರೆ. ಈ ಚಿತ್ರದಲ್ಲಿ ಗುರುತೇ ಸಿಗದಷ್ಟು ಆಕೆ ಬದಲಾಗಿರುವುದು ವಿಶೇಷ. ಮುಮೈತ್ ಅವರ ಈ ಹೊಸ ಗೆಟಪ್ ನೋಡಿದವರು ಚಕಿತರಾಗಿದ್ದಾರೆ.

ಚಿತ್ರದಲ್ಲಿ ಅವರ ಪಾತ್ರ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಫೋಟೋ ಮಾತ್ರ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಮುಮೈತ್ ಅವರದು ಸೈಡ್ ರೋಲ್. ಆದರೂ ಈ ಗೆಟಪ್ ನಲ್ಲಿ ಕಾಣಿಸಿರುವುದು ಆಕೆಯ ಅಭಿಮಾನಿಗಳ ಪಾಲಿಗೆ ಕುತೂಹಲ ಮೂಡಿಸಿದೆ.

More from Filmibeat

English summary
Item Girl Mumaith Khan has gone for an image makeover for her upcoming Telugu release which stars Varun Sandesh and Nisha Agarwal in the lead. This traditional look of bold beauty is a revelation for sure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X